Advertisement
ಎಲ್ಲವೂ ಕಲೆಸಿಹೋದಾಗ ವಿಕಾರವಾದ ದರ್ಶನವಾಗುತ್ತದೆ. ಏಳು ಬಣ್ಣಗಳು ಕಣ್ಣೂ ಗ್ರಹಿಸುವ ಬಿಡಿಭಾಗಗಳನ್ನು ಗ್ರಹಿಸಲಾರದಷ್ಟು ವೇಗವಾಗಿ ಸುತ್ತಿಕೊಂಡಾಗ ಬಿಳಿಯ ಬಣ್ಣವಾಗುತ್ತದೆ. ವಾಸ್ತವದಲ್ಲಿ ಬಿಳಿಯ ಬಣ್ಣವೂ ಇಲ್ಲ. ಕಪ್ಪು ಬಣ್ಣವೂ ಇಲ್ಲ. ಅದಕ್ಕೂ ಬಿಳಿಯ ಬಣ್ಣವನ್ನು ಕಪ್ಪು ಬಣ್ಣವನ್ನು ನಮ್ಮ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕ ಆಚಾರ ವಿಚಾರಗಳಲ್ಲಿ ಪ್ರಧಾನವಾಗಿ ಗ್ರಹಿಸುತ್ತೇವೆ. ಕೃಷ್ಣನು ಅರ್ಜುನನಿಗೆ ತೆರೆದು ತೋರಿದ ವಿರಾಟ್ ದರ್ಶನವನ್ನು ನಮ್ಮ ಕಲಾವಿದರುಗಳು ವೈಭವೀಕರಿಸಿ ಒಡಮೂಡಿಸುವ ಪ್ರಮಾಣ ಬದ್ಧ ವಿರಾಟ ರೂಪ ಬೇರೆ. ಆದರೆ ವಾಸ್ತವದಲ್ಲಿ ನೀರು ಮಣ್ಣು ಗಾಳಿ ಬೆಳಕು ಹಾಗೂ ಅನಂತವಾದ ಭ್ರಮಾಪೂರ್ಣ ಆಕಾಶ ತತ್ವ ಅಲ್ಲಿ ಒಂದು ಇನ್ನೊಂದರೊಳಗೆ ಕಲಿಸಿಹೋದ ವಿಕಾರ ಸ್ವರೂಪ ಅಲ್ಲಿತ್ತು. ಗಣಪತಿಯನ್ನು ಪ್ರಥಮಂ ವಕ್ರತುಂಡ ಎಂದು ಕರೆಯುವುದರಲ್ಲೂ ಇದೇ ಆಧಾರ. ಪ್ರಥಮದಲ್ಲಿ ಆಕಾರದ ವಿಕಾರವೇ ಎಲ್ಲದರ ಮೂಲ. ನಂತರ ಅಲ್ಲಿ ಆಕೃತಿಗಳು ಒಡಮೂಡ ತೊಡಗಿದವು. ಈ ಆಕೃತಿಗಳಿಗೆ ಅಂಕೆ ಸಂಖ್ಯೆಗಳು ಆಧಾರವಾಗಿದೆ. ಒಬ್ಬ ಮನುಷ್ಯನಿಗೆ ಒಂದೇ ಮುಖ, ಎರಡೇ ಕಣ್ಣೂ, ಎರಡೇ ಕಿವಿ, ಒಂದೇ ನಾಲಗೆ, ಒಂದೇ ಮೂಗು ಇತ್ಯಾದಿ ಇತ್ಯಾದಿ ಇದ್ದಾಗಲೇ ಧನಾತ್ಮಕ ಬಲವನ್ನು ಹೊಂದಲು ಸಾಧ್ಯ. ಒಂದೇ ಒಂದು ಅಳತೆ ಮೀರಿ ಇದ್ದರೂ ಅದು ವಿಕಾರವೆನಿಸುತ್ತದೆ.
Related Articles
Advertisement
ಈ ಹುಡುಕಾಟದಲ್ಲಿ ಮೂಲ ಬೀಜಾಕ್ಷರ ಮಂತ್ರಗಳು ಸಹಾಯಕ್ಕೆ ಬರುತ್ತದೆ. ಇಂದಿನ ಜಾಗತಿಕ ಸಂದರ್ಭ ಇಂಥದೊಂದು ಹುಡುಕಾಟಕ್ಕೆ ಅವಕಾಶ ಕೊಡುವುದಿಲ್ಲ. ಆದರೂ ಒಬ್ಬ ವ್ಯಕ್ತಿಯು ಹುಟ್ಟಿದ ಸಂದರ್ಭದ ನಕ್ಷತ್ರ, ರಾಶಿ, ಲಗ್ನಭಾವಗಳ ಮೇಲಿಂದ ಅದೃಷ್ಟ ಸಂಖ್ಯೆಯನ್ನು ಗುರ್ತಿಸಲಾಗಿದೇ ಅದೃಷ್ಟ ಸಂಖ್ಯೆಯ ಒಳ ಸಾಂದ್ರತೆಗೆ ಗಾಢವಾದ ಶಕ್ತಿ ಸಿಗುವಂತಾಗುವ ಮೂಲ ಬೀಜಾಖÒರ ಮಂತ್ರವನ್ನು ನಂತರ ತಿಳಿದುಕೊಳ್ಳಬೇಕು.
ಹೆಸರಿನ ಮೂಲಕ ಅದೃಷ್ಟ ಸಂಖ್ಯೆ ಕಂಡು ಹಿಡಿಯ ಬಹುದೇ???
ಬಹಳ ಜನ ಈ ಪ್ರಶ್ನೆಯನ್ನು ಕೇಳುತ್ತಾರೆ. ನಮ್ಮ ವ್ಯಾಪಾರೀಕರಣ ಜಗತ್ತು ಅದೃಷ್ಟದ ಮೇಲೆ ನಿಂತಿದೆ ಎಂಬುದು ನೇರ ನೋಟಕ್ಕೆ ಕಾಣುವ ಸತ್ಯ. ಆದರೆ ವ್ಯವಾಹಾರಿಕ ಜಗತ್ತಲ್ಲದ ಆಧ್ಯಾತ್ಮದ ಅವಧೂತ ಶಕ್ತಿಯ ಸಂಪನ್ನ ಆವರಣದ ತಾಂತ್ರಿಕ ಜಗತ್ತು ಗೂಢವೊಂದನ್ನು ವಿಶ್ಲೇಷಿಸಿ ಅದೃಷ್ಟದ ನಿಕ್ಷೇಪವನ್ನು ಒದಗಿಸುತ್ತದೆ. ಇದನ್ನು ತಿಳಿಯಲು ವ್ಯವಧಾನ ತಾಳ್ಮೆಗಳು ಬೇಕು. ಹೀಗಾಗಿ ವ್ಯಕ್ತಿಯ ಹೆಸರೊಂದನ್ನೇ ಅಲ್ಲದೆ ಅವನ ಜೀವನದ ಕೆಲ ಘಟನಾವಳಿಗಳ ಆಧಾರದ ಅಮೇಲೆ ಬ್ರಹ್ಮಕಲ್ಪದ ಪದ್ಮದೆಳೆಗಳನ್ನು ಅವನ ಜಾತಕ ಹಸ್ತರೇಖೆಗಳ ಸಂಯೋಜನೆ ಆಧರಿಸಿ ಅದೃಷ್ಟ ಸಂಖ್ಯೆಯ ನಿರ್ಣಯವಾಗಬೇಕು ಇದನ್ನು ನಿರ್ಧರಿಸಲು ಆತುರ
ಸಾಧುವಲ್ಲ. ನಮ್ಮ ಮಾಜಿ ಪ್ರಧಾನಿ ಜವಹರಲಾಲ ನೆಹರು ಅವರ ಏಳುಬೀಳುಗಳು ಐದರಿಂದ ಎಂಟರಿಂದ ಮತ್ತು ಏಳರಿಂದಅನೇಕ ಅಂಶಗಳನ್ನು ತನ್ನ ಮೂಲದಲ್ಲಿ ಆತುಕೊಂಡಿದ್ದವು ಎಂದರೆ ಆಶ್ಚರ್ಯವಾದೀತು. ಆರು ಅವರನ್ನು ಸೋಲಿಸಲೆಂದೇ ಬಂದ ಸಂಖ್ಯೆಯಾಗುತ್ತಿತ್ತು. ಗುರುಗೂ ಕೇತುಗೂ ಬಿದ್ದ ಜಟಾಪಟಿಯು ಆರಂಕಿಯ ಸಂದರ್ಭದ ಅವರ ನಿರ್ಣಯಗಳಿಗೆ ಧಕ್ಕೆ ತರುತ್ತಿತ್ತು. ವಿರೋಧಿಗಳನ್ನು ದಮನಿಸುವ ಶಕ್ತಿಯನ್ನು ಅವರಿಗೆ ಆರು ಒದಗಿಸಿತ್ತಾದರೂ ಆರು ಅನೇಕ ಅವಮಾನಗಳನ್ನೂ ಸೃಷ್ಟಿಸಿತ್ತು. ಅವರ ಜಾತಕದಲ್ಲಿ ಕೇತು ಗುರುವನ್ನು ನಿಯಂತ್ರಿಸಿದ್ದು ಇದಕ್ಕೆ ಕಾರಣ. ಆದರೆ ಮೋಹಕ ರೂಪ ಶುಭಕರ್ತರಿ ಸೂರ್ಯ ಶನಿ ತರುವ ಮಾತಿನ ದೋಷವನ್ನು ನಿಯಂತ್ರಿಸಿದ್ದ. ಇನ್ನಿಷ್ಟು ವಿವರಗಳು ವಿಶ್ಲೇಷಣೆಗಳು ಬೇಡ. ಇದು ಅವರ ವೈಯುಕ್ತಿಕ ಜೀವನವನ್ನು ಕದಲಂತಾಗುತ್ತದೆ. ಅದು ಸಾಧುವಲ್ಲ. ರಿಚರ್ಡ್ ನಿಕ್ಸನ್ ಅಮೆರಿಕಾದ ಮಾಜಿ ಅಧ್ಯಕ್ಷ. ಅವರ ಸಂಂಖ್ಯೆ ಎರಡು, ಯಾವಾಗಲೂ ಆಘಾತಕಾರಿಯಾಗಿರುತ್ತಿತ್ತು. ಸಂಖ್ಯೆ ಎರಡು ಶುಭ ಪ್ರದವಾದುದಲ್ಲವಾದ್ದರಿಂದ ಅದರ ವಾಕ್ ಸ್ಥಾನಕ್ಕೆ ಪೆಟ್ಟು ಒದಗಿತ್ತು. ಅಧ್ಯಕ್ಷರಿಗೆ ಸಲ್ಲದ ಮಾತಿನ ಚಲಾವಣೆ ಅವರಿಂದ ಸಾಧ್ಯವಾಗಿ ವಾಟರ್ ಗೇಟ್ ಹಗರಣ ಸಂಭವಿಸಿತು. ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾದರು. ಕ್ಲಿಂಟನ್ ಕೂಡಾ ಅಮೆರಿಕಾದ ಮಾಜಿ ಅಧ್ಯಕ್ಷರು. ಎರಡು ಅವರ ಅದೃಷ್ಟ ಸಂಖ್ಯೆ. ಹೀಗಾಗಿ ಅವರ ಜಾತಕದ ಸೂರ್ಯ ಪದಚ್ಯುತರಾಗುವ ಅವಕಾಶವಿದ್ದರೂ ಅವಮಾನವನ್ನು ತಪ್ಪಿಸಿದ್ದ. ಹೀಗೆ ದಾಖಲಿಸುತ್ತ ಹೋದರೆ ಅಂಕಿಸಂಖ್ಯೆಗಳು ಮಾನವನ ಏಳುಬೀಳುಗಳಲ್ಲಿ ನಿವಃಸುವ ಪಾತ್ರ ದೊಡ್ಡದು. ಹೀಗಾಗಿ ಅಂಕಿ ಸಂಖ್ಯೆಗಳಲ್ಲಿ ಹಣದ ಲೆಕ್ಕಾಚಾರ ಮಾತ್ರವಲ್ಲ ಬದುಕಿನ ಕ್ರಿಯಾಶೀಲ ಯಶಸ್ಸಿನ ಪಾತ್ರಕ್ಕೂ ದಾರಿಗಳು ಅಡಗಿವೆ.