ಚಿಕ್ಕಬಳ್ಳಾಪುರ: ನಗರ ಸೇರಿ ಜಿಲ್ಲಾದ್ಯಂತ ಎರಡು ಮೂರುದಿನಗಳಿಂದ ಉತ್ತಮ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಶಿಡ್ಲಘಟ್ಟ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ನಗರದಕಾರ್ಮಿಕ ಬಡಾವಣೆಯ ಕೆಲ ಮನೆಗಳಿಗೆ ನೀರು ನುಗ್ಗಿದೆ. ರೈಲ್ವೆಕೆಳಸೇತುವೆಗಳು ಜಲಾವೃತ್ತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇನ್ನು ಚಿಂತಾಮಣಿ, ಬಾಗೇಪಲ್ಲಿ,ಗುಡಿಬಂಡೆ ಹಾಗೂ ಗೌರಿಬಿದನೂರು ತಾಲೂಕಿನಲ್ಲಿಉತ್ತಮವಾಗಿ ಮಳೆ ಬಿದ್ದಿದೆ. ಕೆಲವೆಡೆ ಉದ್ಯೋಗ ಖಾತ್ರಿಯೋಜನೆ ಮೂಲಕ ನಿರ್ಮಿಸಿರುವ ಕೆರೆ-ಕುಂಟೆ,ಕಲ್ಯಾಣಿಗಳಿಗೆ ನೀರು ಹರಿದು ಬಂದಿದೆ.
ಇದರಿಂದ ಅಂರ್ತಜಲಮಟ್ಟ ವೃದ್ಧಿಯಾಗಿ ದನಕರುಗಳ ನೀರಿನ ಬವಣೆ ನೀಗಿದೆ.ಮತ್ತೂಂದಡೆ ಮಳೆಯಿಂದ ಕೆಲವು ಕಡೆ ಬೆಳೆ ನೀರು ಪಾಲಾಗಿದೆಎಂಬ ದೂರು ಕೇಳಿಬಂದಿದೆ. ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆಎಷ್ಟು ನಷ್ಟ ಸಂಭವಿಸಿದೆ ಎಂಬ ಸ್ಪಷ್ಟ ಮಾಹಿತಿ ಶನಿವಾರಸಿಗಲಿದೆ.
ನಗರಸಭೆ ಅಧ್ಯಕ್ಷರಿಂದ ಪರಿಶೀಲನೆ: ಚಿಕ್ಕಬಳ್ಳಾಪುರ ನಗರದವಿವಿಧ ವಾರ್ಡ್‌ಗಳಲ್ಲಿ ಶನಿವಾರ ಸುರಿದ ಮಳೆಯಿಂದ ನೀರುಸರಾಗವಾಗಿ ಹರಿಯದೆ ನಾಗರಿಕರು ತೊಂದರೆಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್‌ರೆಡ್ಡಿ, ಪೌರಾಯುಕ್ತ ಡಿ.ಲೋಹಿತ್ 8, 23, 24,28 ವಾರ್ಡ್‌ಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು.
ಜೊತೆಗೆ ಮಳೆ ನೀರು ಸರಾಗವಾಗಿ ಹರಿಯಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅಧ್ಯಕ್ಷರು,ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕೆಂದುಗುತ್ತಿಗೆದಾರರಿಗೆ ಆದೇಶಿಸಿದರು.