“ಹರೀಶ ವಯಸ್ಸು 36′ – ಹೀಗೊಂದು ಸಿನಿಮಾ ಸದ್ದಿ ಲ್ಲದೇ ಆರಂಭ ವಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಮೊದಲ ಹಂತ ವಾಗಿ ಚಿತ್ರದ ಟ್ರೇಲರ್ ಬಿಡು ಗಡೆ ಮಾಡಿದೆ ಚಿತ್ರತಂಡ. ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತ ವಾ ಗುವ ಮೂಲಕ ಚಿತ್ರ ತಂಡದ ಮೊಗದಲ್ಲಿ ನಗು ಮೂಡಿದೆ. ಗುರುರಾಜ್ ಜೇಷ್ಠ ಈ ಚಿತ್ರದ ನಿರ್ದೇಶಕರು.
ಸಿನಿಮಾದ ಟೈಟಲ್ ಈಗಾಗಲೇ ಕುತೂಹಲ ಹುಟ್ಟಿಸಿದೆ. ಹೀಗಿರುವಾಗ ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಸಹಜ. ಅದಕ್ಕೆ ಉತ್ತರ ಇದೊಂದು ಮದುವೆ ಕಥೆ. ಹೌದು, ಯುವಕನೋರ್ವನಿಗೆ ಮದುವೆಗೆ ಹುಡುಗಿ ಹುಡುಕುವ ಕಥೆಯನ್ನು ಮಾಡಿಕೊಂಡಿದ್ದಾರೆ ನಿರ್ದೇಶಕ ಗುರುರಾಜ್.
ಮೂವತ್ತಾರು ವಯಸ್ಸಿನ ಹುಡುಗ ಹೆಣ್ಣು ಹುಡುಕುವ ವೇಳೆ ಹೇಗೆ ಚಡಪಡಿಸುತ್ತಾನೆ, ಆತನಿಗಾಗುವ ಅವಮಾನವೇನು, ಮುಂದೆ ಆತನಿಗೆ ಹುಡುಗಿ ಸಿಗುತ್ತಾಳಾ ಎಂಬ ಅಂಶದೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದಾರೆ.
ಈಗ “ಹರೀಶ ವಯಸ್ಸು 36′ ಚಿತ್ರದಲ್ಲಿ ಪಕ್ಕಾ ಮಂಗಳೂರು ಕನ್ನಡವನ್ನೇ ಬಳಸಿದೆ. ಈ ಹಿಂದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅಧ್ಯಾಪಕರಾಗಿ ನಟಿಸಿದ್ದ ಯೋಗೀಶ್ ಈ ಚಿತ್ರದ ನಾಯಕರಾದರೆ ಶ್ವೇತಾ ಅರೆಹೊಳೆ ನಾಯಕಿ. ಉಳಿದಂತೆ ಹಿರಿಯ ನಟ ಉಮೇಶ್, ಪ್ರಕಾಶ್ ತುಮಿನಾಡು ಸೇರಿದಂತೆ ಅನೇಕರು ನಟಿಸಿದ್ದಾರೆ.