Advertisement
ಕಟಾವು ಹಣ ವೇಸ್ಟೀಜಿಗೆನಮ್ಮಲ್ಲಿ ಶೇ.75ರಷ್ಟು ಒಡವೆ ಅಂಗಡಿಗಳು ಟ್ಯಾಕ್ಸಿನ ವ್ಯಾಪ್ತಿಗೆ ಬರುವುದಿಲ್ಲ. ಉಳಿದ ಶೇ.25ರಷ್ಟು ಮಾತ್ರ ತೆರಿಗೆ ವ್ಯಾಪ್ತಿಯಲ್ಲಿವೆ. ಇದು ಶೇ. 80ರಷ್ಟು ವಹಿವಾಟು ನಡೆಸುತ್ತಿದೆ. ಆದರೆ ನೋಟು ಅಪಮೌಲೀಕರಣವಾದ ಮೇಲೆ ಟ್ಯಾಕ್ಸಿನ ವ್ಯಾಪ್ತಿಗೆ ಬರದ ಒಡವೆ ವ್ಯವಹಾರಿಗಳಿಗೆ ದೊಡ್ಡ ಪೆಟ್ಟಾಗಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಇದರ ಬಿಸಿ ಜೋರಾಗಿ ತಟ್ಟಿ ಉಳಿತಾಯ ಇಳಿಮುಖವಾಗುತ್ತ ಬಂದಿದೆ. ಸಣ್ಣಪುಟ್ಟ ಅಂಗಡಿಗಳಲ್ಲಿ ಕೊಳ್ಳುತ್ತಿದ್ದವರೆಲ್ಲರೂ ಹೂಡಿಕೆ
ಮೊತ್ತವನ್ನು ಇಳಿಸಿಕೊಂಡಿದ್ದಾರೆ. ಇಲ್ಲೂ ಕೂಡ ಲಕ್ಷ ರೂ. ವಹಿವಾಟು ದಾಟಿದರೆ ಚೆಕ್, ಪಾನ್‌ಕಾರ್ಡು ಕೊಡಬೇಕಾಗುತ್ತದೆ. ಒಂದು ಪಕ್ಷ ಕಾರ್ಡು ಸ್ವೆ„ಪ್ ಮಾಡಬಹುದಾದರೂ, ಸ್ವೆ„ಪ್ ಮಾಡಿದ್ದರಿಂದ ಕಡಿತವಾಗುವ ತೆರಿಗೆ ಮೊತ್ತವನ್ನು ಅಂಗಡಿಯವರು ಗ್ರಾಹಕರ ಮೇಲೆ ಹಾಕಬೇಕೋ, ತಾನೇ ಇಟ್ಟುಕೊಳ್ಳಬೇಕೋ ಅನ್ನೋ ಗೊಂದಲ ಹಾಗೇ ಇದೆ. ಇದರಿಂದ ಎಷ್ಟು ಬಂಗಾರ ವ್ಯಾಪಾರಿಗಳು ಸ್ವೆ„ಪ್ ಮಾಡಿಸಿಕೊಳ್ಳುತ್ತಿಲ್ಲ. ಕೆಲವರು ಕೂಲಿ, ವೇಸ್ಟೇಜ್‌ನಲ್ಲಿ ಜಾಸ್ತಿ ಮೊತ್ತ ತೋರಿಸಿ ಹೊಂದಾಣಿಕೆ ಮಾಡುತ್ತಿರುವುದು ಉಂಟು.
ಚಿನ್ನದ ಮೇಲೆ ದೊಡ್ಡ ಹೂಡಿಕೆ ಮಾಡುವುದಾದರೆ ಇದಕ್ಕೆ ಕ್ಯಾಪಿಟಲ್ ಗೇನ್ ತೆರಿಗೆ ಕಟ್ಟಬೇಕು. ಹೊಸ ಇಟಿ ಆಕ್ಟ್ ಪ್ರಕಾರ ಚಿನ್ನದ ಮಾರಾಟದಿಂದ ಸಿಗುವ ಲಾಭವೂ ಕೂಡ ಆದಾಯದ ಒಂದು ಭಾಗವಾಗುತ್ತದೆ. ಕ್ಯಾಪಿಟಲ್ ಗೇನ್ ಶೇ. 20ರಷ್ಟು ಇರುತ್ತದೆ. ಇದರಲ್ಲಿ ಒಂದು ದಾರಿ ಇದೆ. ಅದೇನೆಂದರೆ ಚಿನ್ನದ ಮೇಲಿನ ಆದಾಯವನ್ನು ಅನಿರೀಕ್ಷಿತ ಆದಾಯ ಎಂದು ತೋರಿಸಿದರೆ ಟ್ಯಾಕ್ಸ್ ಅನ್ನು ಕಡಿಮೆ ಮಾಡಬಹುದು. ಆದರೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಬಹುತೇಕ ಚಿನ್ನದ ಹೂಡಿಕೆಗಳು ಕಾಳ ದಂಧೆಯಲ್ಲೇ ನಡೆಯುವುದು. ಬ್ರಾಂಡೆಡ್ ಜ್ಯೂಯಲರಿ ಅಂಗಡಿಗಳು, ಬ್ಯಾಂಕ್‌ಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಎಲ್ಲಾ ತೆರಿಗಳನ್ನು ಕಟ್ಟಿಯೇ ವೈಟ್ ವ್ಯವಹಾರ ಮಾಡಬೇಕಾಗುತ್ತದೆ. ಆಭರಣ ಚಿನ್ನ ಲಾಭವೋ, ನಷ್ಟವೋ?
ಹಿಂದೆ ಎಲ್ಲಾ ಚಿನ್ನದ ಮೇಲೆನ ಹೂಡಿಕೆ ಅಂದರೆ ಆಭರಣಗಳೇ ಆಗಿತ್ತು. ಈಗ ಚಿನ್ನದ ಹೂಡಿಕೆಗೆ ಬಾರ್, ಕಾಯಿನ್, ಇಟಿಎಫ್ ಹೀಗೆ ಅನೇಕ ಅವಕಾಶಗಳು ಇರುವುದರಿಂದ ಗೊಂದಲವೂ ಇದೆ. ಆಭರಣದ ಮೇಲೂ ಹೂಡಿಕೆ ಮಾಡಬಹುದು. ಆದರೆ ಅದರಿಂದ ಲಾಭದ ಪ್ರಮಾಣ ಕಡಿಮೆ. ಹೇಗೆಂದರೆ ಆಭರಣಗಳನ್ನು ಮಾರಾಟ ಮಾಡಲು ಮುಂದಾದರೆ ಶೇ. 10ರಿಂದ 35ರಷ್ಟೇ ವೇಸ್ಟೇಜ್ ಹೋಗುತ್ತದೆ. ಉದಾಹರಣೆಗೆ 10 ಗ್ರಾಂ. ಒಡವೆಗೆ ಶೇ. 20ರಷ್ಟು ಅಂದರೆ ಎರಡು ಗ್ರಾಂ. ಬಂಗಾರ ತೆಗೆದರೆ 5-6 ಸಾವಿರ ಲಾಸ್. 60 ಸಾವಿರ ಚಿನ್ನಕ್ಕೆ ಕೈಗೆ ಸಿಗುವುದು ಕೇವಲ 54 ಸಾವಿರ. ಹೂಡಿಕೆಯಲ್ಲಿ ಹೂಡಿದ ಹಣಕ್ಕಿಂತ ಹೆಚ್ಚು ಲಾಭ ನಿರೀಕ್ಷಿಸುತ್ತಾರೆ. ಇಲ್ಲಿ ಹೀಗೇ ಆಗುವುದಿಲ್ಲ. ಇನ್ನು ಅಂಗಡಿಯಲ್ಲೋ, ಬ್ಯಾಂಕಿನಲ್ಲಿ ಕೊಂಡರೆ ಪ್ಯಾಕಿಂಗ್, ಟ್ಯಾಕ್ಸ್ ಕಟ್ಟಲೇಬೇಕು. ಗ್ರಾಂಗೆ ಹೆಚ್ಚಾ ಕಡಿಮೆ 100,150ರೂ. ಜಾಸ್ತಿಯಾಗುತ್ತದೆ. ಗ್ರಾಂ. ಚಿನ್ನ 100, 200 ಜಾಸ್ತಿಯಾಗಲು ಕಡಿಮೆ ಎಂದರೂ 6 ತಿಂಗಳು ಬೇಕು. ಇಟಿಎಫ್ನಲ್ಲಿ ಗೋಲ್ಡ್ ಪೇಪರ್‌ನಲ್ಲಿ ಇರುತ್ತದೆ. ಫಿಸಿಕಲ್ಲಾಗಿ ಇರೋಲ್ಲ. ಮಧ್ಯಮವರ್ಗದವರು ಇದನ್ನು ಇಷ್ಟ ಪಡುವುದಿಲ್ಲ. ಆದ್ದರಿಂದ ಹೂಡಿಕೆ ಮಾಡುವವರು ಎಲ್ಲ ಅಂಶ ಗಮನದಲ್ಲಿಟ್ಟು ಕೊಳ್ಳಬೇಕು.
Related Articles
ಭಾರತದ ಮಟ್ಟಿಗೆ ಹೇಳುವುದಾದರೆ ಚಿನ್ನದ ಮೇಲಿನ ಹೂಡಿಕೆ ತೀರಾ ರಿಸ್ಕ್ ಅಲ್ಲ. ಅದರ ರಕ್ಷಣೆ ಸುಲಭ. ಆದರೆ ಇತ್ತೀಚೆಗೆ ಸರ್ಕಾರ ಕಾನೂನು ಮಾಡಿದೆ. ಚಿನ್ನದ ಅಂಗಡಿಗಳಲ್ಲಿ ಬಿಲ್ ಇಲ್ಲದೇ ಬಿಸ್ಕತ್, ಬಾರ್‌ಗಳನ್ನು ಮಾರುವ ಹಾಗಿಲ್ಲ. ಪ್ರತಿ ಅಂಗಡಿಯಲ್ಲಿ ಇಂತಿಷ್ಟೇ ಕೆ.ಜಿ ಬಂಗಾರ ಕೊಳ್ಳಬೇಕು ಎಂಬ ನಿಯಮವಾಗಿದೆ. ಭವಿಷ್ಯದಲ್ಲಿ ಬಂಗಾರ ಮಾರಾಟ ವ್ಯವಹಾರು ಸಂಪೂರ್ಣ ವೈಟ್ . ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಿಗಲಿದೆ.
Advertisement
ಆಭರಣಕ್ಕಷ್ಟೇ ಸಾಲಬಂಗಾರದ ಮೇಲೆ ಹೂಡಿಕೆ ಮಾಡುವವರು ತಿಳಿದು ಕೊಳ್ಳಬೇಕಾದೆ ಇನ್ನೊಂದು ವಿಷಯ ಎಂದರೆ ಚಿನ್ನವನ್ನು ಕಷ್ಟ ಕಾಲಕ್ಕೆ ಹಣವಾಗಿ ಪರಿವರ್ತಿಸಬಹುದು. ಈ ಕಾರಣಕ್ಕೆ ಚಿನ್ನ ಗ್ರಾಮೀಣ ಭಾಗದ ದೊಡ್ಡ ಹೂಡಿಕೆಯಾಗಿದೆ. ಆದರೆ ಗೊತ್ತಿರಲಿ, ಬ್ಯಾಂಕುಗಳ ಆಭರಣಗಳಿಗೆ ಸಾಲವನ್ನು ನೀಡುತ್ತದೆಯೋ ಹೊರತು, ಇಟಿಎಫ್ ಚಿನ್ನಕ್ಕೋ, ಚಿನ್ನದ ನಾಣ್ಯದ ಮೇಲೆ ಸಾಲ ನೀಡುವುದಿಲ್ಲ. ಬದಲಾವಣೆಯ ಗಮನವಿರಲಿ
ಚಿನ್ನದ ಬೆಲೆಯ ಏರುಪೇರುಗಳನ್ನು ಗಮನಿಸಿಯೇ ಹೂಡಿಕೆ ಮಾಡಬೇಕು ಅನ್ನೋದನ್ನು ಮಾತ್ರ ಮರೆಯಬಾರದು. ಇಂದೂ ಕೂಡ ನಮ್ಮ ಚಿನ್ನದ ಮಾರುಕಟ್ಟೆಯಲ್ಲಿ ಆಭರಣ ಚಿನ್ನವೇ ಮೇಲುಗೈ ಸಾಧಿಸಿರುವುದು. ಚಿನ್ನದ ನಾಣ್ಯ, ಬಾರ್, ಇಟಿಎಫ್ ಏನೇ ಬಂದರು ಆಭರಣಗಳ ಮೇಲಿನ ಹೂಡಿಕೆಯ ಮೇಲಿನ ಸಂಪ್ರದಾಯದ ಮಂಡಿವಂತಿಕೆಯಿಂದ ಹೊರ ಬಂದಿಲ್ಲ. ಹಣವನ್ನು ಮನೆಯಲ್ಲಿ ಇಡುವ, ಬ್ಯಾಂಕ್‌ನಲ್ಲಿ ಹಾಕುವ ಬದಲು ಇಟಿಎಫ್ಗಳಲ್ಲಿ ತೊಡಗಿಸಬಹುದು. ಇತ್ತೀಚಿನ ಚಿನ್ನದ ಬೆಲೆಯ ಏರುಪೇರುಗಳನ್ನು ಗಮನಿಸಿದರೆ ಇಟಿಎಫ್ ಕೂಡ ತತ್‌ಕ್ಷಣ ಲಾಭ ತಂದು ಕೊಡುವ ಭರವಸೆಯನ್ನು ತೋರಿಸುತ್ತಿದೆ. ತತ್‌ಕ್ಷಣ ಲಾಭವಿರೋಲ್ಲ
ಹೂಡಿಕೆ ಮಾಡುವು ಮೊದಲು ಲಾಭ ಬೇಗ ನಿರೀಕ್ಷೆ ಮಾಡುವುದು ತಪ್ಪಾಗುತ್ತಾದೆ. ಲಕ್ಷಾಂತರ ರೂ. ಚಿನ್ನದ ನಾಣ್ಯ, ಬಾರ್‌ಗಳನ್ನು ಕೊಂಡರೆ ಅದನ್ನು ಇಡಲು ಲಾಕರ್‌ಗಳಿಗೆ ದುಡ್ಡು ಕೊಡಬೇಕಾಗುತ್ತದೆ. ಚಿನ್ನದಿಂದ ತತ್‌ಕ್ಷಣ ಲಾಭ ನಿರೀಕ್ಷಿಸುವುದು ತಪ್ಪು. ಯಾವುದೇ ಪ್ರಕಾರದ ಚಿನ್ನದಲ್ಲೂ ತಕ್ಷಣ ಲಾಭ ಸಿಗೋದಿಲ್ಲ. ಕಳೆದ ವರ್ಷ ಮಾತ್ರ ಗ್ರಾಂ.ಗೆ 400ರೂ. ಏರಿಕೆ ಆಗಿದ್ದು. ಇಂಥ ನಿರೀಕ್ಷೆ ಪ್ರತಿ ಸಲ ಮಾಡುವುದು ತಪ್ಪಾಗುತ್ತದೆ. ಆದ್ದರಿಂದ ಬೆಲೆ ಕಡಿಮೆಯಾಗಬಹುದು. ಚಿನ್ನವನ್ನು ಮರೆಯಬೇಡಿ
ಚಿನ್ನದ ಮೇಲಿನ ಹೂಡಿಕೆಗೆ ಶತಮಾನಗಳ ಇತಿಹಾಸ ಇದೆ. ಎಲ್ಲೂ ಕಪ್ಪು ಚುಕ್ಕೆ ಇಲ್ಲ. ಷೇರು ಹುಟ್ಟಿದ್ದೇ 1979ರಲ್ಲಿ. ಅಲ್ಲಿಂದ ಇಲ್ಲಿಯ ತನಕ ಷೇರು ಶೇ. 11ರಂತೆ ವಾರ್ಷಿಕ ಆದಾಯ ತಂದು ಕೊಡುತ್ತಿದೆ. ಚಿನ್ನ ಹಾಗಿಲ್ಲ, ಅದರ ಲಾಭ ವೇಗ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ಷೇರು, ರಿಯಲ್ ಎಸ್ಟೇಟು, ಚಿನ್ನ – ಈ ಮೂರರಲ್ಲಿ ಹೂಡಿಕೆಯಲ್ಲಿ ಈಗ ಗಟ್ಟಿ ಸ್ಥಾನ ಚಿನ್ನಕ್ಕೆ. ಶೇ. 70ರಷ್ಟು ಚಿನ್ನಕ್ಕೆ, ಶೇ.30ರಷ್ಟು ರಿಯಲ್ ಎಸ್ಟೇಟಿಗೆ ಸುರಿಯುವವರು ಇದ್ದಾರೆ. ಹೂಡಿಕೆ ದಾರರಿಗೆ ಚಿನ್ನದ ಮೇಲೆ ಮೋಹ ಏಕೆಂದರೆ ಇದು ರಿಯಲ್ ಎಸ್ಟೇಟ್, ಷೇರಿಗಿಂತ ಹೆಚ್ಚೆಚ್ಚು ಲಾಭ ತಂದು ಕೊಟ್ಟಿದೆ. ಹಣದುಬ್ಬರ ಹೆಚ್ಚಿದ್ದಾಗ, ಷೇರು ಮಾರುಕಟ್ಟೆ ಬಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವುದು ಒಳಿತು. ಈ ಎಲ್ಲವೂ ವೈಟಲ್ಲೇ ಆಗಬೇಕಾಗಿರುವುದರಿಂದ ಹೂಡಿಕೆ ಕಡಿಮೆಯಾಗಿದೆ. ಸ್ವಲ್ಪವಾದರೂ ಹಾಕಿ
ಬಹಳ ಸೇಫ್ ಎಂದರೆ ಚಿನ್ನದ ಬೆಲೆ ಇಳಿಕೆಯನ್ನು ಆಧರಿಸಿ ಹೂಡಿಕೆ ಮಾಡುವುದು ಸೂಕ್ತ. ನಿಮ್ಮ ಒಟ್ಟಾರೆ ಹೂಡಿಕೆಯಲ್ಲಿ ಶೇ. 5ರಷ್ಟನ್ನು ಚಿನ್ನದ ಮೇಲೆ ಹಾಕುವುದು ಒಳಿತು. ಹೂಡಿಕೆಯ ಪ್ರಮಾಣವನ್ನು ಏರಿಳಿಕೆಯಾಗುವ ಬೆಲೆಯ ಅನ್ವಯ ವ್ಯತ್ಯಾಸ ಮಾಡಿಕೊಳ್ಳಬಹುದು. ಗೊತ್ತಿರಲಿ. ಹೂಡಿಕೆ ದೀರ್ಘಾವಧಿ ಯೋಜನೆಗೆ ಮಾತ್ರ. – ಗೂಳಿಚಿನ್ನಪ್ಪ