Advertisement
ಶನಿವಾರ ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ “ಭಾರತದ ಪರಿಕಲ್ಪನೆ- ಇಂದು ಮತ್ತು ನಾಳೆ’ ಎಂಬ ಶೀರ್ಷಿಕೆಯಡಿ ನಡೆದ ಎರಡನೆಯ “ಮಂಗಳೂರು ಲಿಟ್ ಫೆಸ್ಟ್’ ನಲ್ಲಿ “ಮನಿ ಮ್ಯಾಟರ್’ ಎಂಬ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರಕಾರವು ಪ್ರತಿಯೊಂದು ನಿರ್ಧಾರವನ್ನು ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಕೈಗೊಳ್ಳುತ್ತಿದೆ. ಇದರಿಂದ ಪ್ರಾರಂಭದಲ್ಲಿ ಜನರಿಗೆ ಸ್ವಲ್ಪ ತೊಂದರೆಗಳಾಗಬಹುದು. ದೇಶಕ್ಕಾಗಿ ಅದನ್ನು ಸಹಿಸಬೇಕಾಗುತ್ತದೆ ಎಂದರು.
Related Articles
Advertisement
ತೆರಿಗೆ ಸಂಗ್ರಹ ವೃದ್ಧಿತೆರಿಗೆದಾರರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದು, ಪ್ರಮಾಣ ಶೇ. 15ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು. ವಿದೇಶ ಗಳಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳು ಅಧಿಕ ಪ್ರಮಾಣದಲ್ಲಿ ಆಮದು ಆಗುವುದರಿಂದ ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಖರ್ಚಾಗುತ್ತದೆ. ಉಳಿತಾಯದ ನಿಟ್ಟಿನಲ್ಲಿ ಭಾರತದಲ್ಲಿಯೇ ವಿದೇಶಿ ಕಂಪೆನಿಗಳ ಉತ್ಪನ್ನಗಳ ತಯಾರಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು. ಜನ್‌ಧನ್ ಖಾತೆದಾರರಿಗೆ ಮುದ್ರಾ ಸಾಲ ನೀಡಿಕೆಯನ್ನು ನಿರಾಕರಿಸಲಾಗದು; ಹಾಗೇನಾದರೂ ಸಾಲ ನೀಡಲು ಬ್ಯಾಂಕುಗಳು ನಿರಾಕರಿಸಿದರೆ ತನಗೆ ತಿಳಿಸಬೇಕು ಎಂದು ಅನುರಾಗ್ ಸಿಂಗ್ ಠಾಕೂರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಪೌಷ್ಟಿಕತೆ ಅಂಕಿ-ಅಂಶ
ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲು ತ್ತಿರುವ ಜನರ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ವರದಿ ತಯಾರಿಸಿದ್ದು, ಶೀಘ್ರದಲ್ಲಿಯೇ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದರು. ಲೆಕ್ಕ ಪರಿಶೋಧಕ ವಿವೇಕ್ ಮಲ್ಯ ಗೋಷ್ಠಿಯ ಸಮನ್ವಯಕಾರರಾಗಿದ್ದರು. ಹಿಂದುತ್ವದಿಂದ ಬಹುತ್ವ: ಕಿಯೋನ್‌ರಾಡ್ ಎಲ್‌ಸ್ಟ್
ಮಂಗಳೂರು: ಭಾರತದಲ್ಲಿ ಹಿಂದುತ್ವದಿಂದಾಗಿ ಬಹುತ್ವ ಸಾಧ್ಯವಾಗಿದೆ ಎಂದು ವಿದೇಶಿ ಮೂಲದ ಹಿಂದುತ್ವ ಪ್ರತಿಪಾದಕ, ಲೇಖಕ ಕಿಯೋನ್‌ರಾಡ್ ಎಲ್‌ಸ್ಟ್ ಹೇಳಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್‌ನ ಸಮಾರೋಪ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಯೋಧ್ಯೆ ವಿಚಾರದಲ್ಲಿ ಕೊನೆಗೂ ಹಿಂದೂಗಳಿಗೆ ನ್ಯಾಯ ದೊರೆತಿದೆ. ಅಯೋಧ್ಯೆ ಹಿಂದೂಗಳ ಆರಾಧನಾ ಸ್ಥಳವಾಗಿರುವುದರಿಂದ ಅದು ಹಿಂದೂಗಳಿಗೆ ಅರ್ಹವಾಗಿಯೇ ಸಿಗಬೇಕಿತ್ತು. ದೇಶದ ಬಹುಸಂಖ್ಯಾಕರಿಗೆ ಸಮಾನ ಅಧಿಕಾರ ಬೇಕಾಗಿದೆ ಎಂದು ಕಿಯೋನ್‌ರಾಡ್ ಹೇಳಿದರು. ಇನ್ನೋರ್ವ ಚಿಂತಕ ಆರ್. ಜಗನ್ನಾಥನ್ ಮಾತನಾಡಿ, ಭಾರತ್ ಕಲ್ಪನೆ ಮತ್ತು ಇಂಡಿಯಾ ಕಲ್ಪನೆಗಳು ಒಂದಾಗಬೇಕು. ಭಾರತೀಯ ಮುಸ್ಲಿಮರೂ “ಭಾರತ್ ಕಲ್ಪನೆ’ಯನ್ನು ಒಪ್ಪಿಕೊಳ್ಳಬೇಕಿದೆ. ಭಾರತದ ಧಾರ್ಮಿಕ ಇತಿಹಾಸ ಶಾಸ್ತ್ರವನ್ನು ಹೊಸದಾಗಿ ರಚಿಸುವ ಅಗತ್ಯವಿದೆ ಎಂದರು. “ಸಂಘಟಿತ ಧರ್ಮದ ಭಾಗವಾಗಬೇಡಿ’
ಮಂಗಳೂರು: ಸಂಘಟಿತ ಧರ್ಮದ (ಆರ್ಗನೈಸ್ಡ್ ರಿಲೀಜನ್) ಭಾಗವಾಗಬೇಡಿ ಎಂದು ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಸಲಹೆ ಮಾಡಿದ್ದಾರೆ. “ಇಸ್ಲಾಂ ಇನ್ ಇಂಡಿಯಾ: ದ ರೋಡ್ ಅಹೆಡ್’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಸೂಫಿ ಸಂತರು ಅರಬ್ ಮೂಲದ ಸಂಘಟನಾತ್ಮಕ ಧರ್ಮದ ದಾರಿಯನ್ನು ಬಿಟ್ಟು ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದ್ದರು. ಅವರು ಸಂಘಟಿತ ಧರ್ಮದ ಪ್ರಬಲ ವಿರೋಧಿಗಳಾಗಿದ್ದರು ಎಂದವರು ವಿವರಿಸಿದರು. ಇಸ್ಲಾಂ ಏಕ ದೇವತಾ ವಾದವನ್ನು ಪ್ರತಿಪಾದಿಸುವ ಧರ್ಮ ಆಗಿದೆಯೇ ಹೊರತು ಏಕ ವ್ಯಾಖ್ಯಾನದ ಧರ್ಮವಲ್ಲ. ಆರಂಭದ ಕಾಲದಿಂದಲೂ ಇಸ್ಲಾಂ ರಾಜಕೀಯವಾಗಿ ಅತ್ಯಂತ ಪ್ರಬಲವಾಗಿ ಬೆಳೆದಿದೆ. ಈಗಲೂ “ರಾಜಕೀಯ ಇಸ್ಲಾಂ’ನ ಬಗ್ಗೆಯೇ ಹೆಚ್ಚು ಚರ್ಚೆಗಳಾಗುತ್ತಿವೆ ಎಂದರು. ವ್ಯತ್ಯಾಸ ಗೌರವಿಸೋಣ
ದಕ್ಷಿಣ ಭಾರತದ ಮುಸ್ಲಿಮರು ಹೆಚ್ಚು ಸುಶಿಕ್ಷಿತರು. ಇಲ್ಲಿ ಸಹಧರ್ಮಗಳೊಂದಿಗೆ ಸಾಮರಸ್ಯ ಹೆಚ್ಚು ಇದೆ. ಉತ್ತರಕ್ಕೆ ಹೋಲಿಸಿದರೆ ದಕ್ಷಿಣದಲ್ಲಿ ಧರ್ಮಾತೀತವಾಗಿ ದಿರಿಸು, ಭಾಷೆ, ಆಹಾರ ಸಮಾನವಾಗಿದೆ. ಇದು ಹೆಚ್ಚು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ವ್ಯಾಖ್ಯಾನಿಸಿದರು. ಪತ್ರಕರ್ತ ಜಗನ್ನಾಥನ್ ಗೋಷ್ಠಿಯ ಸಮನ್ವಯಕಾರರಾಗಿದ್ದರು. ಡಾ| ಗಿರಿಧರ ಉಪಾಧ್ಯಾಯ ಉಪಸ್ಥಿತರಿದ್ದರು.