Advertisement

ಸಿಹಿ ಸುದ್ದಿ : ಇನ್ನೆರಡು ವರ್ಷಗಳಲ್ಲಿ EPFO ನಿಂದ 10 ಲಕ್ಷ ಮನೆ

07:49 PM Apr 29, 2017 | Team Udayavani |

ಹೊಸದಿಲ್ಲಿ : ಸ್ವಂತ ಮನೆ ಹೊಂದ ಬಯಸುವವರಿಗೆ ಇಲ್ಲೊಂದು ಸಿಹಿ ಸುದ್ದಿ. ಅದೆಂದರೆ ಮುಂದಿನ ಎರಡು ವರ್ಷಗಳಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸಲು ನೌಕರರರ ಭವಿಷ್ಯ ನಿಧಿ ಸಂಘಟನೆಯು (EPFO) ನಗರಾಭಿವೃದ್ಧಿ ಸಚಿವಾಲಯದೊಂದಿಗೆ ಕೈಜೋಡಿಸಲಿದೆ.

Advertisement

ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಈ ವಿಷಯವನ್ನು ಇಂದಿಲ್ಲಿ ಮಾಧ್ಯಮಕ್ಕೆ ತಿಳಿಸಿದರು. 

“2002ರ ಒಳಗಾಗಿ ಎಲ್ಲರಿಗೂ ಮನೆ’ ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮುನ್ನೋಟವನ್ನು ಸಾಕಾರಗೊಳಿಸಿ ಅದಕ್ಕೆ ವಿಶೇಷ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಬಂಡಾರು ಹೇಳಿದರು. 

ಎಎನ್‌ಐ ಜತೆಗೆ ಮಾತನಾಡುತ್ತಾ ಸಚಿವ ಬಂಡಾರು ಹೇಳಿರುವುದು ಇಷ್ಟು : 

ಹಂತ ಹಂತವಾಗಿ ಇಪಿಎಫ್ಓ ನೋಂದಣಿದಾರರಿಗೆ ಮನೆಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಸಮೂಹ ವಸತಿ ಯೋಜನೆ ವಿಮೆಯನ್ನು ಆರಂಭಿಸಿದ್ದೇವೆ.

Advertisement

ನಗರಾಭಿವೃದ್ಧಿ ಸಚಿವಾಲಯದ ನೆರವಿನಲ್ಲಿ ಇಪಿಎಫ್ಓ ಮುಂದಿನ ಎರಡು ವರ್ಷಗಳಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸಲಿದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ರಾಜ್ಯ ಸರಕಾರಗಳು ಈ ಯೋಜನೆಗೆ ನಿವೇಶನಗಳನ್ನು ಒದಗಿಸಬೇಕು. ಆರ್ಥಿಕ ದುರ್ಬಲ ವರ್ಗಗಳ ಯೋಜನೆಯ ಫ‌ಲಾನುಭವಿಗಳಿಗೆ 2.2 ಲಕ್ಷ ಬಡ್ಡಿ ಸಹಾಯಧನವನ್ನು ಒದಗಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗುತ್ತಿದೆ.

ಇದೇ ರೀತಿ ಮಧ್ಯಮ ಮತ್ತು ಕಡಿಮೆ ಆದಯ ಸಮೂಹದ ನೋಂದಣಿದಾರರಿಗೆ ಶೇ.3ರ ಬಡ್ಡಿ ದರದಲ್ಲಿ  ಆರರಿಂದ 12 ಲಕ್ಷ ರೂ.ವರೆಗೆ ಮತ್ತು 18 ಲಕ್ಷ ರೂ. ವರೆಗಿನ ಸಾಲ ಮೊತ್ತದ ಮೇಲೆ ಶೇ.4 ರ ಬಡ್ಡಿ ಸಹಾಯಧನ ನೀಡಲಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next