Advertisement
ಮಂಗಳೂರು ನಗರದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಮಳೆಯಾಗಿದೆ. ದ.ಕ. ಜಿಲ್ಲೆಯ ಎಲ್ಲೆಡೆ ಉತ್ತಮ ಮಳೆಯಾಗಿದೆ. ಉಡುಪಿ ನಗರ ಸಹಿತ ಜಿಲ್ಲೆಯಲ್ಲೂ ಸಾಕಷ್ಟು ಮಳೆ ಬಿದ್ದಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆ ಮತ್ತು ಭಾರೀ ಗಾಳಿ ಬೀಸುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಆರಂಭಿಸಿದೆ. ಗ್ರಾ.ಪಂ. ಕಾರ್ಯದರ್ಶಿ, ವಿಲೇಜ್ ಆಫೀಸರ್‌ಗಳಿಗೆ ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಜಾಗ್ರತೆ ವಹಿಸಲು ಕರೆ ಕೊಡಲಾಗಿದೆ. ಗುಡ್ಡ ಕುಸಿದು ಮನೆಗೆ ಹಾನಿ
ಜಿಲ್ಲೆಯಾದ್ಯಂತ ರವಿವಾರವೂ ಉತ್ತಮ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಬದಿಯಡ್ಕ -ಪೆರ್ಲ ಮಧ್ಯೆ ಕರಿಂಬಿಲ ಎಂಬಲ್ಲಿ ಮುಖ್ಯ ರಸ್ತೆಗೆ ಗುಡ್ಡ ಜರಿದಿದೆ. ಬದಿಯಡ್ಕದ ಚೆನ್ನಾರ್‌ಕಟ್ಟೆಯ ವಿಶ್ವನಾಥ ರೈ ಅವರ ಮನೆಯ ತಾರಸಿಗೆ ಪಕ್ಕದ ಗುಡ್ಡ ಜರಿದು ಹಾನಿಯಾಗಿದೆ.