Advertisement
ಪ್ರಸಕ್ತ ವರ್ಷದ ನೆಟ್ ಪರೀಕ್ಷೆಗಳಿಗಾಗಿ ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿ, 2002ರ ಜೂನ್ ಡಿಸೆಂಬರ್‌ಗಿಂತಲೂ ಮುನ್ನ ಸೆಟ್ (ರಾಜ್ಯಮಟ್ಟದಲ್ಲಿ ನಡೆಯುವ ಉಪನ್ಯಾ ಸಕರ ಅರ್ಹತಾ ಪರೀಕ್ಷೆ) ಪರೀಕ್ಷೆ ತೇರ್ಗಡೆ ಯಾದವರಿಗೆ ನೆಟ್ ಪರೀಕ್ಷೆ ಯಿಂದ ವಿನಾಯ್ತಿ ನೀಡಲಾಗಿತ್ತು. ಅವರು ಭಾರತದ ಯಾವುದೇ ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಹಾಕಬಹುದಾಗಿದೆ ಎಂದು ಸೂಚಿಸಿತ್ತು. ಅದನ್ನು ತಿದ್ದುಪಡಿಗೊಳಿಸಿರುವ ಎನ್‌ಟಿಎ, ಮೇಲಿನ ನಿಯಮ ಗಳನ್ನು 2002ರ ಜೂ. 1ಕ್ಕೂ ಮೊದಲು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತವೆ. 2002ರ ಜೂ.1 ಅನಂತರ ಸೆಟ್ ಪರೀಕ್ಷೆ ಪಾಸಾದವರು ತಮ್ಮ ರಾಜ್ಯದಲ್ಲಿ ಮಾತ್ರ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ. ಅಂದರೆ, ಈಗ 2002ರ ಜೂ. 1ಕ್ಕೂ ಮೊದಲು ಸೆಟ್ ತೇರ್ಗಡೆಯಾದವರು ಮಾತ್ರ ದೇಶಾದ್ಯಂತ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. Advertisement
ಸೆಟ್ ಪಾಸಾದವರಿಗೆ ಸಿಹಿ ಸುದ್ದಿ
09:54 AM Nov 08, 2019 | mahesh |
Advertisement
Udayavani is now on Telegram. Click here to join our channel and stay updated with the latest news.