Advertisement

ಗುಡ್‌ ಫ್ತೈಡೇ: ವೆನ್ಲಾಕ್‌ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

12:00 AM Apr 20, 2019 | Sriram |

ಹಂಪನಕಟ್ಟೆ: ಗುಡ್‌ ಫ್ತೈಡೇ ಪ್ರಯುಕ್ತ ಮರಿಯಮ್ಮ ಮಾತೆ ಸೊಡ ಲಿಟಿ ಮಂಗಳೂರು ವತಿಯಿಂದ ವೆನ್ಲಾಕ್‌ ಆಸ್ಪತ್ರೆಯ ಮಕ್ಕಳ ಮತ್ತುಇತರ ವಾಡ್‌ಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

Advertisement

ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮಪ್ರಾಂತ್ಯದ ಹಿಂದಿನ ಧರ್ಮಗುರು ಮೊನ್ಸಿಂಜರ್‌ ಡೆನಿಸ್‌ ಮೊರಾಸ್‌ ಪ್ರಭು ಮಾತನಾಡಿ, ಗುಡ್‌ ಫ್ತೈಡೆಯನ್ನು ಪವಿತ್ರ ದಿನವಾಗಿ ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯದವರು ಉಪವಾಸ, ಭಕ್ತಿ, ಶ್ರದ್ಧೆ ಮತ್ತು ದಾನ ಧರ್ಮಗಳ ಮೂಲಕ ಆಚರಿಸುತ್ತಾರೆ. ಈ ನಿಟ್ಟಿನಲ್ಲಿ ಸಂಸ್ಥೆಯ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.

ಇನ್ನೋರ್ವ ಅತಿಥಿ ಅಲೋಶಿಯಸ್‌ ಕಾಲೇಜಿನ ರೆಕ್ಟರ್‌ ವಂ| ಡೈನಿಶಿಯಸ್‌ ವಾಸ್‌ ಮಾತನಾಡಿ, ಏಸು ಕ್ರಿಸ್ತರಿಗೆ ಚಿಕ್ಕ ಮಕ್ಕಳು ಎಂದರೆ ಬಹಳ ಪ್ರೀತಿ. ಈ ಒಂದು ಸಂಕೇತವಾಗಿ ಮಕ್ಕಳ ವಾರ್ಡ್‌ನಲ್ಲಿ ಹಣ್ಣು ಹಂಪಲುಗಳನ್ನು ವಿತರಿಸುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಆಸ್ಪತ್ರೆಯ ನಿವಾಸಿ ವೈದ್ಯಾದಿಕಾರಿ ಡಾ| ಜುಲಿಯಾನ್‌ ಸಲ್ಡಾನ ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಲಾರೆನ್ಸ್‌ ಪಿಂಟೊ, ರುಡಾಲ್ಫ್ ಡಿಸಿಲ್ವಾ, ಫೆಲಿಕ್ಸ್‌ ಪಿಂಟೊ, ಪೀಟರ್‌ ಪಿಂಟೊ, ವಲೇರಿಯನ್‌ ಸಿಕ್ವೆರ , ಸುನಿಲ್‌ ವಾಸ್‌, ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಹರಿಣಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ವಿವಿಯನ್‌ ಸಿಕ್ವೇರ ಸ್ವಾಗತಿಸಿದರು. ಕಾರ್ಯದರ್ಶಿ ಲಿಗೊರಿ ಫೆರ್ನಾಂಡಿಸ್‌ ವಂದಿಸಿದರು. ಕಾರ್ಯಕ್ರಮ ಸಂಚಾಲಕ ಸುಶೀಲ್‌ ನೊರೊನ್ಹ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next