Advertisement
ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಬಳಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಾವು ಕಲಬುರಗಿ ಉಸ್ತುವಾರಿ ಸಚಿವರಾಗಿದ್ದ ವೇಳೆ ಸಚಿವ ಸಂಪುಟ ಸಭೆಯಲ್ಲಿ ಯಾದಗಿರಿ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿ ಸುವರ್ಣ ಗ್ರಾಮ ಯೋಜನೆಯಡಿ 200 ಗ್ರಾಮಗಳನ್ನು ಆಯ್ಕೆಮಾಡಿ, ಪ್ರತಿ ಗ್ರಾಮಕ್ಕೆ ತಲಾ 1 ಕೋಟಿ ನೀಡಲಾಗಿತ್ತು. ಬಳಿಕ ಎರಡನೇ ಬಾರಿಯೂ 200 ಗ್ರಾಮಗಳನ್ನು ಆಯ್ಕೆ ಮಾಡಿ, 200 ಕೋಟಿ ಗ್ರಾಮಗಳ ಅಭಿವೃದ್ಧಿಗಾಗಿ ನೀಡಲಾಗಿತ್ತು ಎಂದರು.
Related Articles
Advertisement
ಜನವರಿ ತಿಂಗಳ ನಂತರ ಹಣಕಾಸಿನ ವ್ಯವಸ್ಥೆ ಸುಧಾರಣೆಯಾಗುವ ಲಕ್ಷಣಗಳಿವೆ. ನಂತರ ಹೊಸ ಬಸ್‌ಗಳ ಖರೀದಿ ಸೇರಿದಂತೆ ಕಷ್ಟದ ಸಮಯದಲ್ಲೂ ಇಲಾಖೆಯಲ್ಲಿ ಸುಧಾರಣೆ ತಂದು, ಲಾಭದಾಯಕವಾಗಿಸೋಣ ಎಂದ ಸಚಿವ ಸವದಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಲಾರಿಗಳ 2 ತಿಂಗಳ ತೆರಿಗೆಯನ್ನು ಮನ್ನಾ ಮಾಡಲಾಗಿದ್ದು, ಇನ್ನೂ 2 ತಿಂಗಳ ತೆರಿಗೆ ಮನ್ನಾ ಮಾಡುವ ಚಿಂತನೆ ಇದೆ ಎಂದು ಲಾರಿ ಮಾಲೀಕರ ಸಂಘದ ಮನವಿಗೆ ಸ್ಪಂದಿಸಿ ಹೇಳಿದರು.
ಇದನ್ನೂ ಓದಿ: ಲವ್ ಜಿಹಾದ್ ತಡೆಗೆ ಕಠಿನ ಕಾನೂನು: ಉತ್ತರಪ್ರದೇಶ ಸರ್ಕಾರದಿಂದ ಸಚಿವಾಲಯಕ್ಕೆ ಪ್ರಸ್ತಾಪ
ಶಾಸಕ ಪಾಟೀಲಗೆ ಒಳ್ಳೆಯ ಕಾಲ ಬರುತ್ತಿದೆ:
ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಕಾಂಗ್ರೆಸ್ಸಿನಲ್ಲಿದ್ದರೂ ನನಗೆ ಅತ್ಯಂತ ಆತ್ಮೀಯರು. ಅವರ ತಂದೆ ದಿ. ಮಾಜಿ ಸಚಿವ ಬಸವರಾಜ ಪಾಟೀಲ ಬಿಜೆಪಿಯಿಂದ ಎಂಎಲ್‌ಸಿ ಆಗಿದ್ದರು. ಡಬ್ಬಿಯಿಂದ ಕರ್ಪೂರ ತೆಗೆದ ಮ್ಯಾಲೂ, ಕರ್ಪೂರದ ಡಬ್ಬಿಯಲ್ಲಿ ಎಷ್ಟೋ ದಿನಗಳ ಕಾಲ ವಾಸನೆ ಇದ್ದೇ ಇರುತ್ತದೆ. ಹೀಗಾಗಿ, ಶಾಸಕ ಪಾಟೀಲರಿಗೆ ಒಳ್ಳೆಯ ಕಾಲ ಬರುತ್ತಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಕೌಡಿಯಾಳ ಬಳಿ ಆರ್‌ಟಿಒ ಕಚೇರಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ವೇಳೆ ಸಚಿವ ಸವದಿ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ ಪಾಟೀಲ ನನಗೀಗ ಒಳ್ಳೆಯ ಕಾಲವೇ ಇದೆ ಎಂದರು. ಇದ್ದಕ್ಕೆ ಅಲ್ಲೇ ಮತ್ತೆ ಪ್ರತಿಕ್ರಿಯಿಸಿದ ಸವದಿ ಅವರು, ಇದಕ್ಕಿಂತಲೂ ಒಳ್ಳೆಯ ಕಾಲ ಬರುತ್ತಿದೆ ಎಂದ ಹೇಳುವ ಮೂಲಕ ನೆರೆದಿದ್ದ ಜನರನ್ನು ನಗೆ ಗಡಲಲ್ಲಿ ತೇಲಿಸಿದರು.
ರಾಜಶೇಖರ ಪಾಟೀಲ್ ಅವರು ಕೆಲವೊಂದು ವಿಚಾರಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಖಂಡಿತ ಅವರಿಗೆ ಬೇಸರ ಆಗದ ರೀತಿಯಲ್ಲಿ ಅವರ ಕ್ಷೇತ್ರದ ಕೆಲಸ ಮಾಡಿಕೊಡುವೆ ಎಂದೂ ಲಕ್ಷ್ಮಣ ಸವದಿ ನುಡಿದರು.
ಇದನ್ನೂ ಓದಿ: ದೆಹಲಿಯಲ್ಲಿ ಬಂಧಿಸಲ್ಪಟ್ಟ ಇಬ್ಬರು ಜೈಶ್ ಉಗ್ರರು ಐದು ದಿನ ಪೊಲೀಸ್ ಕಸ್ಟಡಿಗೆ