Advertisement

ಧರ್ಮಸ್ಥಳ ಸಂಸ್ಥೆಯಿಂದ ಉತ್ತಮ ಸಮಾಜ ನಿರ್ಮಾಣ

08:25 PM Dec 24, 2019 | Lakshmi GovindaRaj |

ಗುಂಡ್ಲುಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಜಿಲ್ಲೆ ಮತ್ತು ತಾಲೂಕಿನಾದ್ಯಂತ ಹತ್ತು ಹಲವು ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದೆ ಎಂದು ಎಸ್‌.ಕೆ.ಡಿ.ಆರ್‌.ಡಿ.ಪಿಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು. ಪಟ್ಟಣದ ಶಿವಶಕ್ತಿ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಯೋಜನಾ ಕಚೇರಿಯಲ್ಲಿ ನೂತನ ವರ್ಷದ ಡೈರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

Advertisement

150ಕ್ಕೂ ಹೆಚ್ಚು ಕೃಷಿ ಅಧ್ಯಯನ ತರಬೇತಿ: ಈ ತಾಲೂಕಿನ ವ್ಯಾಪ್ತಿಯಲ್ಲಿ 3075 ಪ್ರಗತಿಬಂಧು ಸಂಘಗಳನ್ನು ರಚಿಸಿಕೊಂಡು ಸಹ್ರಸಾರು ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಕೃಷಿ ಅಧ್ಯಯನ ತರಬೇತಿಗಳು, 39ಕ್ಕೂ ಹೆಚ್ಚು ನಾಗರಿಕ ಪ್ರಜ್ಞಾ ಕಾರ್ಯಗಳನ್ನು ನಡೆಸಲಾಗಿದೆ ಎಂದರು.

ಸಹಾಯ ಧನ ವಿತರಣೆ: ಸದಸ್ಯರ ಹಿತದೃಷ್ಠಿಯಿಂದ 1.40 ಕೋಟಿ ರೂಪಾಯಿಗೂ ಹೆಚ್ಚು ಪ್ರಗತಿ ನಿಧಿಯನ್ನು ವಿತರಿಸಲಾಗಿದೆ. 46 ನಿರ್ಗತಿಕ ಮಾಸಾಶನವನ್ನು ಸಂಸ್ಥೆಯು ಮಾನವೀಯತೆಯ ದೃಷ್ಠಿಯಲ್ಲಿ ನೀಡಲಾಗುತ್ತಿದೆ. ತಾಲೂಕಿನ ಹಾಲಿನ ಡೇರಿ ಕಟ್ಟಡಗಳ ನಿರ್ಮಾಣಕ್ಕಾಗಿ ಸಹಾಯ ಧನವಾಗಿ ಸುಮಾರು 5 ಲಕ್ಷ ರೂಪಾಯಿಗಳನ್ನು ಈಗಾಗಲೇ ವಿತರಿಸಲಾಗಿದೆ. ಇದಲ್ಲದೇ ಹೈನುಗಾರಿಕೆ, ಕುರಿ ಸಾಕಾಣಿಕೆ ಮತ್ತಿತರೆ ಉಪ ಕಸುಬಿಗಾಗಿ 1.20 ಲಕ್ಷ ರೂಪಾಯಿಗಳನ್ನು ಮತ್ತು ಕೃಷಿ ಸಲಕರಣೆಗಾಗಿ 90 ಸಾವಿರ ರೂಪಾಯಿಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಸ್ವಚ್ಛತೆಗೆ ಆದ್ಯತೆ ನೀಡಲು ತರಬೇತಿ: ಮಹಿಳೆಯರಿಗೆ ವಿಶೇಷವಾಗಿ ಜ್ಞಾನವಿಕಾಸ ಯೋಜನೆಯಡಿಯಲ್ಲಿ ಕಾನೂನು ಅರಿವು ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವ ತರಬೇತಿ ಶಿಬಿರ ಮತ್ತು ಹತ್ತು ಹಲವು ಧಾರ್ಮಿಕ ಸಮಾರಂಭವನ್ನು ಹಮ್ಮಿಕೊಳ್ಳುವುದರೊಂದಿಗೆ ಸೋಲಾರ್‌ನ ಉಪಯೋಗ ಮತ್ತು ಅದರ ಲಾಭಗಳನ್ನು ತಿಳಿಸಿಕೊಡಲಾಗಿದೆ. ಇದೇ ರೀತಿಯಾಗಿ ಮುಂಬರುವ ವರ್ಷಗಳಲ್ಲಿಯೂ ಸಹ ಮತ್ತಷ್ಟು ಉತ್ತಮವಾಗಿ ಧರ್ಮಸ್ಥಳ ಸಂಸ್ಥೆಯ ಜನರ ನಾಡಿಮಿಡಿತವನ್ನು ಅರಿವು ಜನಾಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌.ಕೆ.ಡಿ.ಆರ್‌.ಡಿ.ಪಿ ತಾಲೂಕು ಯೋಜನಾಧಿಕಾರಿ ಶಿವಪ್ರಸಾದ್‌ ಮಾತನಾಡಿ, ಡಾ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಸಂಘವು ಅತ್ಯುತ್ತವವಾಗಿ ಬಡವರ, ಕೃಷಿಕರ ಮತ್ತು ಎಲ್ಲಾ ವರ್ಗದವರ ಹಿತಕಾಪಾಡಲು ಶ್ರಮಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕ ನವೀನ್‌ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next