ಹೊಸದಿಲ್ಲಿ : ರಿಲಯನ್ಸ್ ಜಿಯೋ ದ ಹೊಸ ಧನ್ ಧನಾ ಧನ್ ಆಫರ್‌ನ ಬಳಕೆದಾರರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ.
ರಿಲಯನ್ಸ್ ಜಿಯೋ ದ ಹೊಸ ಧನ್ ಧನಾ ಧನ್ ಕೊಡುಗೆಯು “ಹೊಸ ಬಾಟಲಿಯಲ್ಲಿನ ಹಳೇ ಮದ್ಯ’ ಎಂದು ಪ್ರತಿಸ್ಪರ್ಧಿ ಟೆಲಿಕಾಂ ಕಂಪೆನಿಗಳು ಟೀಕಿಸಿವೆಯಾದರೆ ಭಾರತದ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) “ರಿಲಯನ್ಸ್ ಜಿಯೋದ ಈ ಆಫರ್‌ನಲ್ಲಿ ತಪ್ಪೇನೂ ಇಲ್ಲ; ಎಲ್ಲವೂ ಸರಿಯಾಗಿಯೇ ಇದೆ’ ಎಂದು ಹೇಳಿರುವುದಾಗಿ ಫಿನಾನ್‌ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಧನ್ ಧನಾ ಧನ್ ಆಫರ್ ಜಿಯೋ ದ ಈ ಹಿಂದಿನ ಸಮ್ಮರ್ ಸರ್‌ಪ್ರೈಸ್ ಆಫರ್‌ಗಿಂತ ಭಿನ್ನವಾಗಿದೆ ಎಂದು ಟ್ರಾಯ್ ಹೇಳಿರುವುದಾಗಿ ಫಿನಾನ್‌ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಿಲಯನ್ಸ್ ಜಿಯೋ ತನ್ನ ಪ್ರೈಮ್ ಸದಸ್ಯರಿಗಾಗಿ ಕಳೆದ ತಿಂಗಳಲ್ಲಿ ಕೇವಲ 309 ರೂ.ಗೆ 3 ತಿಂಗಳ ಸಿಂಧುತ್ವ ಹೊಂದಿರುವ ದಿನವಹಿ 1 ಜಿಬಿ 4ಜಿ ಡಾಟಾ ಆಫರ್ ನೀಡಿತ್ತು. ಇದನ್ನು ಏರ್‌ಟೆಲ್ ಕಂಪೆನಿಯು “ಹೊಸ ಬಾಟಲಿಯಲ್ಲಿ ಕೊಟ್ಟಿರುವ ಹಳೇ ಮದ್ಯ’ ಎಂದು ಟೀಕಿಸಿತ್ತು.
ಜಿಯೋ ತನ್ನ ಹೊಸ ಕೊಡುಗೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ 309 ರೂ. ವೆಚ್ಚದ ಕೊಡುಗೆಯಲ್ಲಿ ಅನ್‌ಲಿಮಿಟೆಡ್ ಎಸ್‌ಎಂಎಸ್, ಕಾಲಿಂಗ್ ಮತ್ತು ಡಾಟಾ (3 ತಿಂಗಳ ಕಾಲಾವಧಿಯ ದಿನವಹಿ 1 ಜಿಬಿ 4ಜಿ ಡಾಟಾ) ಸೇರಿರುವುದಾಗಿ ಹೇಳಿತ್ತು.
ಹಾಗೆಯೇ 509 ರೂ.ಗಳಿಗೆ ಅನ್‌ಲಿಮಿಟೆಡ್ ಎಸ್‌ಎಂಎಸ್, ಕಾಲಿಂಗ್ ಮತ್ತು ಡಬಲ್ ಡಾಟಾ (ದಿನವಹಿ 2 ಜಿಬಿ) 3 ತಿಂಗಳ ಅವಧಿಯ ಕೊಡುಗೆಯಾಗಿ ಫಸ್ಟ್ ರೀಚಾರ್ಜ್‌ಗೆ ಸಿಗುವುದೆಂದು ಜಿಯೋ ಹೇಳಿತ್ತು.