ಮೈಸೂರು: ರಾಜಕಾರಣದಿಂದ ಧರ್ಮವನ್ನು ಬೇರ್ಪಡಿಸುವುದರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಹೇಳಿ ದರು.
ನಗರದ ಕೃಷ್ಣಧಾಮದಲ್ಲಿ ಗುರುವಾರ ಆಯೋಜಿಸಿದ್ದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ 36ನೇ ಚಾತುರ್ಮಾಸ್ಯ ವ್ರತದ ಸಮಾರಂಭ ಸಮಾರೋಪ ಮತ್ತು ಅಭಿವಂದನೆ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರೂ ತಮ್ಮ ಹೋರಾಟದುದ್ದಕ್ಕೂ ಧರ್ಮದ ಸಾರ ಒತ್ತಿ ಹೇಳಿದ್ದಾರೆ. ಅವರು ಎಂದೂ ಧರ್ಮವನ್ನು ಅಪಮಾನ ಮಾಡುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.
ಭಾರತ ಇಡೀ ಜಗತ್ತಿಗೆ ಅಧ್ಯಾತ್ಮವನ್ನು ಉಡುಗೊರೆಯಾಗಿ ನೀಡಿದ ರಾಷ್ಟ್ರ. ಇದರಿಂದ ಅನೇಕ ರಾಷ್ಟ್ರಗಳು ಪ್ರಯೋಜನ ಪಡೆದುಕೊಂಡಿವೆ. ದ್ವೈತ, ಅದ್ವೈತ ಹಾಗೂ ವಿಶಿಷ್ಟ ಅದ್ವೈತಗಳು ಮನುಕುಲದ ಆಸ್ತಿಯಾಗಿದ್ದು, ಇದು ನಮ್ಮ ಖುಷಿಗಳ ಕೊಡುಗೆ ಎಂದರು.
ಸಮಾಜದಲ್ಲಿ ಹಿಂದಿನ ಆಚ ರಣೆ ಮತ್ತು ಪದ್ಧ ತಿಗಳು ಕಾಲ ಕಾಲಕ್ಕೆ ಸುಧಾರಣೆ ಆಗಬೇಕಾಗಿದೆ. ಕೇರಳದಲ್ಲಿ ನಾರಾಯಣ ಗುರು ಹಾಗೂ ಕರ್ನಾಟಕದಲ್ಲಿ ಬಸವಣ್ಣ ಅವರು ಆಧ್ಯಾತ್ಮದ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದರು. ನಾರಾಯಣ ಗುರು ಅವರು ರಚಿಸಿದ 64 ಕೃತಿ ವೇದಾಂತ ಆಧಾರಿತ ಎಂಬುದು ಬಹಳ ಮುಖ್ಯ. ನಾರಾಯಣ ಗುರು, ಬಸವಣ್ಣ ಮುಂತಾದ ಅನೇಕರ ಮಹನೀಯರ ಪರಿಶ್ರಮದ ಫಲವಾಗಿ ಪ್ರಸ್ತುತ ಅಸ್ಪೃಶ್ಯತೆಯ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.
ಪೇಜಾವರ ಮಠದ ಶ್ರೀ ವಿಶ್ವ ಪ್ರ ಸನ್ನ ತೀರ್ಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿರ್ದೇಶಕ ಡಾ| ಆನಂದತೀರ್ಥಾಚಾರ್ಯ ನಾಗಸಂಪಿಗೆ ಹಾಗೂ ಇತರರು ಇದ್ದರು.