Advertisement

ಯೋಗಾಭ್ಯಾಸವೊಂದೇ ಅಲ್ಲ ; ಯೋಗಿಕ ಆಹಾರವೂ ಅತ್ಯವಶ್ಯ

10:25 AM Jun 27, 2019 | keerthan |

ಉಡುಪಿ: “ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಎಲ್ಲರೂ ಕೇಳಿದವರೇ. ಆದರೆ ಊಟ ಬಲ್ಲವರಂತೆ ಊಟ ಮಾಡುವವರಿಲ್ಲ ಅಷ್ಟೆ. ಆಯುರ್ವೇದ ಮತ್ತು ಯೋಗ ಶಾಸ್ತ್ರದಲ್ಲಿ ಆಹಾರ ಮತ್ತು ವಿಹಾರ ಎಂಬ ವಿಭಾಗದಡಿ ಆಹಾರ ಕ್ರಮ ವಿವರಿಸಲಾಗಿದೆ. ಆಧುನಿಕ ವಿಜ್ಞಾನವು ಡಯಟ್‌ ಆ್ಯಂಡ್‌ ನ್ಯೂಟ್ರಿಶಿಯನ್‌ ಎಂದು ಕರೆಯುತ್ತದೆ. ಕಾಬೋìಹೈಡ್ರೇಟ್‌, ಪ್ರೊಟಿನ್‌, ಮಿನರಲ್‌, ವಿಟಮಿನ್‌ ಇತ್ಯಾದಿ- ನಿರ್ದಿಷ್ಟ ಪ್ರಮಾಣದಲ್ಲಿ ಸಮತೂಕದಲ್ಲಿ ಸೇವಿಸಬೇಕು ಎನ್ನುತ್ತದೆ. ಆದರೆ ಇವೆಲ್ಲವೂ ಉಪಯೋಗಕ್ಕೆ ಬರುತ್ತದೆ ಎಂಬ ಖಾತ್ರಿ ಇಲ್ಲ. ನಮ್ಮ ಶರೀರಕ್ಕೆ ಅದರದ್ದೇ ಆದ ಶಕ್ತಿ ಇದೆ. ಅದಕ್ಕೆ ನೀವು ಎಷ್ಟೇ ವಿಟಮಿನ್‌ ಮಾತ್ರೆ ಕೊಟ್ಟರೂ ದೇಹ ಹೊಂದಿಕೊಳ್ಳದಿದ್ದರೆ ಅದು ಮಲಮೂತ್ರದಲ್ಲಿ ಹೊರಗೆ ಹೋಗುತ್ತದೆ. ಹೀಗಾಗಿ ಬ್ಯಾಲೆನ್ಸ್‌ ಡಯಟ್‌ ಎನ್ನುವುದೇ ಅವೈಜ್ಞಾನಿಕ.

Advertisement

ಆಧುನಿಕ ಪದ್ಧತಿಯಲ್ಲಿ ಪ್ರಯೋಗಾಲಯವಿದ್ದರೆ, ಭಾರತೀಯ ಪದ್ಧತಿಯಲ್ಲಿ ನಾಲಗೆಯೇ ಪ್ರಯೋಗಾಲಯ. ಆರು ಬಗೆಯ ರುಚಿಗಳನ್ನು (ಷಡ್ರಸ) ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಬೇಕು. ಇದು ಊಟ ಬಡಿಸುವ ಕ್ರಮದಲ್ಲೇ ಸಂಪ್ರದಾಯವಾಗಿ ಬೆಳೆದು ಬಂದಿದೆ. ಉಪ್ಪನ್ನು ದೂರದಲ್ಲಿ ಸ್ವಲ್ಪ ಹಾಕುತ್ತಾರೆ. ಪಲ್ಯ, ಕೋಸಂಬರಿ ಎಷ್ಟೆಷ್ಟನ್ನು ಹಾಕಬೇಕೆಂಬ ಕ್ರಮವಿದೆ. ಊಟ ಮಾಡುವಾಗ “ಸಾವಕಾಶವಾಗಿ ಊಟ ಮಾಡಿ’ ಎನ್ನುತ್ತಾರೆ. ಇದರ ಅರ್ಥ ಸ+ಅವಕಾಶ ಎಂದು. ಅವಕಾಶವಿರಿಸಿ ಊಟ ಮಾಡಿ ಎಂಬುದು. ಒಂದು ಭಾಗ ಘನ ಪದಾರ್ಥ, ಒಂದು ಭಾಗ ದ್ರವ ಪದಾರ್ಥ ಸೇವಿಸಿ ಇನ್ನೊಂದು ಭಾಗ ಖಾಲಿ ಬಿಡಬೇಕು.

ಹಿತ, ಮಿತ, ಋತದಲ್ಲಿ ಆಹಾರ ಸೇವಿಸಬೇಕು ಎಂದಿದೆ. ಪೋಷಕಾಂಶವಿದೆ ಎಂದು ಹೇಳಿ ರಾಜಸ, ತಾಮಸ ಆಹಾರ ಸೇವಿಸಿದರೆ ಅನಾರೋಗ್ಯ ಉಂಟಾಗುತ್ತದೆ. ಕೆಲವು ವಿಷಮ ಆಹಾರಗಳು ಇವೆ. ಉದಾ: ಹಾಲು- ಬಾಳೆಹಣ್ಣು, ಹುಳಿ ಪದಾರ್ಥ- ಹಾಲು, ಮೀನು – ಹಾಲು, ಬಿಸಿ ಮಾಡಿದ ಜೇನುತುಪ್ಪ ಇತ್ಯಾದಿ. ಬಿಸಿಲಿನಲ್ಲಿ ಬಂದು ಬಿಸಿ ಮಾಡಿದ ಜೇನು ಕುಡಿದರೆ ಸಾವೂ ಸಂಭವಿಸಬಹುದು, ಬೇರೆ ವಿಷವೇ ಬೇಡ. ಹೀಗೆ ಆಹಾರವೇ ಆರೋಗ್ಯಕ್ಕೂ, ಅನಾರೋಗ್ಯಕ್ಕೂ ಕಾರಣವಾಗುತ್ತದೆ.

ಯಾವ ಕಾಲದಲ್ಲಿ ಯಾವ ಆಹಾರ ಸೇವಿಸಬೇಕೆನ್ನುವ ಕ್ರಮವಿದೆ. ಉದಾಹರಣೆಗೆ ಚಾತುರ್ಮಾಸ್ಯವ್ರತದ ಆಹಾರ ಕ್ರಮ ಆ ಕಾಲಕ್ಕೆ ಸೂಕ್ತವಾದುದು. ಹೀಗೆ ದಿನಚರ್ಯೆಯೂ ಇದೆ.  ನಮ್ಮ ಶರೀರದಲ್ಲಿರುವ ಐದು ವಿಭಾಗಗಳಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ ಶರೀರಕ್ಕೆ ಯೋಗಾಸನದ ಮೂಲಕ ಚಿಕಿತ್ಸೆ ಕೊಡಿಸಲು ಸಾಧ್ಯ, ಉಳಿದ ವಿಜ್ಞಾನಮಯ ಮತ್ತು ಆನಂದ ಮಯ ಶರೀರವನ್ನು ತಲುಪಲು ನುರಿತ ಶಿಕ್ಷಕರು ದುರ್ಲಭ.

32 ವರ್ಷಗಳಿಂದ ಯೋಗ ತರಗತಿ
ಉಡುಪಿಯ ಕಡಿಯಾಳಿ ನಿವಾಸಿ ಗಣೇಶ ಭಟ್ಟರು 32 ವರ್ಷಗಳಿಂದ ಯೋಗ ತರಗತಿಗಳನ್ನು “ಯೋಗಧಾಮ’ ಸಂಸ್ಥೆ ಮೂಲಕ ನಡೆಸುತ್ತಿದ್ದಾರೆ. 30 ವರ್ಷ ಒಳಕಾಡು ದೈವಜ್ಞ ಮಂದಿರದಲ್ಲಿ ನಿತ್ಯ ಬೆಳಗ್ಗೆ ಯೋಗ ತರಗತಿ ನಡೆಸಿದ ಭಟ್‌ ಅವರು ಎರಡು ವರ್ಷಗಳಿಂದ ಕಡಿಯಾಳಿಯ ಮನೆಯಲ್ಲಿ ತರಗತಿ ನಡೆಸುತ್ತಾರೆ. ಸಂಜೆ ಚಿಕಿತ್ಸೆಯ ಮಾರ್ಗದರ್ಶನ ನೀಡುತ್ತಾರೆ. ಮಣಿಪಾಲ ಕೆಎಂಸಿ ಯೋಗ ವಿಭಾಗದ ಮೊದಲ ತಂಡದ ವಿದ್ಯಾರ್ಥಿಯಾದ ಇವರು ಯೋಗಿಕ ಆಹಾರ ವಿಹಾರದ ಕುರಿತು ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಇನ್ನಂಜೆ ವಿಷ್ಣುಮೂರ್ತಿ ಹಯವದನಸ್ವಾಮಿ ಪ.ಪೂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next