Advertisement

ವಿವಿಧೆಡೆಗಳಲ್ಲಿ ಉತ್ತಮ ಮಳೆ: ಸಿಡಿಲು ಬಡಿದು ಹಾನಿ

08:58 AM May 15, 2020 | Sriram |

ಬೆಳ್ತಂಗಡಿ/ ಪುತ್ತೂರು/ಸುಳ್ಯ: ಕರಾವಳಿಯ ವಿವಿಧೆಡೆ ಬುಧವಾರ ಅಪರಾಹ್ನ ಮಳೆ ಸುರಿದಿದೆ. ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿನಾದ್ಯಂತ ಗುಡುಗು, ಮಿಂಚು ಸಹಿತ ಒಂದು ತಾಸಿಗೂ ಅಧಿಕ ಮಳೆಯಾಗಿದೆ. ಕೆಲ ವೆಡೆ ಸಿಡಿಲು ಬಡಿದು ಹಾನಿಯಾಗಿದೆ.

Advertisement

ಉಜಿರೆ, ಧರ್ಮಸ್ಥಳ, ಮುಂಡಾಜೆ, ಕಾಯರ್ತೋಡಿ, ಕಡಂಬಳ್ಳಿ, ಮೂಲಾರು, ಕಲ್ಲಾರ್ಯ, ಕೊಡಂಗೆ ಕಲ್ಮಂಜ, ಬೆಳ್ತಂಗಡಿ, ಗುರುವಾಯನಕೆರೆ, ಮದ್ದಡ್ಕ, ಮಡಂತ್ಯಾರು, ಮುಂಡಾಜೆ, ಕೊಯ್ಯೂರು, ನಾರಾವಿ, ಅಳದಂಗಡಿ, ಕಡಿರುದ್ಯಾವರ ಪರಿಸರದಲ್ಲಿ ಗಾಳಿ ಮಳೆಯಾಗಿದೆ. ಗುರಿಪ್ಪಳ್ಳ ಕನ್ಯಾಡಿ, ಸೋಮಂತಡ್ಕ, ನೆರಿಯ ಮೊದಲಾದೆಡೆ ತುಂತುರು ಮಳೆಯಾಯಿತು.

ಮೂಡುಬಿದಿರೆಯಲ್ಲೂ ಅಪರಾಹ್ನ ಸುಮಾರು 20 ನಿಮಿಷ ಹದವಾದ ಮಳೆ ಸುರಿಯಿತು. ಮಂಗಳೂರು ತಾಲೂಕಿನ ವಿವಿಧೆಡೆ ಕೂಡ ಮಳೆಯಾಗಿದೆ. ಬಜಪೆ ಪರಿಸದಲ್ಲಿ ಗಾಳಿ ಸಹಿತ ಮಳೆ ಸುರಿದಿದೆ.

ಕಾಸರಗೋಡು ಜಿಲ್ಲೆಯ ಬದಿಯಡ್ಕ, ಮುಳ್ಳೇರಿಯ, ಬೆಳ್ಳೂರು, ಪೆರ್ಲ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ.

ಸರ್ವೆ: ಸಿಡಿಲು ಬಡಿದು ಕರು ಸಾವು
ಸವಣೂರು: ಬುಧವಾರ ಸಂಜೆ ಸಿಡಿಲು ಬಡಿದು ಮನೆಗೆ ಹಾನಿಯಾಗಿ, ಕೊಟ್ಟಿಗೆ ಯಲ್ಲಿದ್ದ ಕರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕರುಂಬಾರಿನಲ್ಲಿ ಸಂಭವಿಸಿದೆ. ವೀರಪ್ಪ ಗೌಡ ಕರುಂಬಾರು ಅವರ ಮನೆಗೆ ಸಿಡಿಲು ಬಡಿದಿದೆ. ಮನೆಯ ವಯರಿಂಗ್‌ ಸಂಪೂರ್ಣ ಸುಟ್ಟುಹೋಗಿದ್ದು, ವಿದ್ಯುತ್‌ ಉಪಕರಣಗಳಿಗೂ ಹಾನಿಯಾಗಿದೆ.

Advertisement

ಉಪ್ಪಿನಂಗಡಿ: ಸಿಡಿಲು ಬಡಿದು ಹಾನಿ
ಉಪ್ಪಿನಂಗಡಿ: ಇಲ್ಲಿನ ರಾಮನಗರದಲ್ಲಿ ಬುಧವಾರ ಸಂಜೆ ಲೀಲಾವತಿ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಶಾರ್ಟ್‌ ಸರ್ಕ್ನೂಟ್‌ ಉಂಟಾಗಿ ವಿದ್ಯುತ್‌ ಸಂಪರ್ಕಕ್ಕೆ ಹಾನಿಯಾಗಿದೆ. ಘಟನೆಯ ವೇಳೆ ಮನೆಯಲ್ಲಿ 5 ಮಂದಿದ್ದು, ಲೀಲಾವತಿ ಅವರು ಸಿಡಿಲಾಘಾತಕ್ಕೆ ಸಿಲುಕಿ ಕೆಲವು ಕಾಲ ಪ್ರಜ್ಞೆ ಕಳೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next