Advertisement

“ಉತ್ತಮ ಆಡಳಿತ, ವ್ಯವಸ್ಥೆ ಪಾರದರ್ಶಕ ವ್ಯವಹಾರ ಯಶಸ್ಸಿಗೆ ಗುಟ್ಟು ‘

08:23 PM Oct 11, 2020 | Suhan S |

ಮುಂಬಯಿ, ಅ. 10: ಭಾರತ್‌ ಬ್ಯಾಂಕ್‌ ಉದ್ಯೋಗಿಗಳ ನಗುಮಖದ ಪ್ರಾಮಾಣಿಕ ಸೇವೆಯು ನಮ್ಮ ಸಂಸ್ಥೆಗೆ ಗ್ರಾಹಕ ಸ್ನೇಹಿ ಎಂಬ ಅನ್ವರ್ಥ ಹೆಸರನ್ನು ಗಳಿಸಿಕೊಟ್ಟಿದೆ. ಕೋವಿಡ್‌ ಸಾಂಕ್ರಾಮಿಕ ರೋಗದ ಕರಾಳ ದಿನಗಳುದ್ದಕ್ಕೂ ನಮ್ಮ ಬ್ಯಾಂಕ್‌ ಅಡೆ-ತಡೆ ಇಲ್ಲದ ನಿರಂತರೆಯನ್ನು ಕಾಯ್ದುಕೊಳ್ಳಲು ಸಿಬಂದಿ ಕಾರಣ. ಉತ್ತಮ ಆಡಳಿತ ವ್ಯವಸ್ಥೆ ಪಾರದರ್ಶಕ ವ್ಯವಹಾರ ಮಾನವ ಸಂಪನ್ಮೂಲಗಳೇ ನಮ್ಮ ಯಶಸ್ವಿನ ಗುಟ್ಟು. ಇದನ್ನು ಇನ್ನಷ್ಟು ಬಲ ಪಡಿಸಿದಾಗ ನಮ್ಮ ಬ್ಯಾಂಕು ಉಜ್ವಲತೆಯತ್ತ ಸಾಗುವುದು ಎಂದು ಭಾರತ್‌ ಬ್ಯಾಂಕಿನ ನೂತನ ಕಾರ್ಯಾಧ್ಯಕ್ಷ ಯು. ಎಸ್‌. ಪೂಜಾರಿ ತಿಳಿಸಿದರು.

Advertisement

ಆ. 21 ರಂದು ಗೋರೆಗಾಂವ್‌ ಪೂರ್ವದ ಭಾರತ್‌ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಬ್ಯಾಂಕಿನ 42ನೇ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಬ್ರಹ್ಮಶ್ರೀ ನಾರಾ ಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ನಮ್ಮ ಮಾತೃ ಸಂಸ್ಥೆಯಾಗಿದೆ. ಅವರ ಸಾಮಾ ಜಿಕ ಕೊಡುಗೆಗಳನ್ನು ಬದ್ಧತೆಯಿಂದ ಕಾಪಾಡು ವುದು ನಮ್ಮೆಲ್ಲರ ಕರ್ತವ್ಯ. ಭಾರತ್‌ ಬ್ಯಾಂಕ್‌ ಗ್ರಾಹಕರಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿದೆ. ಗ್ರಾಹಕರ ಖುಷಿಯೇ ಬ್ಯಾಂಕಿನ ಏಳ್ಗೆಯಾಗಿದೆ. ಬ್ಯಾಂಕ್‌ ಈಗಾಗಲೇ 100ಕ್ಕಿಂತಲೂ ಅಧಿಕ ಶಾಖೆ ಗ ಳನ್ನು ಹೊಂದಿದೆ. ಎಲ್ಲ ಶಾಖೆಗಳಲ್ಲಿ ಸಿಬಂದಿ  ಗ್ರಾಹಕ ಸ್ನೇಹಿಯಾಗಿ ಸೇವೆ ನೀಡುತ್ತಿದ್ದಾರೆ. ಇದಕ್ಕೆ ನಮ್ಮ ಮೊದಲ ಆದ್ಯತೆ ಯಾಗಿದೆ. ಅಭಿವೃದ್ಧಿಯಲ್ಲಿ ತುಳು, ಕನ್ನಡಿಗರ ಸಹಕಾರ, ಪ್ರೋತ್ಸಾಹ ಇದೇ ರೀತಿಯಲ್ಲಿ ಮುಂದು ವರಿ ಯಲಿ ಎಂದು ಆಶಿಸುತ್ತೇನೆ. ಲೋಕಕ್ಕೆ ಬಂದ ಕೋವಿಡ್  ಸಂಕಷ್ಟ ಆದಷ್ಟು ಬೇಗನೇ ಕೊನೆಗೊಳ್ಳಲಿ ಎಂದು ದೇವ ರಲ್ಲಿ ಪ್ರಾರ್ಥಿ ಸೋಣ ಎಂದು ನುಡಿದು ಶುಭಹಾರೈಸಿದರು.

ಭಾರತ್‌ ಬ್ಯಾಂಕಿನ ತಂತ್ರಜ್ಞಾನ ಮತ್ತು ಮಾಹಿತಿ ವಿಭಾಗದ ಅಧಿಕಾರಿ ನಿತ್ಯಾನಂದ ಎಸ್‌. ಕಿರೋಡಿಯನ್‌ ಅವರು ಮೊಬೈಲ್‌ನಲ್ಲಿ ಅಳವಡಿ ಸಲಾದ ವಿನೂತನ ವೈಬ್‌ಸೈಟ್‌ನ ಬಗ್ಗೆ ವಿವರಿಸಿದರು. ಈ ಸಂದ ರ್ಭ  ನಿರ್ದೇಶಕರಾದ ಭಾಸ್ಕರ ಎಂ. ಸಾಲ್ಯಾನ್‌, ನ್ಯಾಯವಾದಿ ಎಸ್‌. ಬಿ. ಅಮೀನ್‌, ಸೂರ್ಯಕಾಂತ್‌ ಜೆ. ಸುವರ್ಣ, ಪುರುಷೋತ್ತಮ ಎಸ್‌. ಕೋಟ್ಯಾನ್‌, ಮೋಹನ್‌ ಎ. ಪೂಜಾರಿ,ಪ್ರೇಮನಾಥ್‌ ಪಿ. ಪೂಜಾರಿ, ರಾಜ ವಿ. ಸಾಲ್ಯಾನ್‌, ಆಡಳಿತ ನಿರ್ದೇಶಕ ಹಾಗೂ ಸಿ.ಇ.ಒ ವಿದ್ಯಾನಂದ ಕರ್ಕೇರ, ಜತೆ ಆಡಳಿತ ನಿರ್ದೇಶಕ ದಿನೇಶ್‌ ಬಿ. ಸಾಲ್ಯಾನ್‌, ಮಹಾ ಪ್ರಬಂಧಕರಾದ ವಿಶ್ವನಾಥ ಜಿ. ಸುವರ್ಣ, ವಾಸುದೇವ ಎಂ. ಸಾಲ್ಯಾನ್‌, ಮಹೇಶ್‌ ಬಿ. ಕೋಟ್ಯಾನ್‌ ಹಾಗೂ ಅ ಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು. ಆಡಳಿತ ನಿರ್ದೇಶಕ ಡಿ ಹಾಗೂ ಸಿ.ಇ.ಒ ವಿದ್ಯಾನಂದ ಕರ್ಕೇರ ನಿರೂಪಿಸಿ ವಂದಿಸಿದರು.

ರಾಷ್ಟ್ರೀಯ ಪ್ರಶಸ್ತಿ :  ಮಹಾರಾಷ್ಟ್ರ ಅರ್ಬನ್‌ ಕೋ. ಅಪರೇಟಿವ್‌ ಬ್ಯಾಂಕ್ಸ್‌ ಫೆಡರೇಶನ್‌ ಲಿಮಿಟೆಡ್‌ ಮತ್ತು ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್‌ ಅಸೋಸಿಯೋಶನ್‌ ಲಿಮಿಟೆಡ್‌ ಸಂಸ್ಥೆಗಳಿಂದ ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್‌ ಪುರಸ್ಕಾರ ಸೇರಿದಂತೆ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ರಾಷ್ಟ್ರದ ಸಹಕಾರಿ ರಂಗದಲ್ಲಿಯೇ ಅಗ್ರಪಂಕ್ತಿಯಲ್ಲಿರುವ ಕನ್ನಡಿಗರ ಹಿರಿಮೆಯ ಬ್ಯಾಂಕ್‌ ಆಗಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ ರಾಜ್ಯಗಳು ಸೇರಿದಂತೆ ಒಟ್ಟು 105 ಶಾಖೆಗಳನ್ನು ಭಾರತ್‌ ಬ್ಯಾಂಕ್‌ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next