Advertisement
ಬೆಳ್ತಂಗಡಿಯ ಬಂದಾರು, ಧರ್ಮ ಸ್ಥಳ, ಉಜಿರೆ, ಗೇರುಕಟ್ಟೆ, ಉರುವಾಲು, ತಣ್ಣೀರುಪಂಥ ಬಾಯಾರು, ಪುಣಚಮೊದಲಾದೆಡೆ ಉತ್ತಮ ಮಳೆಯಾಗಿದೆ.
ಉಡುಪಿಯಲ್ಲಿ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣದಿಂದ ಕೂಡಿದ್ದು ಸಂಜೆ ವೇಳೆಗೆ ಉಡುಪಿ, ಮಲ್ಪೆ,ಬ್ರಹ್ಮಾವರ ಸುತ್ತಮುತ್ತ, ಕಾರ್ಕಳ ತಾಲೂಕಿನ ವಿವಿಧೆಡೆ ಗುಡುಗು, ಸಹಿತಮಳೆಯಾಗಿದೆ. ಮಲ್ಪೆಯಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯಿಂ ದಾಗಿ ಮಲ್ಪೆ ಮುಖ್ಯರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಲ ಕೊಲ್ಲಿ ಭಾಗದಲ್ಲಿ ಶುಕ್ರವಾರ ಬೆಳಗ್ಗಿನ ವೇಳೆ ವಾಯುಭಾರ ಕುಸಿತ ಉಂಟಾಗಿದೆ. ಮುಂದಕ್ಕೆ ಇದು ಉತ್ತರದತ್ತ ತಿರುಗಲಿದ್ದು, ಬಲಪಡೆಯುತ್ತಾ ಚಂಡಮಾರುತವಾಗಿ ಬದಲಾಗಿ ಆಂಧ್ರ-ಒಡಿಶಾ ತೀರದತ್ತ ತೆರಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Related Articles
Advertisement
ಎಲ್ಲೋ ಅಲರ್ಟ್ಹವಾಮಾನ ಇಲಾಖೆಯು ಕರಾವಳಿ ಯಲ್ಲಿ ಎಲ್ಲೋ ಅಲರ್ಟ್ ಘೋಷಿಸಿದೆ. ಕನಕಮಜಲು: ತಡೆಗೋಡೆ ಕುಸಿತ
ಸುಳ್ಯ: ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ತಡೆಗೋಡೆ ಕುಸಿದು ಅಂಗಡಿಯೊಳಗೆ ನೀರು ನುಗ್ಗಿರುವ ಘಟನೆ ಗುರುವಾರ ಸಂಭವಿಸಿದೆ. ಕನಕಮಜಲಿನ ಶ್ರೀ ನರಿಯೂರು ರಾಮಣ್ಣ ಗೌಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ತಡೆಗೋಡೆ ಕುಸಿದಿದ್ದು, ಮುಂಭಾಗದಲ್ಲಿರುವ ಅಂಗಡಿಯೊಳಗೆ ಮಳೆ ನೀರು ನುಗ್ಗಿದ ಪರಿಣಾಮ ಹಲವಾರು ಅಡಿಕೆ ಗೋಣಿಚೀಲ, ಕರಿಮೆಣಸು ನೆನೆದು ಅಂದಾಜು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ತಡೆಗೋಡೆ ಕುಸಿತದಿಂದ ಸಮೀಪದಲ್ಲಿದ್ದ ಗುಡ್ಡಪ್ಪ ಗೌಡ ದೇವರಗುಂಡ ಅವರ ಕಾರು ಶೆಡ್‌ಗೆ ಹಾನಿಯಾಗಿದೆ. ಹಮೀದ್ ಹಾಜಿ ಅವರ ಅಂಗಡಿಗೂ ಮಳೆ ನೀರು ನುಗ್ಗಿದೆ. ಕಾರ್ಕಳ: ತೆಂಗಿನ ಮರ ಬಿದ್ದು ಮನೆಗೆ ಹಾನಿ
ಕಾರ್ಕಳ: ತಾಲೂಕಿನಲ್ಲಿ ಶುಕ್ರವಾರ ಸಾಯಂಕಾಲ ಗುಡುಗು ಮಿಂಚು ಸಹಿತ ಭಾರಿ ಗಾಳಿ ಮಳೆಯಾಗಿದೆ. ಕಸಬಾ ಗ್ರಾಮದ ಬಂಗ್ಲೆ ಗುಡ್ಡೆಯ ಕತಿಜಾ ಬಾನು ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. 75,000 ರೂ. ನಷ್ಟ ಅಂದಾಜಿಸಲಾಗಿದೆ. ನಗರದ ಸರ್ವಜ್ಞ ವೃತ್ತದಿಂದ ಪೇಟೆಗೆ ಗೋಗುವ ದಾರಿಯ ಪಿಡಬುÉ Âಡಿ ಕ್ವಾಟ್ರಸ್ ಕಟ್ಟಡದ ಮೇಲೆ ಅಡಿಕೆ ಮರ ಬಿದ್ದಿದೆ. ಬಜಗೋಳಿ, ಮಾಳ, ನಕ್ತೆ, ಬೈಲೂರು, ಪೆರ್ವಾಜೆ ಸೇರಿದಂತೆ ತಾಲೂಕಿನೆಲ್ಲಡೆ ಗಾಳಿ ಮಳೆಯಾಗಿದ್ದು ವಿದ್ಯುತ್, ದೂರವಾಣಿ ಸೇವೆಗಳಲ್ಲಿ ವ್ಯತ್ಯಯವಾಗಿದೆ.