Advertisement
– ದಾಳಿಂಬೆ ಹಣ್ಣಿನ ಸೇವನೆಯಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.-ಈ ಹಣ್ಣಿನ ರಸದಲ್ಲಿ ಸಿಟ್ರಿಕ್ ಮತ್ತು ಮಾಲಿಕ್ ಆಮ್ಲ ಅಧಿಕವಾಗಿವೆ.
-ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಉರಿ ಕಡಿಮೆಯಾಗುತ್ತದೆ.
– ದಾಳಿಂಬೆ ಹಣ್ಣಿನ ರಸ ಸೇವಿಸುವುದರಿಂದ ಹೃದಯ ಹಾಗೂ ಮೂತ್ರಪಿಂಡಗಳ ಕೆಲಸ ಸರಾಗವಾಗುತ್ತದೆ.
-ದಾಳಿಂಬೆಯ ಚಿಗುರಿನಿಂದ ಹಲ್ಲುಜ್ಜಿದರೆ ಅಥವಾ ಬಾಯಲ್ಲಿ ಹಾಕಿಕೊಂಡು ಜಗಿದರೆ ಹಲ್ಲುನೋವು ಮತ್ತು ಒಸಡಿನ ರಕ್ತಸ್ರಾವ ನಿಯಂತ್ರಣಗೊಳ್ಳುವುದು.
-ದಾಳಿಂಬೆ ಕಾಳುಗಳನ್ನು ನುಣ್ಣಗೆ ಅರೆದು, ಉಗುರು ಬೆಚ್ಚಗಿನ ನೀರಿನಲ್ಲಿ ಕದಡಿ ಕುಡಿಯುವುದರಿಂದ ಆಮಶಂಕೆ, ಅತಿಸಾರ ಭೇದಿ ನಿಲ್ಲುತ್ತದೆ.
-ಒಂದು ಚಮಚದಷ್ಟು ದಾಳಿಂಬೆ ರಸಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪ ಬೆರೆಸಿ ಪ್ರತಿನಿತ್ಯವೂ ಸೇವಿಸುತ್ತಿದ್ದರೆ ಕಣ್ಣಿನ ನರಗಳು ಶಕ್ತಿ ಪಡೆಯುತ್ತವೆ.
-ಎರಡು ಚಮಚದಷ್ಟು ದಾಳಿಂಬೆ ರಸಕ್ಕೆ ಒಂದು ಚಮಚದಷ್ಟು ಜೇನುತುಪ್ಪ ಬೆರೆಸಿ ಕುಡಿದರೆ ತಲೆನೋವು ಕಡಿಮೆಯಾಗುವುದು.
-ದಾಳಿಂಬೆ ಕಾಳುಗಳನ್ನು ತೆಗೆದ ನಂತರ ಉಳಿಯುವ ದಿಂಡನ್ನು ಬೇಯಿಸಿ ಕಷಾಯ ತಯಾರಿಸಿ, ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು-ಗಂಟಲಿನ ಕಿರಿಕಿರಿ ಹೋಗುತ್ತದೆ.
-ದಾಳಿಂಬೆ ಹಣ್ಣಿನ ದಿಂಡನ್ನು ಬೇಯಿಸಿ, ಮೆಂತ್ಯೆಯ ಕಷಾಯದೊಂದಿಗೆ ಬೆರಸಿ 2 ಚಮಚದಷ್ಟು ಜೇನುತುಪ್ಪ ಬೆರೆಸಿ ಕುಡಿದರೆ ಆಮಶಂಕೆ ಗುಣವಾಗುತ್ತದೆ.