Advertisement
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಧರ್ಮಸ್ಥಳ, ಗುರುವಾಯನಕೆರೆ, ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕಿನ ಗ್ರಾಮಾಂತರ ಪ್ರದೇಶಗಳು, ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣ ಇತ್ತು.
ಉಡುಪಿ ಜಿಲ್ಲೆಯಾದ್ಯಂತ ರವಿವಾರ ಸಾಧಾರಣ ಮಳೆಯಾಗಿದೆ. ಕಾರ್ಕಳ, ಶಿರ್ವ, ಸಿದ್ದಾಪುರ, ಪಡುಬಿದ್ರಿ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಕಾಪು, ಕಟಪಾಡಿ, ಕುಂದಾಪುರ, ಬೈಂದೂರು ಭಾಗಗಳಲ್ಲಿ ಸಂಜೆ ಅನಂತರ ತುಸು ಮಳೆ ಸುರಿದಿದೆ. ಉಡುಪಿ ನಗರದಲ್ಲಿ ಮಳೆಯ ಪ್ರಮಾಣ ಕಡಿಮೆಯಿತ್ತು. ಸಂಜೆಯ ಬಳಿಕ ಮೋಡಕವಿದ ವಾತಾವರಣವಿದ್ದು, ತುಂತುರು ಮಳೆಯಾಯಿತು. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
Related Articles
ಕರಾವಳಿಯಲ್ಲಿ ಕೆಲವು ದಿನಗಳಿಂದ ಹಗಲು ಚೆನ್ನಾಗಿ ಬಿಸಿಲು ಇದ್ದು, ಸಂಜೆಯ ಬಳಿಕ ಮತ್ತು ರಾತ್ರಿ ಮಿಂಚು, ಸಿಡಿಲಿನ ಸಹಿತ ಮಳೆ ಸುರಿಯುತ್ತಿದೆ. ರವಿವಾರವೂ ಸಂಜೆಯ ಬಳಿಕವೇ ಸಿಡಿಲಿನ ಅಬ್ಬರ ಜೋರಾಗಿತ್ತು. ಉಡುಪಿ ಜಿಲ್ಲೆಯ ಹೆಬ್ರಿ ಭಾಗದಲ್ಲಿ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಭಾರೀ ಸಿಡಿಲು ಸಹಿತ ಮಳೆ ಆರಂಭವಾಗಿದ್ದು, ವಿದ್ಯುತ್ ಕೈಕೊಟ್ಟ ಕಾರಣ ಸುತ್ತಮುತ್ತಲಿನ ಪ್ರದೇಶಗಳು ಕತ್ತಲಿನಲ್ಲಿ ಮುಳುಗಿದ್ದವು. ಇದೇರೀತಿ ಸಿದ್ದಾಪುರ ಪರಿಸರದಲ್ಲಿಯೂ ಸಿಡಿಲಬ್ಬರ ಜೋರಾಗಿತ್ತು.
Advertisement
ನೂಜಿಬಾಳ್ತಿಲ: ಅಂಗಡಿಗೆ ನೀರುನೂಜಿಬಾಳ್ತಿಲ ಪರಿಸರದಾದ್ಯಂತ ರವಿವಾರ ಸಂಜೆ ಒಂದು ತಾಸು ಗುಡುಗು ಸಹಿತ ಭಾರೀ ಮಳೆಯಾಗಿದ್ದು, ತೋಡುಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಕಲ್ಲುಗುಡ್ಡೆ ಸಮೀಪದ ಅಂಗಡಿಗೆ ನೀರು ನುಗ್ಗಿತ್ತು.