Advertisement
ಗೊಮ್ಮಟೇಶ್ವರ ಇಂಟರ್ ಸಿಟಿ ಎಕ್ಸ್‌ಪ್ರಸ್ ರೈಲನ್ನು ಕಂಕನಾಡಿ ಜಂಕ್ಷನ್ ಬದಲಿಗೆ ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸಬೇಕು ಎಂಬುದು ಮಂಗಳೂರು ಭಾಗದ ಜನರ ಮುಖ್ಯ ಬೇಡಿಕೆಯಾಗಿದೆ. ಈ ಬೇಡಿಕೆಗೆ ಸ್ಪಂದಿ ಸಿರುವ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳತ್ತ ಗಮನಹರಿಸಿದೆ. ಅದರಂತೆ, ಈ ರೈಲು ಅನ್ನು ಮಂಗಳೂರು ಜಂಕ್ಷನ್‌ಗೆ ವಿಸ್ತರಿಸುವ ಪ್ರಸ್ತಾವನೆ ಯನ್ನು ದಕ್ಷಿಣ ರೈಲ್ವೇ ವಲಯದ ಕೇಂದ್ರ ಕಚೇರಿಯಾದ ಚೆನ್ನೈಗೆ ಕಳುಹಿಸಿದ್ದು, ಆ ಬಗ್ಗೆ ಶೀಘ್ರ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.
ಮಂಗಳೂರು ಸೆಂಟ್ರಲ್ ಸ್ಟೇಷನ್‌ನಲ್ಲಿ ಪ್ಲಾಟ್‌ಫಾರಂ ಕೊರತೆಯಿದೆ ಎಂಬ ಕಾರಣಕ್ಕೆ ಯಶವಂತಪುರ- ಮಂಗಳೂರು ಜಂಕ್ಷನ್-ಯಶವಂತಪುರ ರೈಲು ಅನ್ನು ಕಂಕನಾಡಿ ಜಂಕ್ಷನ್‌ಗೆ ಸದ್ಯಕ್ಕೆ ಮೊಟಕುಗೊಳಿಸಲಾಗಿದೆ. ಒಂದು ವೇಳೆ, ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಅನ್ನು ಸೆಂಟ್ರಲ್‌ಗೆ ವಿಸ್ತರಿಸ ಬೇಕಾದರೆ, ಅಲ್ಲಿಗೆ ಆಗಮಿಸುವ ಇತರೆ ಕೆಲವು ರೈಲುಗಳ ನಿಲುಗಡೆಯನ್ನು ಬೇರೆಡೆಗೆ ಸ್ಥಳಾಂತರಿಸ ಬೇಕಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಮಂಗಳೂರು ಸೆಂಟ್ರಲ್‌ಗೆ ಬರುವ ಯಾವುದಾದರೂ ಒಂದು ರೈಲನ್ನು ಮರುಹೊಂದಾಣಿಕೆ ಮಾಡಿ ಮಂಗಳೂರು ಜಂಕ್ಷನ್‌ಗೆ ವರ್ಗಾಯಿಸಿ ಯಶವಂತಪುರ- ಮಂಗಳೂರು ಜಂಕ್ಷನ್ -ಯಶವಂತ ಪುರ ರೈಲಿಗೆ ಫ್ಲಾಟ್‌ಫಾರಂ ಒದ ಗಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಇದಕ್ಕಾಗಿ ಹೆಚ್ಚು ಜನಪ್ರಿಯವಲ್ಲದ ರೈಲುಗಳನ್ನು ಗುರುತಿಸುವ ಕಾರ್ಯ ಕೂಡ ಈಗ ನಡೆಯುತ್ತಿದೆ. ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಕಾಚಿಗೊಡ ಎಕ್ಸ್‌ಪ್ರಸ್, ಮಂಗಳೂರು ಸೆಂಟ್ರಲ್-ಪುದುಚೇರಿ ಎಕ್ಸ್‌ಪ್ರೆಸ್ ಹಾಗೂ ಮಂಗಳೂರು ಸೆಂಟ್ರಲ್ -ಚೆನ್ನೈ ಎಗೊ¾àರ್ ಎಕ್ಸ್‌ಪ್ರೆಸ್ ರೈಲು ನಿಲು ಗಡೆಯನ್ನು ಕಂಕನಾಡಿ ಜಂಕ್ಷನ್‌ಗೆ ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.
Related Articles
Advertisement
ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ (ರೈಲು ನಂ. 16575/576) ರೈಲು ಯಶವಂತಪುರದಿಂದ ಬೆಂಗಳೂರು ನಗರಕ್ಕೆ ಹಾಗೂ ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂಬುದಾಗಿ ಉಡುಪಿ ರೈಲ್ವೇ ಯಾತ್ರಿಗಳ ಸಂಘ, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘ ಮೊದ
ಲಾದ ಸಂಘಟನೆಗಳು ಆಗ್ರಹಿಸುತ್ತಾ ಬಂದಿವೆ. ಇತ್ತೀಚೆಗೆ ನಡೆದ ರೈಲ್ವೇ ಪಾಲ್ಗಾಟ್ ವಿಭಾಗದ ರೈಲ್ವೇ ಬಳಕೆ
ದಾರರ ಸಲಹಾ ಸಮಿತಿ ಸಭೆಯಲ್ಲೂ ಸಮಿತಿ ಸದಸ್ಯ ಹನುಮಂತ ಕಾಮತ್ ಈ ಬಗ್ಗೆ ಆಗ್ರಹಿಸಿದ್ದರು.
ಸದ್ಯ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣ ಮಂಗಳೂರು ನಗರದೊಳಗೆ ಇದ್ದರೂ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದೆ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಯಶವಂತಪುರದಿಂದ ಕಂಕನಾಡಿ ಜಂಕ್ಷನ್‌ಗೆ ಆಗಮಿಸಲು ರೈಲು ಪ್ರಯಾಣಕ್ಕೆ ತೆರಬೇಕಾದ ಪ್ರಯಾಣ ದರಕ್ಕಿಂತ ಹೆಚ್ಚಿನ ಹಣವನ್ನು ಕಂಕನಾಡಿ ಜಂಕ್ಷನ್‌ನಿಂದ ಮಂಗಳೂರು ನಗರಕ್ಕೆ ವ್ಯಯ ಮಾಡಬೇಕಾಗಿದೆ. ಹೀಗಾಗಿ, ಗೊಮ್ಮಟೇಶ್ವರ ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವುದರ ಜತೆಗೆ ಅದರ ಸಂಚಾರ ಸಮಯ ಪರಿಷ್ಕರಣೆ ಬಗ್ಗೆಯೂ ಬೇಡಿಕೆಗಳು ಕೇಳಿ ಬರುತ್ತಿವೆ. ಪ್ರಸ್ತುತ ರೈಲು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 11.30ಕ್ಕೆ ಹೊರಟು ರಾತ್ರಿ 8.30ಕ್ಕೆ ಯಶವಂತಪುರ ತಲುಪುತ್ತದೆ. ಈ ವೇಳಾಪಟ್ಟಿ ಪ್ರಯಾಣಿಕರಿಗೆ ಪೂರಕವಾಗಿಲ್ಲ. ಯಶವಂತಪುರಕ್ಕೆ ರಾತ್ರಿ 8.30ಕ್ಕೆ ತಲುಪುವುದರಿಂದ ಅಲ್ಲಿಂದ ಬೆಂಗಳೂರು ನಗರಕ್ಕೆ ಪ್ರಯಾಣಿಸಲು ಸಮಸ್ಯೆಗಳಾಗುತ್ತಿವೆ ಎಂಬುದು ಪ್ರಯಾಣಿಕರ ಅಭಿಪ್ರಾಯ. “ಮಂಗಳೂರು ಜಂಕ್ಷನ್-ಯಶವಂತಪುರ-ಮಂಗಳೂರು ಹಗಲು ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂಬುದಾಗಿ ಇತ್ತೀಚೆಗೆ ನಡೆದ ಪಾಲಾ^ಟ್ ವಿಭಾಗ ರೈಲ್ವೇ ಬಳಕೆದಾರರ ಸಭೆಯಲ್ಲಿ ವ್ಯಕ್ತವಾಗಿರುವ ಸಲಹೆಯಂತೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ಲಾಟ್‌ಫಾರಂ ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಜನಪ್ರಿಯವಲ್ಲದ 3 ರೈಲುಗಳನ್ನು ಮಂಗಳೂರು ಜಂಕ್ಷನ್‌ಗೆ ವರ್ಗಾಯಿಸುವುದು ಪ್ರಸ್ತಾವನೆಯಲ್ಲಿ ಒಳಗೊಂಡಿದೆ.
– ನರೇಶ್ ಲಾಲ್ವಾನಿ, ಡಿಆರ್‌ಎಂ, ರೈಲ್ವೇ ಪಾಲಕ್ಕಾಡ್ ವಿಭಾಗ
“ಮಂಗಳೂರು-ಬೆಂಗಳೂರು ಹಗಲು ರೈಲು ಕರಾವಳಿ ಭಾಗದ ಜನರ ಭಾರೀ ನಿರೀಕ್ಷೆ ರೈಲು ಆಗಿತ್ತು. ಇದು ಮಂಗಳೂರು ಜಂಕ್ಷನ್ ವರೆಗೆ ಮಾತ್ರ ಸೀಮಿತಗೊಂಡಾಗ ನಿರಾಸೆಯಾಗಿತ್ತು. ಮಂಗಳೂರು ಸೆಂಟ್ರಲ್‌ಗೆ ವಿಸ್ತರಣೆಯಾದರೆ ಬಹು ಉಪಯೋಗವಾಗುತ್ತದೆ ‘
-ಹನುಮಂತ ಕಾಮತ್, ಅಧ್ಯಕ್ಷ ರು,
ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘ