Advertisement

ವೆಬ್‌ ಫ್ಲಿಪ್ಪಿಂಗ್‌ನಿಂದ ಉತ್ತಮ ಆದಾಯ

11:16 PM Dec 24, 2019 | Team Udayavani |

ತ್ವರಿತಗತಿಯಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಅನೇಕ ಉದ್ಯೋಗವಕಾಶಗಳು ಲಭ್ಯವಿದ್ದು, ಸಕಾಲದಲ್ಲಿ ಇದರ ಉಪಯೋಗ ಪಡೆದುಕೊಳ್ಳುವುದರೊಂದಿಗೆ ಉತ್ತಮ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಕಲಿಕೆಯ ಜತೆಯಲ್ಲಿ ಉದ್ಯೋಗ ಅರಸಿ ಬರುವವರಿಗೆ ಹೊಸ ತಂತ್ರಜ್ಞಾನ ಬೆಳವಣಿಗೆ ಸಹಕಾರಿ. ಈ ರೀತಿ ಕಲಿಕೆಯ ಜತೆ ಕೆಲಸ ಮಾಡಲು ವೆಬ್‌ಸೈಟ್‌ ಫ್ಲಿಪ್ಪಿಂಗ್‌ ಒಂದು ಉತ್ತಮ ವೇದಿಕೆ.

Advertisement

ಯಾವ ರೀತಿ ಹಣ ಗಳಿಸಬಹುದು?
ಮೊದಲಿಗೆ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ನೆಚ್ಚಿನ ವಿಷಯವನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ನಡೆಸಬೇಕಾಗುತ್ತದೆ. ಇದರಿಂದ ನಿಮ್ಮ ಜ್ಞಾನ ವೃದ್ಧಿಯ ಜತೆಗೆ ಬರವಣಿಗೆ ಕೌಶಲ ಹೆಚ್ಚುತ್ತದೆ. ಜತೆಗೆ ಆಕರ್ಷಕ ವಿಷಯಗಳು ಹೊರ ಬರುತ್ತವೆ.

ಉತ್ತಮ ಶೀರ್ಷಿಕೆ: ನೀವು ಉತ್ತಮ ಬರಹಗಾರರು ಮತ್ತು ವಿಷಯಗಳ ಆಯ್ಕೆಯಲ್ಲಿ ಉತ್ತಮರಾದರೆ ಉತ್ತಮ ಶೀರ್ಷಿಕೆಯೊಂದಿಗೆ ನಿಮ್ಮ ಬರಹವನ್ನು ಮುಂದುವರಿಸಿದರೆ ವೆಬ್‌ಸೈಟ್‌ ಫ್ಲಿಪ್ಪಿಂಗ್‌ನಲ್ಲಿ ಉತ್ತಮ ಆದಾಯಗಳಿಸಬಹುದು. ಮನೆಯಲ್ಲಿಯೇ ಕುಳಿತು ನಿಮ್ಮ ಆಯ್ಕೆಯ ವಿಷಯವನ್ನು ಆರಿಸಿ ಮುಂದುವರಿಯಬಹುದಾಗಿದೆ. ಜತೆಗೆ ಉತ್ತಮ ಕೀವರ್ಡ್‌ಗಳನ್ನು ಹೊಂದಿದ್ದರೆ ಇನ್ನಷ್ಟು ಆಕರ್ಷಕವಾಗಿರುತ್ತದೆ. ಸೇವಾ ಪೂರೈಕೆದಾರರನ್ನು ಬಳಸಿಕೊಂಡು ಆನ್‌ಲೈನ್‌ ಮೂಲಕ ಹೆಸರು ಗಳಿಸುವುದರೊಮದಿಗೆ ಆದಾಯವನ್ನು ಪಡೆಯಬಹುದು.

ವೆಬ್‌ಹೋಸ್ಟಿಂಗ್‌: ಒಂದು ವಿಷಯದ ಪೂರಕ ಅಂಶವನ್ನು ಆಯ್ಕೆ ಮಾಡಿ ಹೋಸ್ಟ್‌ ಮಾಡಲು ಬಳಸಬಹುದು. ಟೆಂಪ್ಲೇಟುಗಳು ವೆಬ್‌ ವಿನ್ಯಾಸದಲ್ಲಿ ಅತ್ಯುತ್ತಮ ಟ್ರೆಡಿಂಗ್‌ ವಿನ್ಯಾಸಗಳಾಗಿವೆ. ನಿಮ್ಮ ವೆಬ್‌ಸೈಟ್‌ಗೆ ಅಗತ್ಯವಿರುವ ಎಲ್ಲ ಅಂತರ್ಗತ ಪ್ಲಗ್‌ ಇನ್‌ಗಳು ಬಳಸಿಕೊಂಡು ನಿಮ್ಮದೇ ಆದ ವೆಬ್‌ಸೈಟ್‌ ಪ್ರಾರಂಭಿಸಬಹುದು. ಜಾಹೀರಾತುಗಳಿಗಾಗಿ ಗೂಗಲ್‌ ಆಡ್‌ಸೆನ್ಸ್‌ ನಿಮ್ಮ ವೆಬ್‌ಸೈಟ್‌ಗೆ ಬೇಕಾದ ಕೋಡ್‌ ಅನ್ನು ಒದಗಿಸುತ್ತದೆ. ಇದು ಹೆಚ್ಚಿನ ಆದಾಯ ಗಳಿಸಲು ನಿಮಗೆ ಸಹಕರಿಸುತ್ತದೆ. ಜನರು ಪ್ರಮುಖ ಮತ್ತು ನೈಜ ಸುದ್ದಿಯತ್ತ ಹೆಚ್ಚು ಆಕರ್ಷಿತರಾಗುವುದರಿಂದ ಉತ್ತಮ ಮಾಹಿತಿಯುಳ್ಳು ಸುದ್ದಿಯನ್ನು ಪೋಸ್ಟ್‌ ಮಾಡಬೇಕಾಗುತ್ತದೆ.

ಏನಿದು ವೆಬ್‌ಸೈಟ್‌ ಫ್ಲಿಪ್ಪಿಂಗ್‌?
ಒಂದು ವೆಬ್‌ಸೈಟ್‌ ಖರಿರೀದಿಸಿ ಅದರ ಒಟ್ಟಾರೆ ಆಂಶಗಳನ್ನು ಸುಧಾರಿಸುವುದು, ವಿವಿಧ ಸರ್ಚ್‌ ಎಂಜಿನ್‌ಗಳನ್ನು ಉತ್ತಮಗೊಳಿಸಿ ಜನರಿಗೆ ಮಾಹಿತಿ ನೀಡುವಂತೆ ಮಾಡುವುದೇ ವೆಬ್‌ಸೈಟ್‌ ಫ್ಲಿಪ್ಪಿಂಗ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next