Advertisement

Reynolds; ನೀಲಿ ಪೆನ್ನಿನ ಕಥೆ ಇನ್ನೂ ಹಸುರು

07:21 AM Aug 26, 2023 | Team Udayavani |

ಮಣಿಪಾಲ: ಕೆಲವು ಬಾರಿ ಸರಳತೆಯೇ ಒಂದು ಉತ್ಪನ್ನವನ್ನು ಬಹುಕಾಲ ಪ್ರೀತಿಸುವಂತೆ ಮಾಡುತ್ತದೆ. ದೇಶದಲ್ಲಿ ಇಂಕ್‌ ಪೆನ್ನಿನ ಬಳಕೆ ಹಿಂದಕ್ಕೆ ಸರಿದು ಬಾಲ್‌ ಪಾಯಿಂಟ್‌ ಪೆನ್‌ ಮುನ್ನೆಲೆಗೆ ಬಂದಾಗ ಸುದೀರ್ಘ‌ ಕಾಲ ಜನರ ಮನ ಗೆದ್ದದ್ದು ರೇನಾಲ್ಡ್ಸ್ 045 ಫೈನ್‌ ಕಾರ್ಬರ್‌ ಪೆನ್‌. ಇದು ಈಗಲೂ ಜನಮಾನಸದಲ್ಲಿ ಉಳಿದಿದೆ ಎಂಬುದಕ್ಕೆ ಒಂದೆರಡು ದಿನಗಳಿಂದ ಎಕ್ಸ್‌(ಟ್ವಿಟರ್‌)ನಲ್ಲಿ ನಡೆಯುತ್ತಿರುವ ಚರ್ಚೆಗಳೇ ನಿದರ್ಶನ.

Advertisement

ಒಂದೆರಡು
ದಿನಗಳ ಹಿಂದೆ 90ಸ್‌ ಕಿಡ್‌
ಎಂಬವರು ಎಕ್ಸ್‌ ನಲ್ಲಿ, “ರೇನಾಲ್ಡ್ಸ್ 045 ಫೈನ್‌ ಕಾರ್ಬರ್‌ ಇನ್ನು ಮಾರುಕಟ್ಟೆಯಲ್ಲಿ ಸಿಗದು. ಒಂದು ಯುಗಾಂತ್ಯ’ ಎಂದು ಬರೆದಿದ್ದರು. ಇದು 46 ಸಾವಿರಕ್ಕೂ ಅಧಿಕ ಲೈಕ್ಸ್‌, ಸಾವಿರಕ್ಕೂ ಅಧಿಕ ಕಮೆಂಟ್‌ಗಳು, 5 ಸಾವಿರಕ್ಕೂ ಅಧಿಕ ರೀಪೋಸ್ಟ್‌ಗಳನ್ನು ಕಂಡಿದೆ.

90ರ ದಶಕದ ಬರವಣಿಗೆಯನ್ನು ನೆನಪಿಸುವ ಈ ಪೆನ್ನು ಗ್ರಾಹಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇಂದಿಗೂ ಬಳಸುವವರಿದ್ದಾರೆ. ಇದನ್ನು ಪ್ರೀತಿಸುವವರಿಗೆ, ಬಳಸುವವರಿಗೆ, ಅದರ ವಿಶೇಷ ನೆನಪನ್ನು ಹೊಂದಿರುವವರಿಗೆ ಈ ಟ್ವೀಟ್‌ ವಿಷಾದ ಉಂಟು ಮಾಡಿದ್ದರೆ ಅಚ್ಚರಿಯಿಲ್ಲ.

ರೇನಾಲ್ಡ್ಸ್
045 ಫೈನ್‌ ಕಾರ್ಬರ್‌
ಈಗಲೂ ಸಿಗುತ್ತಿದೆ!
ಅಮೆರಿಕ ಮೂಲದ ರೇನಾಲ್ಡ್ಸ್ ಕಂಪೆನಿ ನಿಜಕ್ಕೂ ಫೈನ್‌ ಕಾರ್ಬರ್‌ ಬಾಲ್‌ಪಾಯಿಂಟ್‌ ಪೆನ್ನಿನ ಉತ್ಪಾದನೆಯನ್ನು ನಿಲ್ಲಿಸಿದೆಯೇ? ಖಚಿತ ಉತ್ತರ ಗೊತ್ತಿಲ್ಲ. 90ಸ್‌ಕಿಡ್‌ನ‌ ಟ್ವೀಟ್‌ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜತೆಗೆ ಉತ್ಪಾದನೆ ಸ್ಥಗಿತಗೊಳಿಸುವುದನ್ನು ಖಚಿತಪಡಿಸಿಲ್ಲ.”ಈ ಪೆನ್ನು ಈಗಲೂ ಮಾರುಕಟ್ಟೆಯಲ್ಲಿ ಸಿಗುತ್ತಿದೆ’ ಎಂಬ ಟ್ವೀಟಿಗರೊಬ್ಬರ ಪ್ರತಿಕ್ರಿಯೆಗೆ ಉತ್ತರಿಸಿರುವ 90ಸ್‌ ಕಿಡ್‌, “ಇದು ಈಗಿರುವ ದಾಸ್ತಾನು ಖಾಲಿಯಾಗುವ ತನಕ ಮಾತ್ರ’ ಎಂದು ಉತ್ತರಿಸಿ ದ್ದಾರೆ. 045 ಫೈನ್‌ ಕಾರ್ಬರ್‌ ಉತ್ಪಾದನೆ ಸ್ಥಗಿತ ಗೊಳಿಸಿರುವ ಮಾಹಿತಿ ತನಗೆಲ್ಲಿಂದ ಲಭಿಸಿತು ಎಂಬ ಬಗ್ಗೆ 90ಸ್‌ ಕಿಡ್‌ ಉಲ್ಲೇಖೀಸಿಲ್ಲ.

045 ಫೈನ್‌ ಕಾರ್ಬರ್‌ ಉತ್ಪಾದನೆ ನಿಲ್ಲಿಸಿದೆ
ಎಂಬುದಕ್ಕೆ ಟ್ವೀಟಿಗರು ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ. “ನಾವು ಕೆಲವು ಪೆನ್ನುಗಳನ್ನು ಕಾಪಿಟ್ಟುಕೊಳ್ಳಬೇಕು. ಕೆಲವು ತಲೆಮಾರುಗಳ ಬಳಿಕ ಇವು ಅಮೂಲ್ಯ ಪುರಾತನ ವಸ್ತುಗಳಾಗಲಿವೆ’ ಎಂದಿದ್ದಾರೆ ಒಬ್ಬರು. “ಯಾಕಂತೆ? ಬಾಲ್ಯ ಕಾಲದ ಅನೇಕ ನೆನಪುಗಳ ಜತೆಗಿರುವ ಪೆನ್ನು ಇದು. ಈಗಲೂ ಅನೇಕ ಹೊಸ ಪೆನ್ನುಗಳಿಗಿಂತ ಇದೇ ಚೆನ್ನಾಗಿ ಬರೆಯುತ್ತದೆ’ ಎಂಬುದಾಗಿ ಇನ್ನೊಬ್ಬರು ಆಶ್ಚರ್ಯ ಸೂಚಿಸಿದ್ದಾರೆ. ಮಗದೊಬ್ಬರು, “ನಾನು ಬಳಸಿದ ಅತ್ಯುತ್ತಮ ಪೆನ್‌. ತುಂಬ ದಕ್ಷ ಮತ್ತು ಬಾಳಿಕೆ ಬರುವಂಥದ್ದು’ ಎಂದಿದ್ದಾರೆ. “ಶಾಲಾ ದಿನಗಳಲ್ಲಿ ಅನೇಕ ಬಾರಿ ಈ ಪೆನ್ನಿನಿಂದ ಆಟವಾಡಿ ಗೆದ್ದಿದ್ದೆ’ ಎಂದಿದ್ದಾರೆ ಮತ್ತೂಬ್ಬರು. “ಕೇಳಿ ಬೇಜಾರಾಯಿತು. ನನ್ನ 8ರಿಂದ 10ನೇ ತರಗತಿವರೆಗಿನ ಎಲ್ಲ ಪರೀಕ್ಷೆಗಳನ್ನು ಇದೇ ಪೆನ್ನಿನಲ್ಲಿ ಬರೆದಿದ್ದೆ. ಮುಂದೆ ಜೆಟ್ಟರ್‌ ಬಳಸತೊಡಗಿದರೂ ಕೆಲವೇ ದಿನಗಳಲ್ಲಿ ಹಳೆಯ ಪೆನ್ನಿಗೇ ಶರಣಾದೆ’ ಎಂದಿದ್ದಾರೆ ಮಗದೊಬ್ಬರು.

Advertisement

ಟ್ವೀಟಿಗರು ಏನೆಂದರು?
ಆದ್ರì ನೆನಪುಗಳುಈ ಪೆನ್ನಿನೊಂದಿಗೆ ಇವೆ.ಇಂಕ್‌ ಪೆನ್ನಾಗಿದ್ದರೆ ಶಾಯಿ ಕಲೆ ಆಗಿ ಕೆಟ್ಟು ಹೋಗಬಹುದಾಗಿದ್ದ
ಎಷ್ಟೋ ಜೇಬುಗಳನ್ನು ಈ ಪೆನ್ನು ಉಳಿಸಿಕೊಟ್ಟಿದೆ.
-ಎಕ್ಸ್‌ ಬಳಕೆದಾರ
ರೊಬ್ಬರು ಬರೆದದ್ದು.

ಅಮೆರಿಕ ಮೂಲದ ಕಂಪೆನಿ
ರೇನಾಲ್ಡ್ಸ್ ಅಮೆರಿಕ ಮೂಲದ ಬಾಲ್‌ ಪಾಯಿಂಟ್‌ ಪೆನ್‌ ತಯಾರಕ ಸಂಸ್ಥೆ. ಇದರ ಸ್ಥಾಪಕ ಮಿಲ್ಟನ್‌ ರೇನಾಲ್ಡ್ಸ್ 1945ರಲ್ಲಿ ಅರ್ಜೆಂಟೀನದ ಬ್ಯುನೋಸ್‌ ಐರಿಸ್‌ಗೆ ಹೋಗಿದ್ದಾಗ ಮೊದಲ ಬಾಲ್‌ಪಾಯಿಂಟ್‌ ಪೆನ್‌-ಬೈರೊ ಪೆನ್ನನ್ನು ಕಂಡು ಬೆರಗಾಗಿದ್ದರು. ಆಗ ಬಳಕೆಯಲ್ಲಿದ್ದದ್ದು ಇಂಕ್‌ ಪೆನ್ನುಗಳು ಮಾತ್ರ. ಅದೇ ವರ್ಷದ ಅಕ್ಟೋಬರ್‌ನಲ್ಲಿ ಬಾಲ್‌ ಪಾಯಿಂಟ್‌ ಪೆನ್‌ನ ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡ ರೇನಾಲ್ಡ್ಸ್ ಕಂಪೆನಿಯು ಅಮೆರಿಕದ ಮಾರುಕಟ್ಟೆಯಲ್ಲಿ ಮೊತ್ತಮೊದಲ ಬಾರಿಗೆ “ರೇನಾಲ್ಡ್ಸ್ ರಾಕೆಟ್‌’ ಬಾಲ್‌ಪಾಯಿಂಟ್‌ ಪೆನ್ನುಗಳನ್ನು ಪರಿಚಯಿಸಿತು.

ಈ ಪೆನ್‌ ಮಾರುಕಟ್ಟೆಗೆ ಬಂದ ಮೊದಲ ದಿನವೇ ಒಂದು ಲಕ್ಷ ಡಾಲರ್‌ ಮೌಲ್ಯದ ಪೆನ್ನುಗಳು ಮಾರಾಟವಾಗಿದ್ದವಂತೆ! ಆಗ ದಿನಕ್ಕೆ 30 ಸಾವಿರ ಪೆನ್ನುಗಳನ್ನು ಉತ್ಪಾದಿಸುವಷ್ಟು ಬೇಡಿಕೆ ಇತ್ತು.

 

Advertisement

Udayavani is now on Telegram. Click here to join our channel and stay updated with the latest news.

Next