Advertisement

ಗೋಲ್ಡನ್‌ ಸುರೇಶ್‌ ಹಂತಕರ ಬಂಧನ

11:33 AM May 13, 2017 | |

ಬೆಂಗಳೂರು: ಉಡುಪಿಯ ಕೋಟೇಶ್ವರ ಮೂಲದ ರೌಡಿಶೀಟರ್‌ ಸುರೇಶ್‌ ಪೂಜಾರಿ ಅಲಿಯಾಸ್‌ ಗೋಲ್ಡನ್‌ ಸೂರಿಯ ಹಂತಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಿಳೇಕಳ್ಳಿಯ ರಾಕೇಶ್‌ ಮತ್ತು ಸುರೇಶ್‌ ಬಂಧಿತರು. ಮೃತ ಸುರೇಶ್‌ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದರು. ಆರೋಪಿಗಳಿಂದ ಸುರೇಶ್‌ 4 ಕೋಟಿ ರೂ. ಸಾಲ ಪಡೆದಿದ್ದ. ಬಳಿಕ ಹಣ ಹಿಂದಿರುಗಿಸಲು ನಿರಾಕರಿಸಿದ್ದ.  

Advertisement

ಸಾಲ ಮರಳಿ ಕೇಳಿದ ಸ್ನೇಹಿತರ ಮೇಲೇ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಸ್ನೇಹಿತರು ಆತನನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿಯ ವಿವಿಧ ಠಾಣೆಗಳಲ್ಲಿ ಸೂರಿ ವಿರುದ್ಧ 18ಕ್ಕೂ ಹೆಚ್ಚು ಪ್ರಕರಣಗಳಿದ್ದು, ಹಲವರಿಂದ ಹಣ ಪಡೆದು ನಾಪತ್ತೆಯಾಗಿ ಬೆಂಗಳೂರಿಗೆ ಬಂದು ಅಪಾರ್ಟ್‌ಮೆಂಟ್‌ ಒಂದನ್ನು ಬಾಡಿಗೆ ಪಡೆದು ನೆಲೆಸಿದ್ದ.

ಇಲ್ಲಿಯೂ ಕೆಲ ರೌಡಿ ಶೀಟರ್‌ಗಳನ್ನು ಪರಿಚಯಿಸಿಕೊಂಡು ಬಡ್ಡಿ ವ್ಯಾವಹಾರ ನಡೆಸುತ್ತಿದ್ದ. ಪಡೆದ ಸಾಲವನ್ನು ಹಿಂದಿರುಗಿಸುವಂತೆ ಹೇಳಿದ್ದ ಸ್ನೇಹಿತರಿಗೆ ಪ್ರಾಣ ಬೆದರಿಕೆ ಹಾಕಿದ್ದ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಔತಣಕೂಟದ ನೆಪದಲ್ಲಿ ಮಂಗಳವಾರ ಸುರೇಶ ವಾಸವಿದ್ದ ಜಯನಗರದಲ್ಲಿರುವ ಅಪಾರ್ಟ್‌ಮೆಂಟ್‌ಗೆ ತೆರಳಿ ಹತ್ಯೆಗೈದಿದ್ದಾರೆ.

ನಿದ್ದೆ ಮಾತ್ರೆ ಹಾಕಿ ಕೊಲೆ: ಆರೋಪಿಗಳು ಸುರೇಶ್‌ಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿಕೊಟ್ಟಿದ್ದರು. ನಂತರ ಅತನ ಬಾಯಿಗೆ ಪ್ಲಾಸ್ಟರ್‌ ಹಾಕಿ, ಕತ್ತು ಸೀಳಿ ಕೊಲೆ ಮಾಡಿದ್ದರು. ನೆಲದ ಮೇಲೆ ಚೆಲ್ಲಿದ್ದ ರಕ್ತ ಸ್ವತ್ಛಗೊಳಿಸುವಷ್ಟರಲ್ಲಿ ಬೆಳಗಾಗಿತ್ತು. ಈ ವೇಳೆಯಲ್ಲಿ ಶವ ಸಾಗಿಸುವುದು ಕಷ್ಟ ಎಂದರಿತ ಆರೋಪಿಗಳು, ಶವವನ್ನು ಅಲ್ಲೇ ಬಿಟ್ಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next