ಕೋವಿಡ್ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ನಿಧಾನವಾಗಿ ಒಬ್ಬೊಬ್ಬರಾಗಿ ಸ್ಟಾರ್‌ಗಳುಶೂಟಿಂಗ್‌ನತ್ತ ಮುಖ ಮಾಡುತ್ತಿದ್ದಾರೆ. ಇನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಚಿತ್ರೀಕರಣದತ್ತ ಹೊರಡಲು ಅಣಿಯಾಗುತ್ತಿದ್ದಾರೆ.
ಈಗಾಗಲೇ ನಟ ಗಣೇಶ್ “ಗಾಳಿಪಟ-2′ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಆ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗಲೇ ಲಾಕ್ ಡೌನ್ ಘೋಷಣೆಯಾಗಿದ್ದರಿಂದ, ಚಿತ್ರತಂಡ “ಗಾಳಿಪಟ-2′ ಚಿತ್ರೀಕರಣಕ್ಕೆ ಬ್ರೇಕ್ ಹಾಕಿತ್ತು. ಈಗ ಲಾಕ್‌ಡೌನ್ ತೆರವಾಗುತ್ತಿದ್ದರೂ, “ಗಾಳಿಪಟ-2’ಗೆ ಅಂದುಕೊಂಡ ಲೊಕೇಷನ್‌ಗಳಲ್ಲಿ ಚಿತ್ರೀಕರಣ ಮಾಡಲು ಅನುಮತಿ ಸಿಗದಿರುವುದರಿಂದ,ಸದ್ಯಕ್ಕೆ “ಗಾಳಿಪಟ-2′ ಶೂಟಿಂಗ್ ಮುಂದೂಡಿದೆ ಚಿತ್ರತಂಡ. ಇದರ ನಡುವೆಯೇ ನಾಯಕ ಗಣೇಶ್ ತಮ್ಮ ಮತ್ತೂಂದು ಹೊಸಚಿತ್ರಕ್ಕೆ ಸದ್ದಿಲ್ಲದೆ ತಯಾರಿ ನಡೆಸಿದ್ದಾರೆ.
ಹೌದು,ಕೆಲ ತಿಂಗಳ ಹಿಂದಷ್ಟೇ ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್’ ಚಿತ್ರ ಘೋಷಣೆಯಾಗಿತ್ತು. ಇಲ್ಲಿಯವರೆಗೆ ಚಿತ್ರದ ಪ್ರೀ-ಪ್ರೊಡಕ್ಷನ್‌ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಈಗ ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ.
ಈಗಾಗಲೇ “ತ್ರಿಬಲ್ ರೈಡಿಂಗ್’ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಹೈದರಾಬಾದ್‌ನಲ್ಲಿ ನಡೆಸುತ್ತಿರುವ ಚಿತ್ರತಂಡ, ಇದೇ ಅಕ್ಟೋಬರ್ ಎರಡನೇ ವಾರದಿಂದ ಚಿತ್ರದ ಶೂಟಿಂಗ್ ನಡೆಸಲು ಪ್ಲಾನ್ ಹಾಕಿಕೊಂಡಿದೆ. “ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ಗಣೇಶ್ ಅವರೊಂದಿಗೆ ಸಾಧುಕೋಕಿಲ, ರವಿಶಂಕರ್, ಕುರಿ ಪ್ರತಾಪ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.ಸದ್ಯ ಚಿತ್ರದ ನಾಯಕಿಯ ಆಯ್ಕೆ ಅಂತಿಮ ಹಂತದಲ್ಲಿದ್ದು, ಗಣೇಶ್‌ಗೆ ಜೋಡಿಯಾಗುವ ಹೀರೋಯಿನ್ ಹೆಸರು ಇನ್ನಷ್ಟೇ ಅನೌನ್ಸ್ ಆಗಬೇಕಿದೆ. ಈ ಹಿಂದೆ ವಿನೋದ್ ಪ್ರಭಾಕರ್ ಅಭಿನಯದ “ರಗಡ್’ ಚಿತ್ರವನ್ನು ನಿರ್ದೇಶಿಸಿದ್ದ, ಮಹೇಶ್ ಗೌಡ “ತ್ರಿಬಲ್ ರೈಡಿಂಗ್’ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಲವ್ ಕಂ ಕಾಮಿಡಿ ಜೊತೆಗೆ ಆ್ಯಕ್ಷನ್ ಹಾಗೂ ಸಸ್ಪೆನ್ಸ್ – ಥ್ರಿಲ್ಲರ್ ಕಥಾಹಂದರವಿರುವ “ತ್ರಿಬಲ್ ರೈಡಿಂಗ್’ ಚಿತ್ರವನ್ನು ರಾಮ್ ಗೋಪಾಲ್ ವೈ.ಎಂ ನಿರ್ಮಿಸುತ್ತಿದ್ದಾರೆ.
ಚಿತ್ರದ ಹಾಡುಗಳಿಗೆ ಸಾಯಿಕಾರ್ತಿಕ್ ಸಂಗೀತ ಸಂಯೋಜಿಸುತ್ತಿದ್ದು, ಜಯಂತ್‌ಕಯ್ಕಿಣಿ, ಡಾ. ವಿ.ನಾಗೇಂದ್ರ ಪ್ರಸಾದ್, ಚೇತನ್‌ಕುಮಾರ್ ಹಾಡುಗಳನ್ನು ಸಾಹಿತ್ಯ ರಚಿಸಿದ್ದಾರೆ. ರಾಜಶೇಖರ್, ಮಹೇಶ್ ಗೌಡ ಸಂಭಾಷಣೆ ಬರೆಯುತ್ತಿದ್ದಾರೆ.