Advertisement
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಕರು, ಊರ ಜನತೆಯ ನಿರಂತರ ಪರಿಶ್ರಮದ ಫಲವಾಗಿ ಈ ಮಹತ್ತರ ಬೆಳೆವಣಿಗೆ ಸಾಧ್ಯವಾಗಿದೆ. 2019ರ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯು ಶತಮಾನೋತ್ಸವವು ಪೂರಕವಾದ ವಾತಾವರಣ ನಿರ್ಮಿಸಿಕೊಟ್ಟಿದೆ.
ಪುತ್ತೂರು ತಾಲೂಕಿನಲ್ಲೇ ಪ್ರಥಮ ಬಾರಿಗೆ ನಲಿಕಲಿ ತರಗತಿಯ ಮೂಲಕ ಇಂಗ್ಲಿಷ್ ತರಗತಿಗಳನ್ನು ನೀಡಲಾಗಿದೆ. ಅಲ್ಲದೆ ಯಾವ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭವಾಗದ ಸಂದರ್ಭ ಇಲ್ಲಿ ಆರಂಭಿಸಲಾಗಿದೆ. ಇದರ ಪರಿಣಾಮ ಈ ವರ್ಷ 55 ವಿದ್ಯಾರ್ಥಿಗಳು ಎಲ್‌ಕೆಜಿ, ಯುಕೆಜಿ ತರಗತಿಗೆ ನೋಂದಾವಣೆಯಾಗಿ ತರಗತಿಗೆ ಹಾಜರಾಗುತ್ತಿದ್ದಾರೆ. 1ರಿಂದ 4 ತರಗತಿಗೆ ಮೀಸಲಾಗಿರುವ ಗುಬ್ಬಚ್ಚಿ ಸ್ಪೀಕಿಂಗ್ ತರಗತಿಯನ್ನು ಇಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದ್ದು ಇದರಲ್ಲಿ ವಿದ್ಯಾರ್ಥಿಗಳಿಗೆ ನ್ಪೋಕನ್ ಇಂಗ್ಲಿಷ್, ಸೆಂಟೆಂನ್ಸ್ ಪ್ರಾಕ್ಟೀಸ್, ಕಥೆಗಳನ್ನು 45 ನಿಮಿಷದ ತರಗತಿಯ ಮೂಲಕ ಪ್ರತೀ ದಿನ ನೀಡಲಾಗುತ್ತಿದೆ.
Related Articles
Advertisement
ವಿವಿಧ ಕ್ಲಬ್ಗಳುಮೀನಾ ಕ್ಲಬ್, ಸ್ಕೌಟ್ ಗೈಡ್ಸ್, ಗಣಿತ ಕ್ಲಬ್, ವಿಜ್ಞಾನ ಕ್ಲಬ್, ಸಾಂಸ್ಕೃತಿಕ ಕ್ಲಬ್, ಮಕ್ಕಳ ಹಕ್ಕು ಕ್ಲಬ್‌ಗಳನ್ನು ಮಾಡಿ ಕೊಳ್ಳಲಾಗಿದೆ. ಈ ಶಾಲೆಯಲ್ಲಿ 192 ವಿದ್ಯಾರ್ಥಿಗಳಿದ್ದು 10 ಶಿಕ್ಷಕ ವೃಂದವನ್ನು ಹೊಂದಿದೆ. ಇಲ್ಲಿಗೆ ಮೈಕ್ ಸೆಟ್, ಸ್ಟೇಜ್ ಸೆಟ್ಟಿಂಗ್, ಫೋಕಸ್ ಲೈಟ್, ಬ್ಯಾಂಡ್ ಸೆಟ್ ಎಲ್ಲವು ಜನತೆಯಿಂದ ದಾನದ ರೂಪದಲ್ಲಿ ಬಂದಿದೆ. ಜತೆಗೆ 15 ಜನ ಸದಸ್ಯರ ಸುಸಜ್ಜಿತ ಬ್ಯಾಂಡ್ ಸೆಟ್ ತಂಡವಿದೆ. ಶತಮಾನೋತ್ಸವದ ನೆನಪಿಗೆ ಬಯಲುರಂಗ ಮಂದಿರ ನಿರ್ಮಾಣ ವಾಗುತ್ತಿದೆ. ಶಾಲೆಯು 2.33 ಎಕ್ರೆ ಜಾಗವನ್ನು ಹೊಂದಿದ್ದು ವ್ಯವಸ್ಥಿತ ನೀರಿನ ವ್ಯವಸ್ಥೆ ಇದೆ. ಶಾಲೆಗೆ ಸುಸಜ್ಜಿತ ಕಟ್ಟಡ, ಕಂಪ್ಯೂಟರ್ ತರಬೇತಿಗೆ, ಲೈಬ್ರರಿ ಹಾಗೂ ಸ್ಮಾರ್ಟ್ ಕ್ಲಾಸ್‌ಗಳಿಗಾಗಿ ಕೊಠಡಿಗಳ ಆವಶ್ಯಕತೆಯಿದೆ. ವಿಶೇಷ ತರಬೇತಿಗಳು
ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿ ಜೀವನವನ್ನು ರೂಪಿಸುವುದಕ್ಕಾಗಿ ಟೈಲರಿಂಗ್ ತರಬೇತಿ ಜತೆಗೆ ಕಂಪ್ಯೂಟರ್ ತರಬೇತಿಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಎರಡು ಜತೆ ಸಮವಸ್ತ್ರ, ಶೂ, ಸಾಕ್ಸ್, ಗುರುತಿನ ಕಾರ್ಡ್, ಬಿಸಿಯೂಟ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ, ಅಲ್ಪಸಂಖ್ಯಾಕ, ಹಿಂದುಳಿದ ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಮುಂದಿನ ವರ್ಷ ಅಸಹಾಯಕ ವಿದ್ಯಾರ್ಥಿಗಳು° ಶೈಕ್ಷಣಿಕ ದತ್ತು ಪಡೆಯಲಾಗುವುದು ಎಂದು ಶಾಲಾ ಮುಖ್ಯಗುರುಗಳು ತಿಳಿಸಿದ್ದಾರೆ. ಅಭಿವೃದ್ದಿ ಕಾರ್ಯಕ್ಕೆ ಪೂರಕ
ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳಿಗೆ ಯೋಜನೆ ಹಾಕಿಕೊಳ್ಳಲಾಗಿದೆ. ಶತಮಾನೋತ್ಸವದ ಸಂದರ್ಭ ಹಾಕಿಕೊಳ್ಳಲಾದ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.
– ಅಬೂಬಕ್ಕರ್ ನೆಕ್ಕರೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಆಡಿಟೋರಿಯಂ
ಈಗಾಗಲೇ ನಿರ್ಮಾಣವಾಗಿರುವ ರಂಗಮಂದಿರವನ್ನು ಆಡಿಟೋರಿಯಂ ಆಗಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
– ಕೆ.ಪಿ. ನಿಂಗರಾಜು, ಶಾಲಾ ಮುಖ್ಯ ಗುರು – ಸದಾನಂದ ಆಲಂಕಾರು