Advertisement

“ಗುಡ್‌ ಫ್ರೈಡೇ’ರಜೆ ರದ್ದು ಮಾಡದಿರಲು ಆಗ್ರಹ

02:02 AM May 31, 2019 | sudhir |

ಮಂಗಳೂರು: ಕ್ರೈಸ್ತರ ಪವಿತ್ರ ದಿನವಾದ “ಗುಡ್‌ ಫ್ರೈಡೇ’ ರಜೆಯನ್ನು ರದ್ದುಪಡಿಸುವ ಅಥವಾ ನಿರ್ಬಂಧಿತ ರಜೆಯನ್ನಾಗಿ ಮಾರ್ಪಡಿಸುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್‌ ಸದಸ್ಯ ಹಾಗೂ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ನೇತೃತ್ವದ ನಿಯೋಗವು ಗುರುವಾರ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರನ್ನು ಭೇಟ ಮಾಡಿ ಮನವಿ ಸಲ್ಲಿಸಿತು.

Advertisement

ಸರಕಾರಿ ರಜಾ ದಿನಗಳಿಗೆ ಸಂಬಂಧಿಸಿ ರಾಜ್ಯ ಸರಕಾರ ರಚಿಸಿದ ಸಚಿವ ಸಂಪುಟ ಉಪ ಸಮಿತಿ ಹಲವು ಜಯಂತಿಗಳ ರಜೆಯನ್ನು ಕಡಿತಗೊಳಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದು, ಅದರಲ್ಲಿ ಗುಡ್‌ ಫ್ರೈಡೇ ಕೂಡ ಸೇರಿದೆ ಎಂಬುದಾಗಿ ಮಂಗಳೂರಿನ ಕೆಥೆೋಲಿಕ್‌ ಸಭಾ ಆತಂಕ ವ್ಯಕ್ತಪಡಿಸಿತ್ತು. ಮನವಿ ಸ್ವೀಕರಿಸಿದ ಉಪ ಮುಖ್ಯಮಂತ್ರಿಗಳು ರಜೆಯನ್ನು ರದ್ದುಪಡಿಸದಿರುವ ಭರವಸೆ ನೀಡಿದರೆಂದು ಐವನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next