Advertisement
ಎಲ್‌ಐಸಿ ನೌಕಕರ ವೇತನ ಶೇ.17ರಷ್ಟು ಹೆಚ್ಚಳಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಉದ್ಯೋಗಿಗಳಿಗೆ ಕೇಂದ್ರ ಸರಕಾರ ಬಂಪರ್ ಗಿಫ್ಟ್ ನೀಡಿದೆ. ಎಲ್‌ಐಸಿ ಉದ್ಯೋಗಿಗಳ ವೇತನವನ್ನು ಶೇ.17ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ. ಈ ಸಂಬಂಧ ಎಲ್‌ಐಸಿ ಮಾಹಿತಿ ನೀಡಿದ್ದು, 2022ರ ಆ. 1ರಿಂದಲೇ ಇದು ಪೂರ್ವಾನ್ವಯವಾಗಲಿದೆ. ನೂತನ ಪಿಂಚಣಿ ಯೋಜನೆ ಅನ್ವಯ 2010ರ ಎ.1ಕ್ಕೂ ಮುಂಚೆ ಸಂಸ್ಥೆ ಸೇರಿದ ಸುಮಾರು 24 ಸಾವಿರ ಉದ್ಯೋಗಿಗಳ ಪಿಂಚಣಿಯನ್ನೂ ಶೇ.10ರಿಂದ ಶೇ.14ಕ್ಕೆ ಏರಿಕೆ ಮಾಡಲಾಗಿದೆ. ವೇತನ ಹೆಚ್ಚಳವು 1.10 ಲಕ್ಷ ಎಲ್‌ಐಸಿ ಉದ್ಯೋಗಿಗಳಿಗೆ ಲಾಭ ತರಲಿದೆ.