ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ನೆನಪು ಕಾಣಿಕೆ “ಸುವರ್ಣ ಮೆಲುಕು’ ಸಂಚಿಕೆಯನ್ನು ಅನಾವರಣಗೊಳಿಸಿದರು.
Advertisement
ಆಂಜನೇಯ ಸಂಘವು ಯಕ್ಷಗಾನದ ಬೆಳವಣಿಗೆಗೆ ನಿರಂತರ ಕೆಲಸ ಮಾಡುತ್ತಿರುವುದನ್ನು ಶ್ಲಾಘಿಸಿದ ಅವರು, ಯಕ್ಷಗಾನ ಕಲಾ ಪ್ರಕಾರಗಳಲ್ಲಿ ಪ್ರಕಟವಾದಷ್ಟು ಪುಸ್ತಕಗಳು ಬೇರೆ ಯಾವುದೇ ಕಲೆಗಳಲ್ಲಿ ಪ್ರಕಟವಾಗಿಲ್ಲ. ಯಕ್ಷಗಾನ ಕಲೆ ಅಷ್ಟು ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಯಕ್ಷಕಲಾ ರಂಗದ ಕಾರ್ಯದರ್ಶಿ ನಾರಾಯಣ ಹೆಗ್ಡೆ ಮಾತನಾಡಿ, ಸಮರ್ಥ ನಾಯಕತ್ವ ಹೊಂದಿರುವುದರಿಂದ ಶ್ರೀ ಆಂಜನೇಯ ಯಕ್ಷಗಾನ ಸಂಘ ಬೆಳೆಯಲು ಸಾಧ್ಯವಾಗಿದೆ ಎಂದರು.
Related Articles
Advertisement
ಸಮ್ಮಾನಹಿರಿಯ ವೇಷಧಾರಿ ಗುಂಡಿ ಮಜಲು ಗೋಪಾಲ ಕೃಷ್ಣ ಭಟ್ ಅವರನ್ನು ಸಮ್ಮಾನಿಸಲಾಯಿತು. ಶೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಟಿ. ಪ್ರೇಮಲತಾ ರಾವ್ ಸನ್ಮಾನ ಪತ್ರ ವಾಚಿಸಿದರು. ಗುಂಡ್ಯಡ್ಕ ಈಶ್ವರ ಭಟ್ ಅಭಿನಂದನ ಮಾತುಗಳನ್ನಾಡಿ, ಗೋಪಾಲಕೃಷ್ಣ ಭಟ್ ಅವರು ತೆಂಕುತಿಟ್ಟಿನ ಪ್ರಬುದ್ಧ ಕಲಾವಿದರಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆದು ಪರಿಪೂರ್ಣರಾಗಿದ್ದಾರೆ ಎಂದರು.