Advertisement

ಗೋಮಾಳ ಜಾಗ ಕಬಳಿಕೆ: ಕೇಳ್ಳೋರೇ ಇಲ್ಲ!

12:47 PM Feb 10, 2022 | Team Udayavani |

ಕುದೂರು: ಹೋಬಳಿಯ ಹುಲಿಕಲ್‌ ಗ್ರಾಪಂ ವ್ಯಾಪ್ತಿಯ ಮುದ್ದಹನುಮೇಗೌಡನಪಾಳ್ಯದ ಸರ್ವೆ ನಂ.446 ರಲ್ಲಿ 1.24 ಎಕ್ಕರೆ ಸರ್ಕಾರಿ ಮುಪ್ಪತ್ತು ಗೋಮಾಳವಿದೆ. ಆ ಸರ್ಕಾರಿ ಗೋಮಾ ಳದಲ್ಲಿಸುಮಾರು 6ಕ್ಕೂ ಹೆಚ್ಚು ಮನೆಗಳು ತಲೆ ಎತ್ತಿವೆ. ಅ ಮನೆಗಳಿಗೆ ಹುಲಿಕಲ್‌ ಗ್ರಾಪಂ ವ್ಯಾಪ್ತಿಗೆ ಸೇರಿದ ಸರ್ಕಾರಿ ಆಸ್ತಿ ಅಕ್ರಮವಾಗಿ ಪರಭಾರೆ ಆಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ಸರ್ಕಾರಿ ಗೋಮಾಳದಲ್ಲಿ ಹಕ್ಕು ಪತ್ರ ಪಡೆಯಲು ಸರ್ಕಾರ ಹಾಗೂ ಕಂದಾಯ ಇಲಾಖೆ ನಾನಾನಿಯಮ ರೂಪಿಸಿದ್ದಾರೆ.ಆದರೆ ಗೋಮಾಳದಭೂಮಿಯನ್ನು ಕಬಳಿಕೆ ಮಾಡಿದವರಿಗೇ ಹುಲಿಕಲ್‌ಗ್ರಾಪಂನಲ್ಲಿ ಅಕ್ರಮವಾಗಿ ಸರ್ಕಾರದ ಯಾವುದೇನಿಯಮಗಳನ್ನು ಪಾಲಿಸದೇ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಗ್ರಾಪಂ ಖಾತೆ ಮಾಡಿಕೊಟ್ಟಿದೆ.

ಏನಿದು ಗೋಮಾಳ ಕಬಳಿಕೆ: ಹುಲಿಕಲ್‌ ಗ್ರಾಪಂ ವ್ಯಾಪ್ತಿಯ ಮುದ್ದಹನುಮೇಗೌಡ ಪಾಳ್ಯದ ಸರ್ವೆ ನಂ.446ರಲ್ಲಿ 1.24 ಎಕ್ಕರೆ ಸರ್ಕಾರಿ ಗೋಮಾಳವಿದೆ.ಯಾವ ಆಧಾರದ ಮೇಲೆ ಖಾತೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ಗ್ರಾಪಂ ಅಧಿಕಾರಿಗಳ ಬಳಿ ಯಾವುದೇ ಉತ್ತರವಿಲ್ಲ.

ಗ್ರಾಪಂಗೆ ಅಧಿಕಾರ ಕೊಟ್ಟವರು ಯಾರು?: ಗೋಮಾಳದಲ್ಲಿರುವ ಜಾಗಕ್ಕೆ ಖಾತೆ ಮಾಡಬೇಕಾದರೆ ಅನುಭವದಲ್ಲಿ ಇರುವವರು ಕಂದಾಯ ಇಲಾಖೆಗೆ 94ಸಿ ಅರ್ಜಿ ಸಲ್ಲಿಸಬೇಕು. ನಂತರ ಜಿಲ್ಲಾಧಿಕಾರಿ ಯಿಂದ ಅನುಮತಿ ದೊರೆತು ಫಲಾನುಭವಿಗಳಿಗೆಹಕ್ಕುಪತ್ರ ನೀಡಿದ ನಂತರವಷ್ಟೇ ಗ್ರಾಪಂನಲ್ಲಿ ಆ ಜಾಗಕ್ಕೆ ಖಾತೆ ಮಾಡಬೇಕು. ಇಷ್ಟೆಲ್ಲಾ ನಿಯಮಗಳಿದ್ದರು, ಹುಲಿಕಲ್‌ ಗ್ರಾಪಂನಲ್ಲಿ ಯಾವ ಆಧಾರದ ಮೇಲೆ ಗೋಮಾಳ ಒತ್ತುವರಿ ಮಾಡಿಕೊಂಡಿರುವವರಿಗೆ 10 ಕ್ಕೂ ಹೆಚ್ಚು ಖಾತೆ ಮಾಡಿದ್ದಾರೆ..? ಖಾತೆ ಮಾಡಲು ಗ್ರಾಪಂಗೆ ಅಧಿಕಾರ ಕೊಟ್ಟವರ್ಯಾರು ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.

10ಕ್ಕೂ ಹೆಚ್ಚು ಅಕ್ರಮ ಖಾತೆ: ಹುಲಿಕಲ್‌ ಗ್ರಾಮಸ್ಥರು ಹೇಳುವ ಪ್ರಕಾರ ಮುದ್ದಹನುಮೇಗೌಡನಪಾಳ್ಯ ಸರ್ಕಾರಿ ಗೋಮಾಳದಲ್ಲಿ ಹುಲಿಕಲ್‌ ಗ್ರಾಪಂ ವತಿಯಿಂದ 1995-96ನೇ ಸಾಲಿನಲ್ಲಿ 3 ಮನೆಗಳಿಗೆ 2000 ನೇ ಇಸವಿಯಲ್ಲಿ 2 ಮನೆ ಹಾಗೂ 1 ನಿವೇಶನ ಹಾಗೂ 2005-06ರಲ್ಲಿ 4 ಸೈಟ್‌ಗಳನ್ನು ಅಕ್ರಮ ವಾಗಿ ಖಾತೆ ಮಾಡಲಾಗಿದೆ. ಈ ವಿಷಯ ಕೆಲವು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿದಿದೆ. ಖಾತೆಮಾಡಿಸಿಕೊಂಡವರಿಗೆ ಪ್ರಭಾವಿಗಳ ಶ್ರೀರಕ್ಷೆಯಿದೆ. ಅದಕ್ಕೆ ಸುಮ್ಮನಿದ್ದಾರೆ. ಅಕ್ರಮ ಖಾತೆ ರದ್ದುಗೊಳಿಸಿ ಅಕ್ರಮ ಮನೆಗಳನ್ನು ತೆರವುಗೊಳಿಸಿ ಹುಲಿಕಲ್‌ ಗ್ರಾಪಂ ವ್ಯಾಪ್ತಿಯ ನಿರ್ಗತಿಕರಿಗೆ ಈ ಜಾಗದಲ್ಲಿ ಆಶ್ರಯ ಯೋಜನೆಯಡಿ ಉಚಿತ ನಿವೇಶನ ನೀಡಬೇಕು ಎಂಬುದು ಗ್ರಾಮಸ್ಥರ ಮನವಿ.

Advertisement

ಜಿಲ್ಲಾಧಿಕಾರಿಗಳೇ ಇತ್ತ ಗಮನ ಹರಿಸಿ: ಸರ್ವೆ ನಂ 446 ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಗ್ರಾಪಂಖಾತೆ ಮಾಡಿದ್ದಾರೆ. ಪ್ರಭಾವಿಗಳು ಅಕ್ರಮವಾಗಿ ಗೋಮಾಳ ಕಬಳಿಕೆ ವಿರೋಧಿಸಿ ಗ್ರಾಮಸ್ಥರು, ದಲಿತಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿದರೂಯಾವುದೇ ಪ್ರಯೋಜನವಾಗಿಲ್ಲ. ರಾಮನಗರ ಜಿಲ್ಲಾಧಿಕಾರಿಗಳು ಖುದ್ದು ಗಮನ ಹರಿಸಿ ಅಕ್ರಮ ಖಾತೆ ವಜಾ ಗೊಳಿಸಿ ಈ ಜಾಗವನ್ನು ಆಶ್ರಯ ಯೋಜನೆಗೆ ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ. ವರದಿ ನೀಡಿದ್ದರೂ ಪ್ರಯೋನವಿಲ್ಲ: ನಾಲ್ಕು ವರ್ಷಗಳ ಹಿಂದೆಯೇ ಸರ್ವೆ ನಂ 446ರ ಗೋಮಾಳದಲ್ಲಿ 3-4 ಮನೆಗಳನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ. ಕೆಲವರು ಇದನ್ನು ಕಬಳಿಸಲು ಹೊಂಚು ಹಾಕಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿ ಗಳು ಅಂದಿನ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರೂ ಸಹ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.

ನಿರ್ಗತಿಕರು ದಲಿತ ಜನಾಂಗದವರು ಬರೀ ಗೋಮಾಳದೊಳಗೆ ಪ್ರವೇಶಿಸಿ ದರೆ ಸಾಕು ಓಡೋಡಿ ಬರುವ ಕಂದಾಯಇಲಾಖೆ ಅಧಿಕಾರಿಗಳಿಗೆ ಗೋಮಾಳದಜಾಗವನ್ನು ಪ್ರಭಾವಿಗಳು ಅಕ್ರಮವಾಗಿ ಕಬಳಿಸುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲ.ದೊರೆಸ್ವಾಮಿ, ಹುಲಿಕಲ್‌ ಗ್ರಾಮಸ್ಥ

ಸರ್ಕಾರಿ ಗೋಮಾಳದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆ ಹಾಗೂ ಖಾಲಿ ನಿವೇಶನಗಳಿಗೆ ಈ ಹಿಂದೆಯೇ ಖಾತೆಯಾಗಿದೆ. ಖಾತೆ ಪುಸ್ತಕಗಳಿಗೆ ಬರೆದಿಟ್ಟಿದ್ದಾರೆ. ಯಾರು ಬರೆದರು ಹಾಗೂ ಯಾವ ಆಧಾರದ ಮೇಲೆ ಖಾತೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಪ್ರೇಮ ಕುಮಾರಿ, ಹುಲಿಕಲ್‌ ಪಿಡಿಒ

ಗೋಮಾಳದ ಜಾಗಕ್ಕೆ ಗ್ರಾಪಂಯಲ್ಲಿ ಖಾತೆಯಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ವೆ ನಂ 446ರಲ್ಲಿ ಆರು ಮನೆ ಹಾಗು ಎರಡು ಶೆಡ್‌ಗಳಿಗೆ 94ಸಿ ಅರ್ಜಿ ಸಲ್ಲಿಸಿದ್ದಾರೆ. ದೂರುಗಳ ಬಂದ ಹಿನ್ನೆಲೆ ಶೆಡ್‌ ತೆರವುಗೊಳಿಸಿದ್ದೇವೆ. ಸಂತೋಷ್‌, ಗ್ರಾಮ ಲೆಕ್ಕಾಧಿಕಾರಿ

 

ಕೆ.ಎಸ್‌.ಮಂಜುನಾಥ್‌, ಕುದೂರು

Advertisement

Udayavani is now on Telegram. Click here to join our channel and stay updated with the latest news.

Next