Advertisement

ಉತ್ತಮ ಬದುಕು ನಮ್ಮ ಕೈಯಲ್ಲಿದೆ

05:40 AM Jan 11, 2019 | Team Udayavani |

ಕಲಬುರಗಿ: ಜನನ ಮತ್ತು ಮರಣ ನಮ್ಮ ಕೈಯೊಳಗಿಲ್ಲ. ಆದರೆ ನಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆದ್ದರಿಂದ ಘನವಾದ ಕಾರ್ಯಗಳನ್ನು ಮಾಡುತ್ತಾ ನಮ್ಮ ದೇಹ ಅಳಿದ ನಂತರವೂ ಶಾಶ್ವತವಾಗಿ ನೆನಪು ಉಳಿಯುವ ಕೆಲಸ ಮಾಡಬೇಕೆಂದು ಶನಿ ಧಾರಾವಾಹಿ ಖ್ಯಾತಿಯ ಹನುಮಂತನ ಪಾತ್ರಧಾರಿ ಬಾಲನಟ ಕನಿಷ್ಕಾ ಆರ್‌. ದೇಸಾಯಿ ತಿಳಿಸಿದರು.

Advertisement

ನಗರದ ಶಹಾಬಜಾರದಲ್ಲಿರುವ ಪರುಷ ಮಠದ ಚನ್ನಮಲ್ಲೇಶ್ವರ ಶಾಲಾ ಆವರಣದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ‘ವಿಶಿಷ್ಟ ಕಲೆ-ವಿವಿಧ ಫಲ’ ಎಂಬ ಕಲೆ ಜೀವನದ ನೆಲೆಬೆಲೆಯ ಚೆಲುವು ಎನ್ನುವ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಒಂದೊಂದು ಅದ್ಭುತ ಶಕ್ತಿಯಿರುತ್ತದೆ. ಅದು ಸದ್ವಿನಿಯೋಗವಾಗಬೇಕು. ಹುಡುಗಾಟ ಬಿಟ್ಟು ಹುಡುಕಾಟದ ಕಡೆಗೆ ಮತ್ತು ನಾನು ಎಂಬುದನ್ನು ತೊರೆದು ನಾವು ಎನ್ನುವತ್ತ ಹೆಜ್ಜೆಯಿಡಬೇಕೆಂದರು. ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸಿದ್ರಾಮಪ್ಪ ಉಕಲಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಏಷಿಯನ್‌ ಕರಾಟೆ ಚಾಂಪಿಯನ್‌ಗಳಾದ ಮನೋಹರಕುಮಾರ ಬೀರನೂರ, ಮಾಲಾಶ್ರೀ ರಾಜೇಂದ್ರ ಹರಳಯ್ಯ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next