ಟೇಕಲ್: ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ವಿದ್ಯಾಭ್ಯಾಸ ನೀಡಲಾಗುತ್ತಿದೆ ಎಂದು ಜಿಪಂ ಸದಸ್ಯೆ ಗೀತಮ್ಮ ತಿಳಿಸಿದರು. ಟೇಕಲ್‌ನ ಯಲುವಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಾರ್ಷಿಕೋತ್ಸವವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಶಾಲೆಗಳಲ್ಲಿ ನೀಡುತ್ತಿರುವ ಶಿಕ್ಷಣವಂತೆ ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ನೀಡುತ್ತಿದ್ದಾರೆಂದರು. ಕೆಲವು ಪ್ರದೇಶದಲ್ಲಿ ವಸತಿ ಶಾಲೆಗಳೆಂದರೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಾಠ, ಆಟ, ಊಟ ಎಲ್ಲವೂ ಉತ್ತಮವಾಗಿ ನಡೆಯುತ್ತದೆ. ಬೋಧಕರಾಗಲಿ ಶಾಲೆ ಸಿಬ್ಬಂದಿಯಾಗಲಿ ಯಾರೂ ಭೇದ-ಭಾವ ತೋರಲ್ಲ ಎಂದು ತಿಳಿಸಿದರು.
ಶಾಲೆ ಆವರಣದಲ್ಲಿ ಕಾಲಿಟ್ಟರೆ ಇದು ಖಾಸಗಿ ಶಾಲೆಯೋ ಅಥವಾ ಸರ್ಕಾರಿ ಶಾಲೆಯೋ ಎಂಬುದು ಆಶ್ಚರ್ಯವೆನಿಸುತ್ತದೆ. ಇದಕ್ಕೆ ಕಾರಣ ಈ ಶಾಲೆಯ ಪ್ರಾಂಶುಪಾಲರಾದ ಭಾರತಮ್ಮ ಅವರ ಶ್ರಮ ಎಂದು ಶ್ಲಾ ಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆ ಪ್ರಾಂಶುಪಾಲರಾದ ಭಾರತಮ್ಮ, ಈ ಶಾಲೆ ಮಕ್ಕಳನ್ನು ನಮ್ಮ ಸ್ವಂತ ಮಕ್ಕಳಂತೆ ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಶಿಕ್ಷಣ ನೀಡಲಾಗುತ್ತಿದೆ.
ಸರ್ಕಾರದಿಂದ ಮಕ್ಕಳಿಗೆ ದೊರೆಯುವಂತಹ ಎಲ್ಲಾ ಸೌಲಭ್ಯಗಳನ್ನು ತಲುಪಿಸುತ್ತಿದ್ದೇನೆ. ಶುಚಿ-ರುಚಿಯಾದ ಊಟದ ವ್ಯವಸ್ಥೆ, ಸ್ವತ್ಛತೆ ಕಾಪಾಡಿಕೊಂಡು ಬಂದಿದ್ದು ಸರ್ಕಾರ ಇನ್ನು ಹೆಚ್ಚಿನ ಸೌಲಭ್ಯ ಒದಗಿಸಿದರೆ ಮತ್ತಷ್ಟು ಪ್ರಗತಿಯತ್ತ ಸಾಗಲು ಸಾಧ್ಯವಾಗಲಿದೆ ಎಂದು ನುಡಿದರು.
ಮುಖ್ಯ ಅತಿಥಿ ಚಿಕ್ಕಯಲುವಹಳ್ಳಿ ಶಿಕ್ಷಕ ಶ್ರೀನಿವಾಸ್, ಬಲಮಂದೆ ಪ್ರೌಢಶಾಲೆ ನಂಜುಂಡಪ್ಪ, ಗೊಲ್ಲಹಳ್ಳಿ ನಾರಾಯಣಸ್ವಾಮಿ ಮಾತನಾಡಿದರು. ಆರ್.ಸುನಿಲ್, ರಮಾದೇವಿ, ಹಸಿರು ಸೇನೆ ಮಂಜುನಾಥಗೌಡ, ಪೋಷಕರಾದ ಚಿನ್ನಪ್ಪ, ವೆಂಕಟೇಶ್, ಶ್ರೀನಿವಾಸ್, ದೌಲತ್‌ಖಾನ್, ಶಾಲಾ ಸಿಬ್ಬಂದಿ ಇದ್ದರು.