Advertisement

ಶ್ರೀಕೃಷ್ಣ ಮಠದಲ್ಲಿ ಶಿಖರ ಪ್ರತಿಷ್ಠೆ

11:33 AM Jun 08, 2019 | Team Udayavani |

ಉಡುಪಿ: ಶ್ರೀಕೃಷ್ಣಮಠದ ಸುವರ್ಣಗೋಪುರ ಬಹುತೇಕ ಪೂರ್ಣಗೊಂಡಿದ್ದು ಅಂತಿಮಸ್ಪರ್ಶ ಕೊಡುವ ಕೆಲಸವಷ್ಟೇ ಬಾಕಿ ಇದೆ.

Advertisement

ಸುಮಾರು 100 ಕೆ.ಜಿ. ಚಿನ್ನ, 900 ಕೆ.ಜಿ. ಬೆಳ್ಳಿ, 300 ಕೆ.ಜಿ. ತಾಮ್ರದಿಂದ ಗೋಪುರವನ್ನು ನಿರ್ಮಿಸಲಾಗಿದೆ. ಸುಮಾರು 700 ಸಿಎಫ್ಟಿ ಸಾಗುವಾನಿ ಮರವನ್ನು ಬಳಸಲಾಗಿದೆ.

ಸಮಗ್ರ ಕೆಲಸದ ಉಸ್ತುವಾರಿಯನ್ನು ಯು. ವೆಂಕಟೇಶ್‌ ಶೇಟ್ ಅವರು ವಹಿಸಿಕೊಂಡಿದ್ದರೆ ಸುರೇಶ್‌ ಶೇಟ್ ಇದರ ನೇತೃತ್ವ ವಹಿಸಿಕೊಂಡಿದ್ದರು. ಬಂಟಕಲ್ಲು ಗಣಪತಿ ಆಚಾರ್ಯ ಮತ್ತು ಪರ್ಕಳ ನಾಗರಾಜ ಶರ್ಮರ ತಂಡ ಚಿನ್ನದ ಕೆಲಸವನ್ನು ಮಾಡಿದೆ. ಹಿರಿಯಡಕ ಗಣೇಶ ಆಚಾರ್ಯರ ತಂಡ ಮರದ ಕೆಲಸವನ್ನು ಮಾಡಿದೆ. ಚಿನ್ನ, ಬೆಳ್ಳಿ, ಮರದ ಕೆಲಸಕ್ಕೆ ಸುಮಾರು ಆರು ತಿಂಗಳು ತಗುಲಿದೆ. ಮರದ ಕೆಲಸವನ್ನು 26 ಜನರು, ಲೋಹದ ಕೆಲಸವನ್ನು 33 ಜನ ಕುಶಲಕರ್ಮಿಗಳು ನಿರ್ವಹಿಸಿದ್ದಾರೆ.

ಹಳೆಯ ತಾಮ್ರದ ತಗಡು ಸುಮಾರು 1,250 ಕೆ.ಜಿ. ಸಿಕ್ಕಿದ್ದು ಇದರಲ್ಲಿ ಕೃಷ್ಣ ಮತ್ತು ರಾಮನ ಚಿತ್ರವಿರುವ ಟಂಕೆಯನ್ನು ತಯಾರಿಸಲಾಗಿದೆ. ಇದರಲ್ಲಿ ಕೃಷ್ಣನ ವಿಗ್ರಹದ ಟಂಕೆಗಳು ಹೆಚ್ಚು. ಸುಮಾರು 20,000 ಟಂಕೆಗಳನ್ನು ನಿರ್ಮಿಸಲಾಗಿದೆ. ಇದರ ಕೆಲಸವನ್ನೂ ಲೋಹದ ಕುಶಲಕರ್ಮಿಗಳೇ ನಡೆಸಿದ್ದಾರೆ. ಟಂಕೆಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ. ಹಿಂದೆ ಇದ್ದ ಉತ್ತಮ ಮರದ ತೊಲೆಗಳನ್ನು ಹಾಗೆಯೇ ಬಳಸಲಾಗಿದೆ. ಉಳಿದ ಹಲಗೆಯನ್ನು ಗರ್ಭಗುಡಿಯ ಒಳಗೆ ಮೇಲೆ ಮತ್ತು ಕೆಳಗೆ ಎರಡು ಪದರಗಳಲ್ಲಿ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next