Advertisement
ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ್ದರಿಂದ ನಿಜಾರ್ಥದಲ್ಲಿ ಇದು ದುಃಖದ ದಿನ; ಆದರೆ ಯೇಸು ಕ್ರಿಸ್ತರು ಲೋಕ ಕಲ್ಯಾಣಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ದಿನವನ್ನು ಶುಭ ದಿನವನ್ನಾಗಿ ಕ್ರೈಸ್ತರು ಆಚರಿಸುತ್ತಾರೆ. ಇಂದು ವಿಶೇಷವಾಗಿ ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದ್ದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗಳಿಗೆ ಸಂಬಂಧಿಸಿದ “ಶಿಲುಬೆಯ ಹಾದಿ ‘ (ವೇ ಆಫ್ ದಿ ಕ್ರಾಸ್) ಆಚರಣೆಯನ್ನು ಚರ್ಚ್ ಮತ್ತುಚರ್ಚ್ ಆವರಣದಲ್ಲಿ ನಡೆಸುವ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ- ಸಂಕಷ್ಟಗಳನ್ನು ಕ್ರೈಸ್ತರು ಸ್ಮರಿಸಿದರು. ಈ ದಿನವನ್ನು ಧ್ಯಾನ, ಉಪವಾಸದ ಮೂಲಕ ಕಳೆದರು.ಶುಭ ಶುಕ್ರವಾರದಂದು ಚರ್ಚ್‌ಗಳಲ್ಲಿ ಘಂಟೆಗಳ ನಿನಾದ ಇರುವುದಿಲ್ಲ; ಬಲಿ ಪೂಜೆಯ ಸಂಭ್ರಮವಿಲ್ಲ. ಮೌನ ವಾತಾವರಣದಲ್ಲಿ ಪ್ರಾರ್ಥನೆ ಸಲ್ಲಿಸುವುದು ದಿನದ ವೈಶಿಷ್ಟÂ.ಚರ್ಚ್‌ಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ, ಧ್ಯಾನ, ಶಿಲುಬೆಯ ಆರಾಧನೆಯಲ್ಲಿ ಭಾಗವಹಿಸಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಂಗಳೂರಿನ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ಅವರು ರೊಜಾ ರಿಯೋ ಕೆಥೆಡ್ರಲ್‌ನಲ್ಲಿ ಮತ್ತು ಉಡುಪಿ ಬಿಷಪ್ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ನಡೆದ ಶಿಲುಬೆಯ ಹಾದಿ ಆಚರಣೆ ಮತ್ತು ಪ್ರಾರ್ಥನಾ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸಿದ್ದರು. ಪ್ರಧಾನ ಗುರು ಫಾ| ಜೆ.ಬಿ.ಕ್ರಾಸ್ತಾ ಮತ್ತು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್ ಫಾ| ಹೆನ್ರಿ ಮಸ್ಕರೇನ್ಹಸ್, ಇತರ ಗುರುಗಳು ಭಾಗವಹಿಸಿದ್ದರು.