ನಿರ್ದೇಶಕ: ಬ್ಯಾರ್ರಿ ಲೆವಿನ್ಸನ್
ಅವಧಿ: 121 ನಿಮಿಷ
Advertisement
ಇವತ್ತಿಗೂ ವಿಯೆಟ್ನಾಂ ಮಾತ್ರವೇ ಏಕೆ, ಜಗತ್ತಿನ ಸಿನಿಪ್ರೇಮಿಗಳಿಗೆ “ಗುಡ್ ಮಾರ್ನಿಂಗ್ ವಿಯೆಟ್ನಾಂ…’ ಎಂಬ ಸಾಲು ಕೇಳಿದರೆ, ಮೈಮನದಲ್ಲಿ ರೋಮಾಂಚನದ ಮಿಂಚೊಂದು ಹುಟ್ಟುತ್ತೆ. ಅದೊಂದು ಯುದ್ಧ. ಮುಂದೆ ಮಹಾ ಸೋಲು ಕಾದಿದೆ, ನಮ್ಮಿಂದ ಏನೂ ಆಗದು ಎಂದು ವಿಯೆಟ್ನಾಂ ಸೈನಿಕರೆಲ್ಲ ಬಸವಳಿದು ಕೂತಿರುತ್ತಾರೆ. ಮೇಜರ್, ತಾನು ಯಾವುದೋ ಪ್ರದೇಶದಲ್ಲಿ ಎಂದೋ ಕೇಳಿದ ವಿದೂಷಕನ ಸ್ವಭಾವದ ರೇಡಿಯೋ ಜಾಕಿಯನ್ನು ಕರೆತರುತ್ತಾನೆ. ಸೈನಿಕರನ್ನು ಹುರಿದುಂಬಿಸುವ ಹೊಣೆಯನ್ನು ಆತನಿಗೆ ವಹಿಸುತ್ತಾನೆ. ಆತ ನಿತ್ಯವೂ “ಗುಡ್ ಮಾರ್ನಿಂಗ್ ವಿಯೆಟ್ನಾಂ’ ಎನ್ನುವ ಮೂಲಕ, ಯುದ್ಧದ ವರ್ಣನೆಯಲ್ಲೂ ಹಾಸ್ಯಭಾವವನ್ನು ಬೆರೆಸಿ, ತನ್ನ ದೇಶದ ಸೈನಿಕರಿಗೆ ಧೈರ್ಯ ತುಂಬುತ್ತಿರುತ್ತಾನೆ. ಸಪ್ಪೆ ಆಗಿ, ಬದುಕಿನ ಆಸೆಯನ್ನೇ ತೊರೆದಿದ್ದ ಸೈನಿಕರ ಮೊಗಗಳು ಅರಳುತ್ತವೆ.