Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಫಲಾನುಭವಿಗಳು ಹಣ ಪಾವತಿ ಮಾಡಿದ ಮೇಲೆ ಬಂದು ನಮ್ಮಲ್ಲಿ ದೂರು ಕೊಡುತ್ತಾರೆ. ಆ ಬಳಿಕ ಏನು ಮಾಡಲು ಸಾಧ್ಯವಿದೆ ಎಂದರು. ಗ್ರಾಮಸ್ಥ ಫಿಲಿಪ್ ಮಾತನಾಡಿ, ಲಂಚ ಕೊಡದಿದ್ದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದರು.
ಕೊಣಾಲು ಗ್ರಾಮದ ಶಿವಾರು ಎಂಬಲ್ಲಿ ಮಮತಾ, ಲೀಲಾವತಿ ಎಂಬವರ ಮನೆಗೆ ದೀನದಯಾಳ್ ಯೋಜನೆಯಡಿ ಕಂಬ ಅಳವಡಿಸಿದ್ದರೂ ವಿದ್ಯುತ್ ಸಂಪರ್ಕ ಆಗಿಲ್ಲ ಎಂದು ಗ್ರಾಮಸ್ಥ ಬಾಲಕೃಷ್ಣ ಅಲೆಕ್ಕಿ ಹೇಳಿದರು. ಪ್ರತಿಕ್ರಿಯಿಸಿದ ನೆಲ್ಯಾಡಿ ಶಾಖಾ JE ರಮೇಶ್ ಕುಮಾರ್, ಕಂಬ ಹಾಕಿ, ತಂತಿ ಎಳೆದಿರುವುದಕ್ಕೆ ಅರಣ್ಯ ಇಲಾಖೆಯಿಂದ ಆಕ್ಷೇಪ ಬಂದಿದ್ದು, ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೋಟಿಸ್ ಕಳಿಸಿದ್ದಾರೆ ಎಂದರು. ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಜಿಲ್ಲಾ ಮಟ್ಟದ ಅಧಿಕಾ ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಪಡಿತರ ಚೀಟಿ: ಆಕ್ರೋಶ
ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿ 10 ತಿಂಗಳಾದರೂ ಪಡಿತರ ಚೀಟಿ ಸಿಕ್ಕಿಲ್ಲ ಎಂದು ಗ್ರಾಮಸ್ಥ ಜಯಂತ ಅಂಬರ್ಜೆ ಹೇಳಿದರು. ಆಹಾರ ಇಲಾಖೆ ಅಧಿಕಾರಿಗಳ ಉತ್ತರದಿಂದ ತೃಪ್ತರಾಗದ ಜಯಂತ್, ಆದಾಯ ಪ್ರಮಾಣಪತ್ರ ತಂದ ಕೆಲವರಿಗೆ ತಾ.ಪಂ.ನಲ್ಲಿ ಪಡಿತರ ಚೀಟಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಂತ್ರಿಕ ತೊಂದರೆಯಿಂದಾಗಿ ವಿತರಣೆ ಆಗಿಲ್ಲ. ಇನ್ನೊಂದು ವಾರದಲ್ಲಿ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಗಲಿದೆ ಎಂದು ಇಒ ಹೇಳಿದರು.
Related Articles
Advertisement
ರಸ್ತೆಯಲ್ಲೇ ನೀರುತಿರ್ಲೆ ದೇವಸ್ಥಾನದ ಬಳಿ ಮಳೆ ನೀರು ರಸ್ತೆಯಲ್ಲಿ ನೀರು ಹರಿಯುತ್ತಿದೆ ಎಂದು ಗ್ರಾಮಸ್ಥ ಮೋನಪ್ಪ ಶೆಟ್ಟಿ ಆರೋಪಿಸಿದರು. ಈ ಬಗ್ಗೆ ದೂರು ಬಂದಿದ್ದು, ಪರಿಶೀಲಿಸಲಾಗಿದೆ. ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಇತ್ಯರ್ಥಗೊಂಡಿದೆ ಎಂದು ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಪ್ರತಿಕ್ರಿಯಿಸಿದರು. ಆಲಂತಾಯ ಗ್ರಾಮದ ಕಲ್ಲಂಡ, ಪೆರ್ಲ, ತಾರಕೆರೆ ಎಂಬಲ್ಲಿ ತೋಡಿನ ಬದಿ ಕುಸಿದಿದೆ. ತಡೆಗೋಡೆ ನಿರ್ಮಿಸಬೇಕೆಂದು ಗ್ರಾಮಸ್ಥ ವೆಂಕಪ್ಪ ಗೌಡ ಒತ್ತಾಯಿಸಿದರು. ಕಿಂಡಿ ಅಣೆಕಟ್ಟುಗಳ ವಿಚಾರ ಪ್ರಸ್ತಾವವಾದಾಗ ಪ್ರತಿಕ್ರಿಯಿಸಿದ ಇಒ ಜಗದೀಶ್, ದುರಸ್ತಿಗೆ ಜಿ.ಪಂ. ಸಿಇಒಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಗೋಳಿತ್ತೂಟ್ಟು ಜನತಾ ಕಾಲನಿಯಲ್ಲಿರುವ ಎಎನ್‌ಎಂ ಕಟ್ಟಡ ಸೋರುತ್ತಿದೆ. ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಅಬ್ದುಲ್ ಕುಂಞಿ ಒತ್ತಾಯಿಸಿದರು. ಕಟ್ಟಡದ ದುರಸ್ತಿಗೆ 1 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ತಾ.ಪಂ. ಸದಸ್ಯೆ ತೇಜಸ್ವಿನಿ ಶೇಖರ ಗೌಡ ಮಾಹಿತಿ ನೀಡಿದರು. ಶಾಂತಿನಗರ ಶಾಲೆ ಆಟದ ಮೈದಾನದಲ್ಲಿರುವ ಹಳೆಯ ಅಂಗನವಾಡಿ ಕಟ್ಟಡ ನೆಲಸಮ ಮಾಡುವಂತೆ ಗ್ರಾಮಸ್ಥರಾದ ಪ್ರತಾಪ್‌ಚಂದ್ರ ರೈ, ದೇಜಪ್ಪ ಆಗ್ರಹಿಸಿದರು. ಅಂದಾಜು ಪಟ್ಟಿ ತಯಾರಿಸಿ ಕ್ರಮ ಕೈಗೊಳ್ಳುವುದಾಗಿ ಇಒ ಭರವಸೆ ನೀಡಿದರು. ಕರಪತ್ರ ಹಂಚಿದ್ದೀರಾ?
ಮಲೇರಿಯಾ ಕರಪತ್ರ ಮುದ್ರಣಕ್ಕೆ ಗ್ರಾ.ಪಂ.ನಿಂದ ಹಣ ಖರ್ಚುಮಾಡಲಾಗಿದೆ. ಕರಪತ್ರ ಹಂಚಿದ್ದು ಕಂಡುಬಂದಿಲ್ಲ ಎಂದು ವೆಂಕಪ್ಪ ಗೌಡ ಹೇಳಿದರು. ಆಶಾ ಕಾರ್ಯ ಕರ್ತೆಯರ ಮೂಲಕ ಹಂಚಲಾಗಿದೆ ಎಂದು ಪಿಡಿಒ ನಯನಕುಮಾರಿ ಹೇಳಿದರು. ಗೋಳಿತ್ತೂಟ್ಟು ಹಾಲು ಉತ್ಪಾದಕರ ಹಾಗೂ ಕೊಣಾಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ತಲಾ 5 ಸೆಂಟ್ಸ್ ಜಾಗ ಕಾಯ್ದಿರಿಸುವ ಕುರಿತಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾಮಸ್ಥರಾದ ಫಿಲಿಪ್ ಬಳಕ, ಹರೀಶ್ ಪಾತ್ರಮಾಡಿ, ಅಬ್ರಹಾಂ, ನಾಸೀರ್ ಹೊಸಮನೆ, ಇಸ್ಮಾಯಿಲ್ ಕೋಲ್ಪೆ, ಸುರೇಶ್ ತಿರ್ಲೆ ಚರ್ಚೆಯಲ್ಲಿ ಪಾಲ್ಗೊಂಡರು. ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯೆಯರಾದ ತೇಜಸ್ವಿನಿ ಶೇಖರ ಗೌಡ ಕಟ್ಟಪುಣಿ, ಉಷಾ ಅಂಚನ್, ಸದಸ್ಯ ರಾದ ವಿ.ಸಿ. ಜೋಸೆಫ್, ಮೀನಾಕ್ಷಿ, ವಾಣಿ ಶೆಟ್ಟಿ, ಹೇಮಲತಾ, ಸವಿತಾ, ವಿಶ್ವನಾಥ ಮೂಲ್ಯ, ಡೀಕಯ್ಯ ಪೂಜಾರಿ, ನೀಲಪ್ಪ ನಾಯ್ಕ, ನೇಮಿರಾಜ, ಗಾಯತ್ರಿ, ಮುತ್ತಪ್ಪ ಗೌಡ, ಪುರುಷೋತ್ತಮ ಜಿ., ರೇಖಾ ಪಿ. ರೈ, ಭವ್ಯಾ, ತುಳಸಿ ಉಪಸ್ಥಿತರಿದ್ದರು. ಪಿಡಿಒ ನಯನಕುಮಾರಿ ಸ್ವಾಗತಿಸಿ, ವರದಿ ವಾಚಿಸಿದರು. ಸಿಬಂದಿ ಬಾಬು ನಾಯ್ಕ ವಂದಿಸಿದರು. ಪುಷ್ಪಾ ಜಯಂತ್, ದಿನೇಶ್, ಯಶವಂತ್ ಸಹಕರಿಸಿದರು. ತಿರ್ಲೆಯಲ್ಲಿ ಟಿ.ಸಿ. ಅಳವಡಿಸಿ
ತಿರ್ಲೆಯಲ್ಲಿ ಹೆಚ್ಚುವರಿ ಟಿ.ಸಿ. ಅಳವಡಿಸುವಂತೆ ಮನವಿ ನೀಡಿದ್ದೇವೆ. ಇಲ್ಲಿ 30ಕ್ಕೂ ಹೆಚ್ಚು ಕೃಷಿ ಪಂಪ್‌ಸೆಟ್‌ಗಳಿವೆ. ಮಂಜೂರಾದ ಟಿಸಿಯನ್ನು ರಾಜಕೀಯ ಒತ್ತಡ ಬಳಸಿ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇ.ಇ. ರಾಜೇಶ್, ತಿರ್ಲೆಯಲ್ಲಿ ಹೆಚ್ಚುವರಿ ಟಿ.ಸಿ. ಅಳವಡಿಸುವ ಸಂಬಂಧ ಅಂದಾಜು ಪಟ್ಟಿ ಮಾಡಲಾಗಿದೆ. ಮಂಜೂರಾತಿ ಹಂತದಲ್ಲಿದೆ ಎಂದರು. ಹಕ್ಕುಪತ್ರ ಸಿಕ್ಕಿದರೂ ನಿವೇಶನವಿಲ್ಲ
ಮನೆ ನಿವೇಶನದ ಹಕ್ಕುಪತ್ರ ದೊರೆತರೂ ನಿವೇಶನ ಸಿಕ್ಕಿಲ್ಲ. ಗ್ರಾಮಕರಣಿಕರಲ್ಲಿ ತೋರಿಸಿದಾಗ ಹಕ್ಕುಪತ್ರ ಒರಿಜಿನಲ್ ಅಲ್ಲ ಎಂದು ತಿಳಿಸಿದ್ದಾರೆಂದು ಮಹಿಳೆಯೊಬ್ಬರು ಸಭೆಯಲ್ಲಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಸದಸ್ಯೆ ಉಷಾ ಅಂಚನ್, ಇದೊಂದು ಗಂಭೀರ ಸಮಸ್ಯೆ. ಜಾಗದ ಸಮಸ್ಯೆ ಇದ್ದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯವರು ಸರಿಪಡಿಸಿಕೊಡಬೇಕು ಎಂದರು.