Advertisement
ಹೊಸದರೋಜಿ ಗ್ರಾಮದ ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆಯ ಶಾಲೆಯಲ್ಲಿ ಆಯೋಜಿಸಿದ್ದ ಅಜ್ಜ ಅಜ್ಜಿಯಂದಿತರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ದಿನದಿಂದ ದಿನಕ್ಕೆ ಅವಿಭಕ್ತ ಕುಟುಂಬಗಳು ಕಡಿಮೆ ಆಗುತ್ತಿರುವುದರಿಂದ ಮಾನವೀಯ ಸಂಬಂಧಗಳು ಕುಸಿತವಾಗುತ್ತಿವೆ ಎಂದರು. ದಲಿತ ಪ್ಯಾಂಥರ್ ಆಫ್ ಇಂಡಿಯಾದ ಬಳ್ಳಾರಿ ಜಿಲ್ಲಾಧ್ಯಕ್ಷ ನಾಗರಾಜ ಬೋವಿ ಮಾತನಾಡಿ, ಅವಿಭಕ್ತ ಕುಟುಂಬಗಳು ಇದ್ದರೆ ಅದರಿಂದ ಮನೆಯಲ್ಲಿಯನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುತ್ತದೆ. ಮನೆಯ ಹಿರಿಯರು ತಮ್ಮ ಅನುಭವ, ಪುರಾಣ, ರಾಮಾಯಣ, ಮಹಾಭಾರತದ ನೀತಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಕಲಿಸುತ್ತಾರೆ. ಜೊತೆಗೆ ಶಿಸ್ತನ್ನು, ಹಿರಿಯರನ್ನು, ಕಿರಿಯರನ್ನು ಗೌರವಿಸುವ ಆದರ್ಶ ಗುಣಗಳನ್ನು ಕಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬಗಳ ಅಗತ್ಯವಿದೆ ಎಂದು ಹೇಳಿದರು.
Advertisement
ಅವಿಭಕ್ತ ಕುಟುಂಬಗಳಿಂದ ಉತ್ತಮ ಸಂಸ್ಕಾರ
03:03 PM Dec 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.