Advertisement
ಉಭಯ ಜಿಲ್ಲೆಗಳ ಎಲ್ಲ ಚರ್ಚ್‌ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಎಲ್ಲ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Related Articles
Advertisement
ಉಭಯ ಜಿಲ್ಲೆಗಳ ಚರ್ಚ್‌ಗಳಲ್ಲಿ ಶುಭ ಶುಕ್ರವಾರ ಪ್ರಯುಕ್ತ ಬಲಿ ಪೂಜೆ ಇರಲಿಲ್ಲ. ಶಿಲುಬೆಯ ಆರಾಧನೆಯನ್ನು ನಡೆಸಲಾಯಿತು. ವಿಶ್ವಾಸಿಗಳು ಪವಿತ್ರ ಶಿಲುಬೆಗೆ ಗೌರವಾದರಗಳನ್ನು ಸಲ್ಲಿಸಿ ದರು. ಮಂಗಳೂರಿನ ರೊಸಾರಿಯೋ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಫಾ| ವಿಕ್ಟರ್ ಡಿ’ಸೋಜಾ ಪವಿತ್ರ ಶಿಲುಬೆಯ ಬಗ್ಗೆ ಅರ್ಥಪೂರ್ಣ ವಿವರ ನೀಡಿದರು. ಪವಿತ್ರ ಶಿಲುಬೆಯಿಂದ ಯೇಸು ಕ್ರಿಸ್ತರ ದೇಹವನ್ನು ಕೆಳಗಿಳಿಸುವ ಆಚರಣೆಯು ಭಕ್ತಿ ಮತ್ತು ಗೌರವದಿಂದ ನಡೆಯಿತು. ಬಳಿಕ ಭಕ್ತರು ಯೇಸು ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಪಾಲ್ಗೊಂಡರು.
ರೊಸಾರಿಯೋ ಕೆಥೆಡ್ರಲ್‌ನ ರೆಕ್ಟರ್ ಫಾ| ಆಲ್‌ಫ್ರೆಡ್ ಜೆ. ಪಿಂಟೊ, ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೋ, ಮಂಗಳೂರು ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ಫಾ| ಅನಿಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಮಂಗಳೂರು : ಎಬಿವಿಪಿ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನ
ಶಿಲುಬೆಯ ಹಾದಿಕೆಲವು ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಪಡಿಸಲಾಯಿತು. ಭಕ್ತರು ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥಿಸಿದರು. ಸಂಜೆ ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನೆಯ ವಿಧಿಗಳಲ್ಲಿ ಬೈಬಲ್ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತರ ಕೊನೆಯ ಘಳಿಗೆಗಳ ಕಥನವನ್ನು ಓದಿದರು. ಬಳಿಕ ಪ್ರವಚನ ನೀಡಿದರು. ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ, ಶಿಲುಬೆಯ ಆರಾಧನೆ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ಧರ್ಮಪ್ರಾಂತ್ಯ: ಶುಭ ಶುಕ್ರವಾರ
ಬೆಳ್ತಂಗಡಿ,: ಪವಿತ್ರ ಶುಕ್ರವಾರದಂದು ಬೆಳ್ತಂಗಡಿ ಸಂತ ಲಾರೆನ್ಸ್ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿ ಅವರು ಪವಿತ್ರ ಶುಕ್ರವಾರದ ವಿಧಿವಿಧಾನ ನೆರವೇರಿಸಿದರು. ಫಾ| ಟೋಮಿ ಕಲ್ಲಿಕಾಟ್ ದಿನದ ಸಂದೇಶ ನೀಡಿದರು. ಸಂತ ಲಾರೆನ್ಸ್ ಪ್ರಧಾನ ದೇವಾಲಯದ ಫಾ| ತೋಮಸ್ ಕಣ್ಣಾಂಗಳ್, ಫಾ| ವಿನ್ಸೆಂಟ್, ಫಾ| ಕುರಿಯಕೋಸ್ ವೆಟುxವರಿ, ಫಾ| ವಿನ್ಸೆಂಟ್ ಪಾಲ್ಗೊಂಡರು. ಬೆಳ್ತಂಗಡಿ ಧರ್ಮಪ್ರಾಂತಕ್ಕೆ ಸಂಬಂಧಿಸಿದ ಒಟ್ಟು 55 ಧರ್ಮಕೇಂದ್ರಗಳಲ್ಲಿ ಪವಿತ್ರ ವಿಧಿವಿಧಾನಗಳು ಜರಗಿದವು.