Advertisement

ವನ್ಯ ಜೀವಿಗಳ ಅಕ್ರಮ ಬೇಟೆ;ಗಾಲ್ಫರ್‌ ಜ್ಯೋತಿ ಸಿಂಗ್‌ ರಾಂಧವಾ ಅರೆಸ್ಟ್

03:42 PM Dec 26, 2018 | Team Udayavani |

ಲಕ್ನೋ: ಅಕ್ರಮವಾಗಿ ವನ್ಯ ಜೀವಿಗಳನ್ನು ಭಾರತದ ವೃತ್ತಿಪರ ಗಾಲ್ಫರ್‌ ಜ್ಯೋತಿ ಸಿಂಗ್‌ ರಾಂಧವಾರನ್ನು.22 ರೈಫ‌ಲ್‌ ಸಮೇತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

Advertisement

ವಿಶೇಷ ಹುಲಿ ಸಂರಕ್ಷಣಾ ದಳದ ಸಿಬಂದಿಗಳು ಮತ್ತು ಅರಣ್ಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ  ಕಟೇರ್ನಿಯಾ ಘಾಟ್‌ನ ಮೋತಿಪುರ್‌ ಅರಣ್ಯ ವಲಯ ದ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ರಾಂಧವಾ ರನ್ನು ಬಂಧಿಸಲಾಗಿದ್ದು, ಈ ವೇಳೆ ಹಂದಿ ಚರ್ಮ,ಸತ್ತ ಕಾಡು ಕೋಳಿ ಬೈನಾಕುಲರ್‌ ಕಾಟ್‌ರಿಜ್‌ಗಳು, ಮ್ಯಾಗಜೀನ್‌ಗಳು,ರೆಂಜ್‌ಫೈಂಡರ್‌, ಮೊಬೈಲ್‌ ಸರ್ಚ್‌ಲೈಟ್‌ಗಳು, 36 ಸಾವಿರ ರೂಪಾಯಿ ನಗದು ಮತ್ತು ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ರಾಂಧವಾ ಜೊತೆ ಇದ್ದ ಮಹೇಶ್‌ ವಿರಾಜ್‌ದಾರ್‌ ಎಂಬ ಇನ್ನೋರ್ವನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಏಸ್‌ ಗಾಲ್ಫ‌ರ್‌ ಆಗಿದ್ದ ರಾಂಧವಾ 2004 ರಿಂದ 2009 ರ ವೇಳೆ ವಿಶ್ವ ಗಾಲ್ಫ್ ರ್‍ಯಾಂಕಿಂಗ್‌ನಲ್ಲಿ 100 ಸ್ಥಾನಗಳ ಒಳಗೆ ಕಾಣಿಸಿಕೊಂಡಿದ್ದರು. 

Advertisement

ಚಿತ್ರ ನಟಿ ಚಿತ್ರಾಂಗದಾ ಸಿಂಗ್‌ರನ್ನು ವಿವಾಹವಾಗಿದ್ದ ರಾಂಧವಾ 2014 ರ ಎಪ್ರಿಲ್‌ನಲ್ಲಿ ಆಕೆಗೆ ವಿಚ್ಛೇಧನ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next