ಮಹಾನಗರ: ನಗರದ ಗೌಡ ಸಾರಸ್ವತ ಬ್ರಾಹ್ಮಣ ಸೇವಾಸಂಘದ ಶೈಕ್ಷಣಿಕ, ವೈದ್ಯಕೀಯ, ಯುವಜನತೆಯಲ್ಲಿ ಔದ್ಯೋಗಿಕ ಪ್ರೋತ್ಸಾಹ ಪ್ರಶಿಕ್ಷಣ ಸೇವೆ ಮುಂತಾದವುಗಳು ಪ್ರಶಂಸನೀಯ. ಮಾತ್ರವಲ್ಲದೇ ಆದರ್ಶ ಕಾರ್ಯಕ್ರಮ ಗಳೆಂದು ಕರ್ನಾಟಕ ಬ್ಯಾಂಕ್‌ನ ಪ್ರಮುಖ ಮಹಾಪ್ರಬಂಧಕ ಗೋಕುಲದಾಸ ಪೈ ಅಭಿಪ್ರಾಯಪಟ್ಟರು.
ಸುಜೀರ ಸಿ.ವಿ. ನಾಯಕ್ ಸಭಾ ಗೃಹದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 150 ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕಗಳನ್ನು ವಿತರಿಸಿ ಇದರ ಸದು ಪಯೋಗ ಮಾಡಿ ಉತ್ತಮ ಶಿಕ್ಷಣ ಪಡೆದು, ಉತ್ತಮ ಸಂಸ್ಕಾರವನ್ನು ಬೆಳೆಸಿ ಪ್ರತಿಷ್ಠಿತ ಸ್ಥಾನಗಳಲ್ಲಿ ಸ್ಥಾಪನೆಯಾಗಬೇಕೆಂದು ಕರೆ ಕೊಟ್ಟರು.
ಅಧ್ಯಕ್ಷ ಪ್ರೊ| ಡಾ| ಕಸ್ತೂರಿ ಮೋಹನ ಪೈ ಮಾತನಾಡಿ, ಸಂಸ್ಥೆಯ 81 ವರ್ಷಗಳ ಸೇವಾ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಸಂಘದ ಗೌರವ ಖಚಾಂಚಿ ಜಿ. ವಿಶ್ವನಾಥ ಭಟ್ಟ ಅವರು ಮಾತನಾಡಿ, 50 ವರ್ಷಗಳ ಕಾಲ ಈ ಸೇವಾ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡ ದಿ| ವೆಂಕಟ್ರಾಯ ಭಂಡಾರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಪಂಡಿತ್ ಎಂ. ಸುರೇಂದ್ರ ಆಚಾರ್ಯ, ವಿಜಯಚಂದ್ರ ಕಾಮತ್, ಬಿ.ಆರ್. ಶೆಣೈ, ಸುರೇಶ ಶೆಣೈ, ವಿದ್ಯಾ ಪೈ ಉಪಸ್ಥಿತರಿದ್ದರು. ಮಾಧವರಾಯ ಪ್ರಭು ನಿರೂಪಿ, ಡಾ| ಎ. ರಮೇಶ ಪೈ ವಂದಿಸಿದರು.