ಮಧುಗಿರಿ:ಕೊರೊನಾ ಹಿನ್ನೆಲೆ ಇತರೆಕಾರ್ಯಕ್ಕೆ ಗಮನನೀಡದೆ ಭೂಮಿ ನಂಬಿದ ರೈತ ಸಹೋದರರು ಭರ್ಜರಿ ಇಳುವರಿಯೊಂದಿಗೆ ಕಡ್ಲೆ ಕಾಯಿ ಬೆಳೆ ಬೆಳೆದು ಜಿಲ್ಲೆಗೆಮಾದರಿಯಾಗಿದ್ದಾರೆ.ತಾಲೂಕಿನ ಮಿಡಿಗೇಶಿ ಹೋಬಳಿಯ ಚೀಲನಹಳ್ಳಿ ಗ್ರಾಮದ ಈರಣ್ಣಎಂಬುವವರ ಪುತ್ರ ರಂಗನಾಥ್‌ಯಾದವ್ ಹಾಗೂ ಎಳೆ ನಾಗಪ್ಪಸಹೋದರರು ಈ ಭರ್ಜರಿ ಬೆಳೆಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಕೊಳವೆಬಾವಿನೀರಿನ ಸಹಕಾರದಿಂದಕೃಷಿ ಇಲಾಖೆಯ ಸ್ಪಿಂಕ್ಲರ್‌ನೆರವಿನಿಂದ ಈ ಬೆಳೆ ಬೆಳೆದು ಗಿಡಯೊಂದಕ್ಕೆ150-250ಕಡ್ಲೆàಕಾಯಿಗಳ ಇಳುವರಿ ಪಡೆದಿದ್ದಾರೆ.
ಕದ್ರಿ ಲೇಪಾಕ್ಷಿ 18/12 ತಳಿ: ಪತ್ರಿಕೆಯೊಂದಿಗೆ ರೈತರಂಗನಾಥ್ ಮಾತನಾಡಿ, ಇದುಕದ್ರಿ ಲೇಪಾಕ್ಷಿ 18/12ತಳಿಯಾಗಿದ್ದು, ಇಷ್ಟು ಇಳುವರಿಯನ್ನು ನಾವೂನಿರೀಕ್ಷಿಸಿರಲಿಲ್ಲ. ನಮಗೆ ಬೀಜ ನೀಡಿದವರೇ ಇಂದುಆಶ್ಚರ್ಯ ಪಡುತ್ತಿದ್ದು, ಜಮೀನು ನೋಡಲುಬರುತ್ತಿದ್ದಾರೆ. ಅಲ್ಲದೆ ವಾಟ್ಸಪ್ ಮೂಲಕ ವಿಡಿಯೊಹರಿಬಿಟ್ಟಕಾರಣ ಯಾದಗಿರಿ, ಹಾವೇರಿ, ಚಿತ್ರದುರ್ಗ,ಪಾವಗಡ ಹಾಗೂ ಜಿಲ್ಲೆಯ ಮೂಲೆಗಳಿಂದಲೂದೂರವಾಣಿ ಕರೆ ಮಾಡಿ ಬೀಜ ನೀಡುವಂತೆ ಬೇಡಿಕೆ ಬರುತ್ತಿದೆ.
ಇದು ನಮಗೆ ಸಂತೋಷ ತಂದಿದ್ದು, ಎಲ್ಲೂಮಾರುಕಟ್ಟೆಗೆ ಮಾರಾಟ ಮಾಡುವುದಿಲ್ಲ. ಬದಲಿಗೆಎಲ್ಲವನ್ನೂ ನಿಗದಿತ ಬೆಲೆಗೆ ರೈತರಿಗೆ ಮಾತ್ರ ಮಾರಾಟಮಾಡಲು ಬಯಸಿದ್ದೇವೆ ಎಂದರು.ಈ ಕಡ್ಲೆàಕಾಯಿ ಬೀಜವು ನಮ್ಮ ನಾಟಿಬೀಜದಂತೆಯೇ ಇದ್ದುಕೊಂಚಉದ್ದವಾಗಿರುತ್ತದೆ. ಹಾಗೂ ಹೆಚ್ಚಿನ ಎಣ್ಣೆಯಅಂಶವಿದ್ದು, ಮಾರುಕಟ್ಟೆಯಲ್ಲಿ ಅಪಾರಬೇಡಿಕೆಯಿದೆ. ಮುಂದೆಯೂ ಇದೇತಳಿಯನ್ನು ಬೆಳೆಯಲಿದ್ದು, ಸ್ಥಳೀಯ ರೈತರಿಗಾಗಿನೀಡುವುದಾಗಿ ತಿಳಿಸಿದ್ದಾರೆ.
ಕ್ವಿಂಟಲ್‌ಗೆ 12-13 ಸಾವಿರ: ಈಗಾಗಲೇ ಬೆಳೆಕಟಾವುಮಾಡುತ್ತಿದ್ದು, ಸೂಕ್ತ ರೀತಿಯಲ್ಲಿ ಒಣಗಿಸಿ ಮಾರಾಟಮಾಡುತ್ತೇವೆ. ನಾವುಕದ್ರಿಯಿಂದಕೆ.ಜಿ.ಗೆ300 ರೂ.ನೀಡಿ ಖರೀದಿಸಿ ತಂದಿದ್ದು, ಗಿಡವೊಂದರಲ್ಲಿ 150 ರಿಂದ 250 ಕಡ್ಲೆ ಕಾಯಿವರೆಗೂ ಇಳುವರಿ ಸಿಕ್ಕಿದೆ. ಇಂತಹತಳಿಯನ್ನು ನಮ್ಮ ರೈತರಿಗೂ ಬೆಳೆದು ಹೆಚ್ಚಿನ ಇಳುವರಿಜೊತೆಗೆ ದುಪ್ಪಟ್ಟು ಲಾಭ ಸಿಗಲಿ ಎಂಬ ಉದ್ದೇಶದಿಂದಕ್ವಿಂಟಲ್‌ಗೆ 12 ಸಾವಿರದಿಂದ13 ಸಾವಿರದ ವರೆಗೂ ದರನಿಗದಿ ಪಡಿಸಿ ಮಾರಾಟ ಮಾಡುತ್ತೇವೆಂದು ಸಹೋದರ ಎಳೆ ನಾಗಪ್ಪ ತಿಳಿಸಿದ್ದಾರೆ.
ಮಧುಗಿರಿ ಸತೀಶ್