Advertisement
ಕುಂದಾಪುರದಲ್ಲಿ ಹೆಚ್ಚುಕುಂದಾಪುರ ತಾಲೂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆ ಯಾಗುತ್ತಿದೆ. ಇಲ್ಲಿಯವರೆಗೆ 18,593 ಅರ್ಜಿ ಸಲ್ಲಿಕೆಯಾಗಿದ್ದು, 16,584 ಜನರಿಗೆ ಬಾಂಡ್ ವಿತರಣೆಯಾಗಿದೆ. ಉಡುಪಿಯಲ್ಲಿ 5,745, ಕಾರ್ಕಳದಲ್ಲಿ 5,497, ಬ್ರಹ್ಮಾವರದಲ್ಲಿ 9,580 ಅರ್ಜಿಗಳು ಸಲ್ಲಿಕೆಯಾಗಿವೆ.
ಯೋಜನೆಯಡಿ ಫಲಾನುಭವಿಯ ತಂದೆ ಮೃತಪಟ್ಟರೆ ಹೆಣ್ಣು ಮಗುವಿಗೆ ಬಾಂಡ್‌ನ ಶೇ. 75ರಷ್ಟು ಮೊತ್ತ ಸಿಗು ತ್ತದೆ. ಉಡುಪಿ ಜಿಲ್ಲೆಯಲ್ಲಿ ಡೆತ್ ಕ್ಲೇಮ್‌ಗೆ 447 ಜನರು ಅರ್ಜಿ ಸಲ್ಲಿಸಿ ದ್ದಾರೆ. ಉಡುಪಿ 54, ಕುಂದಾಪುರ 108, ಬ್ರಹ್ಮಾವರ 86, ಕಾರ್ಕಳದಲ್ಲಿ 50 ಫಲಾನುಭವಿಗಳು ಸೇರಿದಂತೆ ಒಟ್ಟು 298 ಅರ್ಜಿಗಳಿಗೆ ಹಣ ಪಾವತಿಯಾಗಿದೆ. 11 ಸಾವಿರ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ
2006ರಿಂದ 2008ರ ಜು. 31 ರೊಳಗೆ 11,093 ಮಂದಿ ಯೋಜನೆ ಯಡಿ ನೋಂದಾ ಯಿಸಿ ಕೊಂಡಿದ್ದಾರೆ. ಅವರಿಗೆ ಸರಕಾರದಿಂದ ವಾರ್ಷಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ ನೋಂದಾ ಯಿಸಿಕೊಂಡವರಿಗೆ ಸರಕಾರ 10,000 ರೂ. ಠೇವಣಿಯಿ ರಿಸಿದ್ದು, 18 ವರ್ಷ ಪೂರ್ಣಗೊಂಡ ಅನಂತರ ಹೆಣ್ಣು ಮಕ್ಕಳಿಗೆ 34,365 ರೂ. ದೊರಕಲಿದೆ.
Related Articles
ಬಡತನ ರೇಖೆಗಿಂತ ಕೆಳಗಿರುವ, ಪಡಿತರ ಚೀಟಿ ಹೊಂದಿರುವ ಕುಟುಂಬದ ಎರಡು ಹೆಣ್ಣು ಮಕ್ಕಳು
ಭಾಗ್ಯಲಕ್ಷ್ಮೀ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಲು ಅರ್ಹ ರಾಗಿರುತ್ತಾರೆ. ನೋಂದಣಿಯಾದ ಕುಟುಂಬದಲ್ಲಿನ ಮೊದಲ ಹೆಣ್ಣು ಮಗುವಿನ ಹೆಸರಲ್ಲಿ 19,300 ರೂ., ಎರಡನೇ ಹೆಣ್ಣು ಮಗುವಿನ ಹೆಸರಲ್ಲಿ 18,350 ರೂ. ಮೊತ್ತವನ್ನು ಸರಕಾರ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ಪ್ರಾರಂಭಿಕ ಠೇವಣಿ ಇಡುತ್ತದೆ. 18 ವರ್ಷ ಪೂರ್ಣಗೊಂಡ ಅನಂತರ
ಹೆಣ್ಣು ಮಕ್ಕಳು 1 ಲ.ರೂ. ಪಡೆಯ ಬಹುದು. ಆರ್ಥಿಕ ಸಹಾಯವನ್ನು ಎಲ್‌ಐಸಿ ಸಹಯೋಗದೊಂದಿಗೆ ವಿತರಿಸಲಾಗುತ್ತಿದೆ.
Advertisement
ತ್ತೈಮಾಸಿಕ ಅನುದಾನಫಲಾನುಭವಿಗಳ ನೋಂದಣಿ ಆಧಾರದ ಮೇಲೆ ಪ್ರತಿ ತ್ತೈಮಾಸಿಕಕ್ಕೆ ಅನುದಾನವನ್ನು ಎಲ್‌ಐಸಿಗೆ ನೀಡಿ ಬಾಂಡ್ ಮುದ್ರಿಸಿ ಫಲಾನುಭವಿಗಳಿಗೆ ನೀಡಲಾಗುತ್ತದೆ. ಹೆಣ್ಣು ಮಗು (ಫಲಾನುಭವಿ) 15ನೇ ವರ್ಷ ತಲು
ಪಿದ ಅನಂತರ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚುವರಿ ವ್ಯಾಸಂಗ ಮಾಡಲು ಇಚ್ಛಿಸಿದಲ್ಲಿ ನಿಶ್ಚಿತ ಠೇವಣಿ ಬಾಂಡ್ ಅನ್ನು ಅಂಗೀಕೃತ ಬ್ಯಾಂಕ್‌ಗಳಲ್ಲಿ ಅಡಮಾನವಿರಿಸಿ ಗರಿಷ್ಠ 50,000 ರೂ. ಸಾಲ ಪಡೆಯಬಹುದು. ತಾಂತ್ರಿಕ ಸಮಸ್ಯೆಯಿಂದ ಬಾಂಡ್ ವಿತರಣೆ ವಿಳಂಬ
ಭಾಗ್ಯಲಕ್ಷ್ಮೀ ಬಾಂಡ್‌ಗಳು ಸಕಾಲದಲ್ಲಿ ದೊರಕುತ್ತಿಲ್ಲ ಎನ್ನುವ ಆರೋಪವಿದೆ. ಆದರೆ ಇಲಾಖೆ ಅಧಿಕಾರಿ ನೀಡುವ ಮಾಹಿತಿ ಪ್ರಕಾರ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಭಾಗ್ಯ ಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸರಿಯಾದ ಸಮಯದಲ್ಲಿ ಬಾಂಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
– ಗ್ರೇಸಿ ಗೊನ್ಸಾಲ್ವಿಸ್, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ದ.ಕ. ಜಿಲ್ಲೆಯಲ್ಲಿ ಸಕಾಲದಲ್ಲಿ ಬಾಂಡ್ ವಿತರಣೆಯಾಗುತ್ತಿದೆ.
ಸರಕಾರ ಫಲಾನುಭವಿಗಳ ನೋಂದಣಿ ಆಧಾರದ ಮೇಲೆ ಪ್ರತಿ ತ್ತೈಮಾಸಿಕಕ್ಕೆ ಅನುದಾನವನ್ನು ಎಲ್‌ಐಸಿ ಸಂಸ್ಥೆಗೆ ನೀಡಿ ಬಾಂಡ್ ಮುದ್ರಿಸಿ ಫಲಾನುಭವಿಗಳಿಗೆ ನೀಡುತ್ತಿದೆ.
– ಸುಂದರ ಪೂಜಾರಿ,
ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ