Advertisement
ದೆ„ವದತ್ತವಾದ ಸ್ವರಮಾಧುರ್ಯ, ಸಂಗೀತಕ್ಕೆ ಕಿವಿಯಾಗುವ ಹಂಬಲ, ಗಾಯನಕ್ಕೆ ಮಿಡಿಯುವ ಮನಸನ್ನು ಅಥೆ„ìಸಿಕೊಂಡ ಸಂಗೀತ ವಿದೂಷಿ ಶ್ರೀಮತಿ ಉಷಾ ಭಟ್ ಮಜೆಕ್ಕಾರ್ ವಿಷ್ಣುಪ್ರಿಯಾಳನ್ನು ತನ್ನ ಶಿಷ್ಯೆಯಾಗಿ ಸ್ವೀಕರಿಸಿ ಉಚಿತವಾಗಿ ಸಂಗೀತ ಪಾಠವನ್ನು ಪ್ರಾರಂಭಿಸಿದರು. ಎರಡನೇ ತರಗತಿಯಲ್ಲಿ ಓದುತ್ತಿದ್ದ ವಿಷ್ಣುಪ್ರಿಯಾಳ ಸಂಗೀತ ಯಾತ್ರೆ ಇಂದು ಈಕೆಯನ್ನು ಓರ್ವ ಉತ್ತಮ ಗಾಯಕಿಯನ್ನಾಗಿ ರೂಪಿಸಿದೆ. ಉಷಾ ಭಟ್ ಅವರ ಸಂಪೂರ್ಣ ಬೆಂಬಲ, ಹಾಗೂ ಪೊÅàತ್ಸಾಹ ವಿಷ್ಣುಪ್ರಿಯಾಳೆಂಬ ಗಾಯಕಿಯನ್ನು ಗಡಿನಾಡಿಗೆ ಪರಿಚಯಿಸುವುದಲ್ಲಿ ಪ್ರಮುಖ ಪಾತ್ರವಹಿಸಿದೆ.
Related Articles
Advertisement
ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ತನ್ನ ಮುಖಪುಟದಲ್ಲಿ ವಿಷ್ಣುಪ್ರಿಯಾಳ ಕುರಿತು ಸಚಿತ್ರ ಲೇಖನವನ್ನು ಪ್ರಕಟಿಸಿತ್ತು. ಇದನ್ನು ಗಮನಿಸಿದ ಹೆಸರಾಂತ ಉದ್ಯಮಿ, ಮƒದಂಗವಾದಕರೂ ಆಗಿರುವ ಕಸ್ತೂರಿರಂಗನ್ ಪತ್ರಿಕಾ ಕಛೇರಿಗೆ ತಲುಪಿ ಒಂದೂವರೆ ಲಕ್ಷ ರೂಪಾಯಿ ಧನಸಹಾಯ ನೀಡಿದ್ದು ಪತ್ರಿಕೆಯ ಉದ್ಯೋಗಿಗಳೇ ಈ ಮೊತ್ತವನ್ನು ಈಕೆಗೆ ತಂದೊಪ್ಪಿಸಿದ್ದರು. ಈ ವರ್ಷ ಶಾಲಾ ಕಲೋತ್ಸವದ ಸಂದರ್ಭದಲ್ಲಿ ಕಸ್ತೂರಿರಂಗನ್ ವಿಷ‌್ಣುಪ್ರಿಯಾಳನ್ನು ಭೇಟಿಮಾಡಿ ಹರಸಿರುತ್ತಾರೆ. ಕ್ರೀಡಾ ತಾರೆ ಚಿತ್ರಾ ಅವರು ತನಗೆ ಕಸ್ತೂರಿರಂಗನ್ ಅವರು ಬಹುಮಾನವಾಗಿ ನೀಡಿದ ಒಂದು ಲಕ್ಷ ರೂಪಾಯಿಯಿಂದ ಐವತ್ತು ಸಾವಿರ ರೂಪಾಯಿಗಳನ್ನು ಈಕೆಗೆ ನೀಡಿರುವುದು ಇನ್ನೊಂದು ವಿಶೇಷ. ಈ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಚಿತ್ರಾ ಅವರನ್ನು ಶಾಲೆಗೆ ಕರೆತರಲಾಗಿತ್ತು.
ಈಗಾಗಲೇ ಸಿ.ಸಿ.ಆರ್.ಟಿ. ಸ್ಕೋಲರ್‌ಶಿಪ್‌ಗಿರುವ ಅರ್ಹತೆಯನ್ನೂ ಪಡೆದಿರುವ ಈಕೆಗೆ ಈ ಮೂಲಕ ದೆಹಲಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಅವಕಾಶ ದೊರಕ್ಕಿತ್ತಾದರೂ ರಾಜ್ಯ ಶಾಲಾ ಕಲೋತ್ಸವದಲ್ಲಿ ಭಾಗವಹಿಸ ಬೇಕಾಗಿರುವುದರಿಂದ ಆ ಅವಕಾಶವನ್ನು ಕೈಬಿಡಬೇಕಾಯಿತು. ವಿಷ್ಣುಪ್ರಿಯಾಳ ತಂದೆ ಹƒದ್ರೋಗಿಯಾಗಿದ್ದು ದುಡಿಯುವ ಸ್ಥಿತಿಯಲ್ಲಿಲ್ಲ. ತಾಯಿ ಬಿ.ಎಡ್. ಪಧವೀದರೆಯಾಗಿದ್ದರೂ ದೃಷ್ಟಿದೋಷದಿಂದಾಗಿ ಇದುವರೆಗೆ ಉದ್ಯೋಗ ದೊರೆಯದೆ ವಿಷ್ಣುಪ್ರಿಯಾಳನ್ನು ಆಶ್ರಯಿಸಿ ಬದುಕಬೇಕಾದ ಪರಿಸ್ಥಿತಿ.
ಊರ ಜನರು ತಮ್ಮ ಮಗಳಂತೆ ಕೊಂಡಾಡುವ ಈ ಬಾಲಕಿಗೆ ಬೆಳಕಾಗಿ ಬಂದವರು ಅವರ ಸಂಬಂಧಿ ವಿಶ್ವನಾಥ ಅವರು. ಕೇರಳ ಕೆ.ಎಸ್.ಆರ್.ಟಿ.ಸಿ. ಕಂಡೆಕ್ಟರ್ ಆಗಿರುವ ಇವರು ಕಾರ್ಯಕ್ರಮಗಳಿಗೆ, ಸ್ಪರ್ಧಾ ವೇದಿಕೆಗಳಿಗೆ ಈಕೆಯನ್ನು ಕರೆದೊಯ್ಯುವ ಪೂರ್ಣ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ಹೊತ್ತಿದ್ದು ಪ್ರೀತಿಯಿಂದ ಅತ್ಯಂತ ಅಭಿಮಾನದಿಂದ ಈಕೆಯನ್ನು ಮುನ್ನಡೆಸುತ್ತಿದ್ದಾರೆ. ಸಮಸ್ಯೆಗಳನ್ನೂ ತನ್ನಿಂದಾದ ರೀತಿಯಲ್ಲಿ ಹೋಗಲಾಡಿಸಲು ನೆರವಾಗುತ್ತಿದ್ದಾರೆ.
ಶಂಕರ ಟಿವಿ ನಡೆಸಿದ ಸಂಗೀತ ಯಾತ್ರೆಯಲ್ಲಿ ಭಾಗವಹಿಸಿದ್ದ ವಿಷ್ಣುಪ್ರಿಯಾ ಫÉವರ್ ಚಾನಲ್ ಕಾಮಿಡಿ ಉತ್ಸವ ಕಾರ್ಯಕ್ರಮದಲ್ಲೂ ಭಾಗವಹಿಸುವ ಅರ್ಹತೆಯನ್ನು ಗಳಿಸಿದ್ದು ಸ್ಪೆಷಲ್ ಸೆಗೆ¾ಂಟ್ ವಿಭಾಗದಲ್ಲಿ ತನ್ನ ಸಂಗೀತ ಧಾರೆಯನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾಳೆ. ಈಕೆಯ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಅಭಿನಂಧಿಸಿದ್ದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪಯಣ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧ್ಯಕ್ಷರಾದ ನಾಗಲಕ್ಷಿ¾à ಬಾಯಿಯವರು ಈಕೆಯನ್ನು ಸನ್ಮಾನಿಸಿ ಅಭಿನಂದಿಸಿರುತ್ತಾರೆ.
ವಿಷ್ಣುಪ್ರಿಯಾಳ ತಮ್ಮ ಅಭಿಷೇಕ್ ಈಕೆಯ ಸಹಪಾಠಿಯಾಗಿದ್ದು ಆತನೂ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದು ಉತ್ತೀರ್ಣನಾಗಿದ್ದಾನೆ. ಶಾಲೆಗೆ ಹೋಗುವುದರಿಂದ ಹಿಡಿದು ಎಲ್ಲದರಲ್ಲಿಯೂ ಅಕ್ಕನಿಗೆ ತಮ್ಮ ಸಾಥ್ ನೀಡುತ್ತಾನೆ.
ನೋಟ ಮೌನವಾದರೂ ಮಾತು ಹಾಡಾಗುವ ಈ ಅಪ್ರತಿಮ ಪ್ರತಿಭಾವಂತ ಸಾಧಕಿಯ ಜೀವನವು ಸಂಗೀತದಂತೆ ಅಡೆತಡೆಗಳಿಲ್ಲದೆ ಗೆಲುವಿನ ಹಾದಿಯಲ್ಲಿ ಮುಂದುವರಿಯಲಿ ಎಂಬುದು ನಮ್ಮ ಹಾರೈಕೆ.
– ಅಖೀಲೇಶ್ ನಗುಮುಗಂ