Advertisement

ಡ್ಯಾನ್ಸ್‌ನಿಂದ ಉತ್ತಮ ಆರೋಗ್ಯ

10:22 PM Jan 20, 2020 | mahesh |

ಆರೋಗ್ಯಕರವಾಗಿದ್ದ ದೇಹವಿದ್ದರೆ ಮಾತ್ರ ಏನೇ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಇಂದು ಜಿಮ್‌ ಮೊದಲಾದ ಫಿಟ್ನೆಸ್‌ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದೆ. ಫಿಟ್ನೆಸ್‌ ಕಾಪಾಡಲು ಜಿಮ್‌ ಒಂದೇ ಮಾರ್ಗವಲ್ಲ. ಮನೆಯಲ್ಲಿಯೇ ಇದ್ದು, ಸುಲಭವಾಗಿಯೂ ಫಿಟೆ°ಸ್‌ ಕಾಪಾಡಬಹುದು. ಸುಲಭವಾಗಿ ಫಿಟ್‌ ಆಗಿರಲು ಡ್ಯಾನ್ಸ್‌ ಹೆಚ್ಚು ಸಹಕಾರಿ. ಡ್ಯಾನ್ಸ್‌ ಎಲ್ಲರಿಗೂ ಇಷ್ಟವಾದ ಕಲೆಯಾದ್ದರಿಂದ ಕಲೆಯ ಜತೆಗೆ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ.

Advertisement

ಡ್ಯಾನ್ಸ್‌ ಎಂದರೆ ಅದು ಕೇವಲ ಮನೋರಂಜನೆ, ಹವ್ಯಾಸ ಮಾತ್ರವಲ್ಲ. ಡ್ಯಾನ್ಸ್‌ ಫಿಟೆ°ಸ್‌ಗೂ ಸಹಕಾರಿ. ಪ್ರತಿದಿನ ಡ್ಯಾನ್ಸ್‌ ಮಾಡುವುದರಿಂದ ಆರೋಗ್ಯವಾಗಿರಬಹುದು ಎಂಬುದು ತಜ್ಞರ ಮಾತೂ ಹೌದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಲು ಸಾಧ್ಯವಿರುವುದರಿಂದ ಫಿಟ್ನಸ್‌ಗಾಗಿ ಡ್ಯಾನ್ಸ್‌ ಉತ್ತಮ ಆಯ್ಕೆ.

ಫಿಟ್ನಸ್‌ಗಾಗಿ ಝೂಂಭಾ ಮೊದಲಾದ ಡ್ಯಾನ್ಸ್‌ಗಳಿದ್ದರೂ ಎಲ್ಲ ಡ್ಯಾನ್ಸ್‌ ಫಾರ್ಮ್ಗಳು ಆರೋಗ್ಯಕ್ಕೆ ಸಹಕಾರಿ. ಪ್ರತಿದಿನ ಡ್ಯಾನ್ಸ್‌ ಮಾಡುವುದರಿಂದ ಆರೋಗ್ಯಕರವಾಗಿರಬಹುದು. ದೇಹದಲ್ಲಿದ್ದ ಕೊಬ್ಬಿನ ಅಂಶಗಳನ್ನು ಕರಗಿಸಲು ಇದು ಸಹಕಾರಿಯಾಗಿದೆ.

ಡ್ಯಾನ್ಸ್‌ನಿಂದ ಫಿಟ್‌
ದೇಹದಲ್ಲಿದ್ದ ಹೆಚ್ಚುವರಿ ಕೊಬ್ಬು ಪ್ರತಿದಿನ ಡ್ಯಾನ್ಸ್‌ ಮಾಡುವುದರಿಂದ ಕರಗುತ್ತದೆ. ಇದಕ್ಕಾಗಿ ಯಾವುದೇ ತರಬೇತಿಯ ಅಗತ್ಯವಿಲ್ಲ. ನಿಮಗಿಷ್ಟವಾಗುವ ಸಾಂ0ಗ್‌ ಹಾಕಿ ನಿಮಗಿಷ್ಟವಾಗುವಂತೆ ಪ್ರತಿದಿನ ಬೆಳಗ್ಗೆ ನಿಯಮಿತ ಅವಧಿಯವರೆಗೆ ಡ್ಯಾನ್ಸ್‌ ಮಾಡುವುದರಿಂದ ಫಿಟ್‌ ಆಗಿರಲು ಸಾಧ್ಯ. ಇದರಿಂದ ಹೊಟ್ಟೆ, ಕಾಲುಗಳಲ್ಲಿರುವ ಕೊಬ್ಬು ಕರಗಿ ಫಿಟ್‌ ಆಗಿರಲು ಸಾಧ್ಯ. ಇದು ಸುಲಭ ಮತ್ತು ಸರಳ ಫಿಟ್ನಸ್‌ ಟಿಪ್ಸ್‌ ಆಗಿದೆ.

ತಿಳಿದುಕೊಳ್ಳ ಬೇಕಾದ ವಿಷಯ
1 ಡ್ಯಾನ್ಸ್‌ ಮಾಡುವಾಗ ಹೆಚ್ಚು ಬಿಗಿಯಾದ ಉಡುಪು ಧರಿಸುವುದನ್ನು ತಪ್ಪಿಸಿ.
2 ಡ್ಯಾನ್ಸ್‌ಗೂ ಮೊದಲು ಮತ್ತು ಅನಂತರ ಹೆಚ್ಚು ನೀರು ಕುಡಿಯುವ ಅಭ್ಯಾಸ ಉತ್ತಮ.
3 ಪ್ರತಿದಿನ ನಿರ್ದಿಷ್ಟ ಅವಧಿಯವರೆಗೆ ಡ್ಯಾನ್ಸ್‌ ಮಾಡಿದರೆ ಮಾತ್ರ ದೇಹದಲ್ಲಿ ವ್ಯತ್ಯಾಸ ಕಾಣಲು ಸಾಧ್ಯ.
4 ಯಾವುದೇ ಒತ್ತಡವಿಲ್ಲದೆ ಮನಸ್ಸಿಗನಿಸಿದಂತೆ ಡ್ಯಾನ್ಸ್‌ ಮಾಡಿ. ಆದರೆ ಡ್ಯಾನ್ಸ್‌ ದೇಹಕ್ಕೆ ವ್ಯಾಯಾಮ ನೀಡಲು ರೀತಿಯಲ್ಲಿದ್ದರೆ ಪರಿಣಾಮ ಕಾಣಲು ಸಾಧ್ಯ.

Advertisement

ಡ್ಯಾನ್ಸ್‌ನ ಪ್ರಯೋಜನ
1 ಸ್ನಾಯುಶಕ್ತಿ ಹೆಚ್ಚುತ್ತದೆ: ಪ್ರತಿದಿನ ಡ್ಯಾನ್ಸ್‌ ಮಾಡುವುದರಿಂದ ಸ್ನಾಯುಗಳು ಹೆಚ್ಚು ಬಲಿಷ್ಠವಾಗಲಿದೆ. ಡ್ಯಾನ್ಸ್‌ ನಿಂದ ದೇಹಕ್ಕೆ ವ್ಯಾಯಾಮ ದೊರೆಯುವುದರಿಂದ ಸ್ನಾಯುಗಳು ಬಲಿಷ್ಠವಾಗುತ್ತದೆ.
2 ಏರೋಬಿಕ್‌ ಫಿಟ್ನೆಸ್‌ ದೊರೆಯುತ್ತದೆ: ಏರೋಬಿಕ್‌ ಕ್ಲಾಸ್‌ಗಳಿಂದ ದೊರೆಯುವ ಆರೋಗ್ಯವು ಈ ಡ್ಯಾನ್ಸ್‌ಗಳಿಂದ ದೊರೆಯುತ್ತದೆ.
3 ತೂಕ ನಿಯಂತ್ರಣ: ಡ್ಯಾನ್ಸ್‌ ನಿಂದ ತೂಕ ನಿಯಂತ್ರಣ ಸಾಧ್ಯ. ಇದರಿಂದ ದೇಹ ಫಿಟ್‌ ಆಗಿರಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next