Advertisement
ಬಂಜರು ಭೂಮಿಯಂತಿರುವ ಪುತ್ತೂರಿನ ನೂರಾರು ಎಕ್ರೆ ಗೋಮಾಳದಲ್ಲಿ ಗೋವುಗಳಿಗಾಗಿ ಹುಲ್ಲು ನಾಟಿ ಮಾಡುವ ಮಹತ್ತರ ಯೋಜನೆಗೆ ಶಾಸಕ ಸಂಜೀವ ಮಠಂದೂರು ಅವರಿಂದ ಯೋಜನಾ ಪ್ರಸ್ತಾವನೆ ಸಿದ್ಧಗೊಂಡಿದೆ.
Related Articles
Advertisement
ಗೋಶಾಲೆ ನಿರ್ಮಾಣ :
ಇದರ ಪೂರ್ವಭಾವಿಯಾಗಿ ಮುಂಡೂರು ಗ್ರಾಮದ ಗೋಮಾಳದಲ್ಲಿ 8.63 ಎಕ್ರೆ ಭೂಮಿಯನ್ನು ಗುರುತಿಸಿ ಜಿಲ್ಲೆಯಲ್ಲೇ ಸುಸಜ್ಜಿತ ಹಾಗೂ ವಿಶಾಲ ಗೋಶಾಲೆ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಮುಂಡೂರು ಗ್ರಾಮದ ಸರ್ವೆ ನಂ.151/2ರ ಗೋಮಾಳದಲ್ಲಿ 8.63 ಎಕ್ರೆಯನ್ನು ಗುರುತಿಸಿ ಜಿಲ್ಲೆಯಲ್ಲೇ ಸುಸಜ್ಜಿತ ಹಾಗೂ ವಿಶಾಲ ಗೋಶಾಲೆ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಸೂಚಿಸ ಲಾಗಿದ್ದು, ತಹಶೀಲ್ದಾರ್ ರಮೇಶ್ ಬಾಬು ಹಾಗೂ ಕಂದಾಯ ಅಧಿಕಾರಿ ಮಹೇಶ್ ನೇತೃತ್ವದಲ್ಲಿ ಪರಿಶೀಲನೆಯ ಹಂತದಲ್ಲಿದೆ.
ಹಾಲು ಸೊಸೈಟಿಗೆ ಗೋಮಾಳ :
ಕೆಎಂಎಫ್ ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಗೋಮಾಳ ಭೂಮಿಯನ್ನು ಹಸ್ತಾಂತರಿಸಿ ಅಲ್ಲಿ ಗೋವಿಗೆ ಬೇಕಾಗಿರುವ ಆಹಾರ/ಹುಲ್ಲು ಬೆಳೆಸಲು ಕ್ರಮ ಕೈಗೊಳ್ಳುವ ಚಿಂತನೆ ನಡೆದಿದೆ. ಕೆಎಂಎಫ್ನ ಜತೆಗಿರುವ ಪ್ರತಿಯೊಂದು ಹಾಲು ಉತ್ಪಾದಕ ಸಹಕಾರಿ ಸಂಘದ ಮೂಲಕ ಪಶು ಆಹಾರ ಸಿದ್ಧಗೊಳಿಸಲು ಆರ್ಥಿಕ ಸಹಕಾರ ನೀಡಿದಲ್ಲಿ ಗೋಮಾಳದಲ್ಲಿ ಹುಲ್ಲು ಬೆಳೆಯುವ ಯೋಜನೆ ಯಶಸ್ವಿಯಾಗಬಹುದು.
ಗೋಮಾಳದಲ್ಲಿ ಹುಲ್ಲು ಬೆಳೆದರೆ ಪಶುಗಳಿಗೆ ಮೇವು ಒದಗಿಸಲು ಸಾಧ್ಯವಾಗಬಹುದು ಎನ್ನುವ ಕಾರಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಜತೆಗೆ ಗೋಮಾಳ ಜಮೀನಿನಲ್ಲಿ ಗೋಶಾಲೆ ನಿರ್ಮಾಣದ ಚಿಂತನೆಯೂ ಇದೆ. –ಸಂಜೀವ ಮಠಂದೂರು, ಪುತ್ತೂರು ಶಾಸಕರು