Advertisement
ಗೋವಾ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಇದರಿಂದಾಗಿಯೇ ಗೋವಾ ರಾಜ್ಯದಲ್ಲಿ ವರ್ಷದ 365 ದಿನವೂ ದೇಶ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ವಿಶೇಷವಾಗಿ ಸಾಹಸಿ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು 2012ರಿಂದ ಗೋವಾ ಪ್ರವಾಸೋದ್ಯಮ ವಿಕಾಸ ಮಹಾಮಂಡಳವು ಮಹಾದಾಯಿ ನದಿಯಲ್ಲಿ ವೈಟ್ ವಾಟರ್ ರ್ಯಾಪ್ಟಿಂಗ್ ಆಯೋಜಿಸುತ್ತಿದೆ. ಪ್ರತಿವರ್ಷ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಈ ರ್ಯಾಪ್ಟಿಂಗ್ ಆಯೋಜಿಸಲಾಗುತ್ತದೆ. ರ್ಯಾಪ್ಟಿಂಗ್‌ಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2015ರಲ್ಲಿ 1200, 2016 ರಲ್ಲಿ 1700 ಪ್ರವಾಸಿಗರು ಪಾಲ್ಗೊಂಡಿದ್ದರು. ಕಳೆದ ಸುಮಾರು ಮೂರು ವರ್ಷಗಳಿಂದ ಗೋವಾದಲ್ಲಿ ಮಳೆಯ ಸರಾಸರಿ ಪ್ರಮಾಣ ಕಡಿಮೆಯಾಗುತ್ತಿದೆ. ಮಹಾದಾಯಿ ರ್ಯಾಪ್ಟಿಂಗ್‌ಗೆ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುವುದು ಆವಶ್ಯವಾಗಿದೆ. ಹೀಗಿದ್ದರೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2016ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ರ್ಯಾಪ್ಟಿಂಗ್‌ನಲ್ಲಿ ಪಾಲ್ಗೊಂಡ ಪ್ರವಾಸಿಗರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ ಎಂದು ಜೋನ್ ಪ್ಯಾಲಾರ್ಡ್ ಮಾಹಿತಿ ನೀಡಿದರು.