ಉಳ್ಳಾಲ: ನಾವು ಮಾಡಿದ ಸತ್ಕರ್ಮಗಳು ನಮ್ಮ ಬದುಕಿಗೆ ಒಳಿತ ನ್ನೊದಗಿಸುತ್ತವೆ. ಇನ್ನೊಬ್ಬರ ಸಂಕಷ್ಟಕ್ಕಾಗಿ ಉದಾರವಾಗಿ ನೀಡುವ ದಾನ ವಿಪತ್ತುಗಳಿಂದ ನಮ್ಮನ್ನು ಕಾಪಾಡುತ್ತವೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.
ಮಿಲ್ಲತ್‌ನಗರ ಮಸೀದಿ ಮತ್ತು ಪರಿಸರದ ನಿವಾಸಿಗಳ ಉಪಯೋಗಕ್ಕಾಗಿ ದಾನಿಯೊಬ್ಬರ ನೆರವಿನಿಂದ ನಿರ್ಮಾಣ ವಾಗಲಿರುವ ತೆರೆದಬಾವಿ ಕಾಮಗಾರಿಗೆ ನಡೆದ ಆರಂಭಿಕ ಪ್ರಕ್ರಿಯೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀರಿನ ಸಮಸ್ಯೆ ಪರಿಹಾರಕ್ಕಾಗಿ ದರ್ಗಾದ ಮಾಜಿ ಸದಸ್ಯ ಕಬೀರ್ ಚಾಯಬ್ಬ ಅವರ ಪ್ರಯತ್ನದ ಫಲವಾಗಿ ಬೆಂಗಳೂರಿನ ದಾನಿಗಳು ಬಾವಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಆ ಕಾರ್ಯಕ್ಕೆ ಭಗವಂತನು ತಕ್ಕುದಾದ ಪ್ರತಿಫಲ ನೀಡಲಿ ಎಂದು ಹಾರೈಸಿದರು.
ಉಳ್ಳಾಲದ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾಗೈದರು.ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಸಮಾಜ ಸೇವಕ ಕಬೀರ್ ಚಾಯಬ್ಬ, ಉಳ್ಳಾಲ ದರ್ಗಾ ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್, ಕೌನ್ಸೆಲರ್ ಯು.ಎಂ. ಜಬ್ಟಾರ್, ಉಳ್ಳಾಲ ದರ್ಗಾ ಜತೆ ಕಾರ್ಯದರ್ಶಿ ನೌಷಾದ್ ಅಬೂಬಕ್ಕರ್, ಉಳ್ಳಾಲ ಅರೇಬಿಕ್ ಟ್ರಸ್ಟ್ ಜತೆ ಕಾರ್ಯದರ್ಶಿ ಆಶಿಫ್ ಅಬ್ದುಲ್ಲ, ದರ್ಗಾ ಸದಸ್ಯರಾದ ಉದ್ಯಮಿ ಅಲಿಮೋನು, ಯು.ಕೆ. ಯುಸೂಫ್ ಉಳ್ಳಾಲ್, ಆದ್ದಂ ಕೋಟೆಪುರ, ಹಮ್ಮಬ್ಬ ಕೋಟೆಪುರ, ಎಸ್.ಡಿ.ಪಿ.ಐ. ಮುಖಂಡ ನಿಝಾಮ್ ಮೇಲಂಗಡಿ, ಉಳ್ಳಾಲ ಸಯ್ಯದ್ ಇಬ್ರಾಹಿಂ ತಂಙಳ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಅದ್ರಾಮ, ಗುತ್ತಿಗೆದಾರ ಮಹಮ್ಮದ್ ಮೇಸ್ತ್ರಿ, ಹೊಸಪಳ್ಳಿ ಸದಸ್ಯರಾದ ಕಬೀರ್ ಬುಖಾರಿ, ಹಸೈನಾರ್ ಜಿ.ಎಂ.ಹೌಸ್, ಇಬ್ರಾಹಿಂ ಕಲ್ಲಾನ ಹಾಗೂ ಖಾದರ್ ಮಿಲ್ಲತ್‌ನಗರ ಉಪಸ್ಥಿತರಿದ್ದರು.