ಹೊಸದಿಲ್ಲಿ: ಕೇಂದ್ರ ಸರ್ಕಾರವು ಮುಂಬರುವ ಬಜೆಟ್‌ನಲ್ಲಿ ಕೊರೊನಾ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್ ನಿಂದಾಗಿ ನಲುಗಿರುವ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಮತ್ತೆ ಚಿಗುರಿಸಲು ಕ್ರಮ ಕೈಗೊಳ್ಳಲಿದೆಯೇ? ದೇಶದ ಒಟ್ಟು ಜಿಡಿಪಿಯ ಶೇ.6 ರಷ್ಟು ಪಾಲು ಈ ಕ್ಷೇತ್ರದಿಂದಲೇ ಬರುತ್ತಿರುವ ಕಾರಣ ಸರ್ಕಾರವು ಇದರ ಅಭಿವೃದ್ಧಿಯ ನಿಟ್ಟಿನಲ್ಲಿ ಹೆಜ್ಜೆಯಿಡುವ ನಿರೀಕ್ಷೆ ಹೊತ್ತು ರಿಯಲ್ ಎಸ್ಟೇಟ್ ಕ್ಷೇತ್ರ ಕೂತಿದೆ.
ಮನೆಗಳ ಖರೀದಿ ಸಾಮರ್ಥ್ಯ ವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರವು ಬಜೆಟ್‌ನಲ್ಲಿ ಗೃಹ ಸಾಲದ ಬಡ್ಡಿಯ ಮೇಲಿನ ತೆರಿಗೆ ರಿಲೀಫ್ ಅನ್ನು 5 ಲಕ್ಷ ರೂ.ಗಳಿಗೆ ಏರಿಸುವ ಸಾಧ್ಯತೆಯಿದೆ.
ಇದನ್ನೂ ಓದಿ:ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು
ಪ್ರಸ್ತುತ ಇದು 2 ಲಕ್ಷ ರೂ. ಆಗಿದೆ. ಇದೇ ವೇಳೆ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಮರುಜಾರಿ ಮಾಡುವ ಮೂಲಕ ನಿರ್ಮಾಣ ವೆಚ್ಚ ತಗ್ಗಿಸುವ, ಆಸ್ತಿಪಾಸ್ತಿಯ ಬೆಲೆ ತಗ್ಗಿಸುವ ನಿರೀಕ್ಷೆಯೂ ಇದೆ.
ಸಿಮೆಂಟ್, ಉಕ್ಕು, ಟಿಂಬರ್, ಫಿನಿಷಿಂಗ್ ಮೆಟೀರಿಯಲ್ ಇತ್ಯಾದಿ ಕಚ್ಚಾ ವಸ್ತುಗಳ ಜಿಎಸ್‌ಟಿ ಯನ್ನು ಇಳಿಕೆ ಮಾಡಬೇಕು ಎಂದೂ ರಿಯಲ್ ಎಸ್ಟೇಟ್ ಕ್ಷೇತ್ರ ಆಗ್ರಹಿಸುತ್ತಿದೆ. ಇದೆಲ್ಲವೂ ಬಜೆಟ್ ನಲ್ಲಿ ಈಡೇರುವ ನಿರೀಕ್ಷೆಯಿದೆ.