Advertisement
ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಅರ್ಹ ವಿಜ್ಞಾನಿಯೊಬ್ಬರ ಅವಲೋಕನ ಅಲ್ಲಿಯೇ ನೆಟ್ಟಿತು. ನೊಬೆಲ್ ಪಾರಿತೋಷಕಗಳ ಚರಿತ್ರೆಯಲ್ಲಿಯೂ ಅದೊಂದು ಹೊಸ ದಾಖಲು. ಜಾನ್ ಬಿ ಗುಡ್‌ಎನೌಫ್ ಅವರಿಗೆ ಜುಲೈ 25, 2019ರಂದು ಭರ್ತಿ 97 ವರ್ಷ ಪ್ರಾಯ. ಕಳೆದ ವಾರ (ಅಕ್ಟೋಬರ್ 10, 2019) ನೊಬೆಲ್ ಸಮಿತಿ 119 ವರ್ಷಗಳಿಂದ ಸನ್ಮಾನಿಸುತ್ತಾ ಬಂದಿರುವ ನೊಬೆಲ್ ಸನ್ಮಾನವನ್ನು ಅತ್ಯಂತ ಹಿರಿಯರೊಬ್ಬರಿಗೆ ಪ್ರದಾನ ಮಾಡುತ್ತಿರುವುದು ಒಂದು ಇತಿಹಾಸ.
Related Articles
Advertisement
ಇನ್ನೇನು, ಗಂಟೆ ಎಂಟು ಹೊಡೆಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರು ತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ ಕುಳಿತು ಕೊಳ್ಳಲೇ? ನಗುವಿನ ಅಲೆ ಇನ್ನೊಮ್ಮೆ ಫೋನ್ ಮುಖಾಂತರವೂ ಹರಡಿತು. ನೊಬೆಲ್ ಬಹುಮಾನ ನನ್ನ ಮೇಲೆ ಇನ್ನು ಯಾವುದೇ ಪರಿಣಾಮ ಮಾಡಲಾರದು ಎನ್ನುತ್ತಾ ನಗುವಿನಲ್ಲಿ ಇನ್ನೊಮ್ಮೆ ಭೂಮಿಯನ್ನು ಕಂಪಿಸಿದರು.
ಜನನ ಮತ್ತು ಬಾಲ್ಯ…ಜರ್ಮನಿಯ ಜೀನಾದಲ್ಲಿ ಜಾನ್ ಗುಡ್‌ಎನೌಫ್ ಜನಿಸಿದಾಗ ಅವರ ತಂದೆ ಈರ್ವಿನ್ ಗುಡ್‌ಎನೌಫ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. ತಾಯಿ ಹೆಲೆನ್ ಗುಡ್‌ಎನೌಫ್ ಮತ್ತು ತಂದೆಯವರ ದಾಂಪತ್ಯ ಸಾಮರಸ್ಯದಿಂದ ಇರಲಿಲ್ಲ. ಚಿಕ್ಕಂದಿನಲ್ಲಿ ಜಾನ್ ಓದಲು-ಬರೆಯಲು ಬಾರದ ಹಿಂದುಳಿದ ಮತ್ತು ಡಿಸ್ಲೆಕ್ಸಿಯಾ ಎಂಬ ನ್ಯೂನತೆಯಿಂದ ಚಡಪಡಿಸುತ್ತಿದ್ದ. ಏನು ಕೌತುಕ, ಸುಮಾರು 90 ವರ್ಷಗಳು ಕಳೆದ ಮೇಲೆ, ಅದೇ ಮಂದ ಬುದ್ಧಿಗೆ ನೊಬೆಲ್ ಪಾರಿತೋಷಕದ ಸನ್ಮಾನ. ಏನೆಲ್ಲಾ ತಿರುವುಗಳು. ಎರಡನೇ ಮಹಾಯುದ್ಧದ ವೇಳೆ ಗುಡ್‌ಎನೌಫ್ ಅಮೆರಿಕದ ಮಿಲಿಟರಿ ಪಡೆ ಯಲ್ಲಿ ಪವನಶಾಸ್ತ್ರಜ್ಞನಾಗಿ ಕೆಲಸ ಮಾಡಿದ್ದರು. ಈ ಯುದ್ಧವನ್ನು ಸ್ಟುಪಿಡ್ ವಾರ್ ಎಂದು ತಮ್ಮ ಅಸಂತೋಷವನ್ನು ಹೇಳಿಕೊಂಡಿದ್ದರು. ಮುಂದೆ ತಮ್ಮ ಸಂಶೋಧನೆಗಳಿಗೆ ಸನ್ಮಾನಗಳು ಬರುತ್ತಿರುವಾಗ… ಅದೃಷ್ಟ, ನನ್ನ ಸಂಶೋಧನೆ ಯುದ್ಧಕ್ಕಾಗಿ ಉಪಯೋಗವಾಗುತ್ತಿಲ್ಲವಲ್ಲ! ಎಂದು ಉದ್ಗರಿಸುತ್ತಿದ್ದರು. ಸಂಶೋಧನೆ
ನಾವೆಲ್ಲಾ ಅವೆಷ್ಟೋ ಬಾರಿ ಸ್ಮಾರ್ಟ್ ಫೋನುಗಳನ್ನು ದಿನವಿಡೀ ಉಪಯೋಗಿಸುತ್ತಾ, ಬ್ಯಾಟರಿ ಕಡಿಮೆ ಯಾದರೆ, ಪುನಃ ಚಾರ್ಜ್ ಮಾಡುತ್ತಾ ಉಪಯೋಗಿಸುತ್ತಿಲ್ಲವೇ? ಅಂತೆಯೇ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ e-ಪುಸ್ತಕಗಳಲ್ಲಿ ವಿಶೇಷವಾದ ಬ್ಯಾಟರಿಗಳನ್ನು ಉಪಯೋಗಿಸುತ್ತೇವೆ. ಬ್ಯಾಟರಿ ಸರಿಯಿದ್ದರೆ 3 ರಿಂದ 4 ವರ್ಷಗಳ ಕಾಲ ಪುನಃ ಪುನಃ ಚಾರ್ಜ್ ಮಾಡುತ್ತಾ ಬಳಕೆಯಲ್ಲಿರುತ್ತವೆ. ಇಂತಹ ಬ್ಯಾಟರಿಗಳನ್ನು ಆವಿಷ್ಕಾರ ಮಾಡಿದವರಲ್ಲಿ ಒಬ್ಬರು, ಜಾನ್ ಗುಡ್‌ಎನೌಫ್. ಅದುವೇ Li+ ಅಯೋನ್ ಸೆಲ್ 1991ರಲ್ಲಿ ಮೊದಲು ವಿನ್ಯಾಸ ಮಾಡಿದ ಈ ಬ್ಯಾಟರಿಯ ಆವಿಷ್ಕಾರಕ್ಕಾಗಿ ಈಗ ನೊಬೆಲ್ ಬಹುಮಾನ ಬಂದಿದೆ. 28 ವರ್ಷಗಳ ವೀಕ್ಷಣೆಯನ್ನು ಇಂತಹ ಸೆಲ್‌ಗಳು ಸಹಿಸಿಕೊಂಡಿವೆ ಎಂದಾಯಿತಲ್ಲವೇ? ಅಂತಹ ಬ್ಯಾಟರಿಯ ಅಂದಾ ಜು ವೋಲ್ಟೆಜ್ 3.6V. ಗುಡ್‌ಎನೌಫ್ ಅವ ರೊಂದಿಗೆ ಇಂತಹ ಬ್ಯಾಟರಿಗಳ ಉಪಯೋಗದಲ್ಲಿ ಕೊಡುಗೆ ನೀಡಿದವರು ಬ್ರಿಟನ್ ಮೂಲದ ಅಮೆರಿಕದ 78ರ ಹರೆಯದ ವಿಜ್ಞಾನಿ ಸ್ಟಾನ್ಲಿ ವಿಟ್ಟಿಂಗಮ… ಮತ್ತು ಮಾರುಕಟ್ಟೆ ಬಳಕೆಯೋಗ್ಯವಾಗಿ ಮಾಡಿದ ಜಪಾನಿನ 71ರ ಪ್ರಾಯದ ಅಕಿರಾ ಯೋಷಿನೋ ಅವರು. ಮೂವರೂ ಸಾಕಷ್ಟು ಹಿರಿ ಯರು. ಆದರೂ ಅವರಿಗೆಲ್ಲಾ ಮುಪ್ಪು ಆವರಿಸಿಲ್ಲ. ಶತಾಯುಷಿ ಆಗುವತ್ತ ಸಾಗುತ್ತಿರುವ ಗುಡ್‌ಎನೌಫರ ಹುಮ್ಮಸ್ಸು ಇಲ್ಲಿಗೆ ನಿಲ್ಲುವುದಿಲ್ಲ. ಔಜಿ+ ಅಯೋನಿಗೆ ಗಾಜಿನ ಲೇಪದ ಒಂದು ಎಲೊಕ್ಟ್ರೊಲೈಟ್ ಉಪಯೋಗಿಸಿ ಹೊಸತೊಂದು ಬ್ಯಾಟರಿಯ ಆವಿಷ್ಕಾರಕ್ಕೆ ತಮ್ಮ ಟೆಕ್ಸಾಸ್ ವಿಶ್ವವಿದ್ಯಾಲಯದ ಪ್ರಯೋಗಾಲಯಕ್ಕೆ ಹೊರಟಿದ್ದಾರೆ. ಮಿನುಟುಗಳಲ್ಲಿ ಚಾರ್ಜ್ ಮಾಡಲು ಸಾಧ್ಯವಿರುವ ಇಂತಹ ಶಕ್ತಿಯ ಪೆಟ್ಟಿಗೆಗಳನ್ನು ವಾಹನಗಳಲ್ಲಿ ಉಪಯೋಗ ಮಾಡುವುದೇ ಅವರ ಮುಂದಿನ ಗುರಿ. ಆಹಾ! ಪೆಟ್ರೋಲ್ – ಡೀಸೆಲಿನಿಂದ ಮುಕ್ತ ಜಗತ್ತು. ಪರಿಸರ ಸ್ನೇಹಿ ಶಕ್ತಿಯ ಮೂಲ. ಅಂತಹ ಒಂದು ಆವಿಷ್ಕಾರ ಮಾಡಲೆಂದೇ ನಾನು ಈ ಪ್ರಾಯದಲ್ಲಿ ಇನ್ನೂ ಹೆಚ್ಚಿನ ಹುರುಪಿನಿಂದ ನನ್ನ ಸಂಶೋಧನಾಲಯಕ್ಕೆ ಬೆಳೆಗ್ಗೆ ಎಂಟು ಗಂಟೆ ಮೊದಲೇ ತಲಪುತ್ತೇನೆ. ನೋಡುತ್ತಿರಿ, ಇನ್ನು 20 ವರ್ಷಗಳ ಒಳಗೆ ನಾವು ಭೂಮಿಯ ಒಡಲಿನಿಂದ ಪೆಟ್ರೋಲಿಯಂ ಎಣ್ಣೆ ಹೊರತೆಗೆಯುವುದನ್ನು ನಿಲ್ಲಿಸಬಹುದು ಮತ್ತು ಮಾಲಿನ್ಯ ರಹಿತ ಜಗತ್ತಿನತ್ತ ಸಾಗಬಹುದು, ಎನ್ನುತ್ತಾ ನಗುವಿನ ಅಲೆಯನ್ನು ಉಳಿದವರ ಮುಖದಲ್ಲೂ ಹರಡುತ್ತಾರೆ, ಈ ನೂರರ ಸಮೀಪದ ತರುಣ. ಡಾ| ಶ್ರೀಧರ ಭಟ್ ಬಡೆಕ್ಕಿಲ