Advertisement
ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ರವಿವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರ ಸ್ಟ್ ಮಂಗಳೂರು ಇದರ ಉಡುಪಿ ಘಟಕವನ್ನು ಅವರು ಉದ್ಘಾಟಿಸಿ ಮಾತನಾಡಿ, ಪಟ್ಲ ಸತೀಶ ಶೆಟ್ಟಿಯವರು ಯಕ್ಷಗಾನದಲ್ಲಿ ಭಾಗವತರಾಗಿ ಹೆಸರು ಗಳಿಸಿದ್ದಲ್ಲದೆ, ಟ್ರಸ್ಟ್ ಮೂಲಕ ಕಲಾವಿದರ ಶ್ರೇಯೋಭಿವೃದ್ಧಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು.
Related Articles
Advertisement
ಗೌರವಾಧ್ಯಕ್ಷರಾದ ಪುರುಷೋತ್ತಮ ಪಿ. ಶೆಟ್ಟಿ, ಕೆ. ದಿವಾಕರ ಶೆಟ್ಟಿ ತೋಟದಮನೆ, ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಿ. ಕಿಶನ್ ಹೆಗ್ಡೆ, ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ| ಸುರೇಶ್ ರೈ, ಟ್ರಸ್ಟ್‌ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಪ್ರದೀಪ್ ಆಳ್ವ, ರವಿ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.
ಉಡುಪಿ ಘಟಕದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕಾರ್ಯದರ್ಶಿ ಡಾ| ಹರೀಶ್ ಜೋಷಿ ವಿಟ್ಲ ನಿರೂಪಿಸಿದರು. ಉಪಾಧ್ಯಕ್ಷ ಡಾ| ಸುನಿಲ್ ಮುಂಡ್ಕೂರು, ತಾರಾ ಆಚಾರ್ಯ ಪರಿಚಯಿಸಿದರು. ಮಹೇಂದ್ರ ಆಚಾರ್ಯ ಹೇರಂಜೆ ವಂದಿಸಿದರು.
ಉಡುಪಿ ಘಟಕದ ಉಪಾಧ್ಯಕ್ಷರಾದ ಆನಂದ ಮಡಿವಾಳ, ಹರಿಪ್ರಸಾದ್ ರೈ, ಸಚಿನ್ ಶೆಟ್ಟಿ, ಡಾ| ಸಾಯಿ ಗಣೇಶ್, ಸಂಚಾಲಕ ಸುಧಾಕರ ಆಚಾರ್ಯ, ಜತೆಕಾರ್ಯದರ್ಶಿ ರತನ್‌ರಾಜ್ ರೈ ಮಣಿಪಾಲ, ಕಾರ್ತಿಕ್ ಎಸ್. ರಾವ್, ಸತ್ರಾಜಿತ ಭಾರ್ಗವ್, ಹರ್ಷಿತ್ ಜೋಷಿ ಮಣಿಪಾಲ, ಚಿರಾಗ್ ಹೆಗ್ಡೆ ಬೈಲೂರು, ಭುವನ ಪ್ರಸಾದ್ ಹೆಗ್ಡೆ ಗೌರವ ಮಾರ್ಗದರ್ಶಕರು, ಸದಸ್ಯರು ಭಾಗವಹಿಸಿದ್ದರು. ಶ್ರೀ ಪಾವಂಜೆ ಮೇಳದವರಿಂದ “ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನಗೊಂಡಿತು.
ಪಟ್ಲಾಭಿಮಾನಿ ಅಭಿವಂದನೆ ನಿಟ್ಟೆ ವಿ.ವಿ.ಯ ಜಪಾನ್ ಭಾಷಾ ತಜ್ಞರಾದ ಯುಸುಕೋ ಸತೋ ಮತ್ತು ಪ್ರೊ| ಹರಿಕೃಷ್ಣ ಭಟ್ ದಂಪತಿಗೆ “ಪಟ್ಲಾಭಿಮಾನಿ ಅಭಿವಂದನೆ’ ಹಾಗೂ ಅಂತಾರಾಷ್ಟ್ರೀಯ ಯೋಗಪಟು ತನು ಶ್ರೀ ಪಿತ್ರೋಡಿಯವರಿಗೆ “ವಿಶೇಷ ಬಾಲ ಪುರಸ್ಕಾರ’ ನೀಡಿ ಸಮ್ಮಾನಿಸಲಾಯಿತು.