Advertisement

ಪಿಎಸ್‌ಎಸ್‌ಎಲ್‌ವಿಗೆ ಸುವರ್ಣ ಸಂಭ್ರಮ

09:58 AM Dec 13, 2019 | sudhir |

ಇಸ್ರೋದ ಅತ್ಯಂತ ನಂಬಿಕೆಯ ಉಪಗ್ರಹ ಉಡಾವಣ ವಾಹಕ ಪಿಎಸ್‌ಎಲ್‌ವಿ. ಇದು 50ನೇ ಉಡಾವಣೆಯನ್ನು ಪೂರ್ಣಗೊಳಿಸುವುದರ ಮೂಲಕ ಸುವರ್ಣ ಸಂಭ್ರಮ ಆಚರಿಸಿಕೊಂಡಿದೆ. ಬುಧವಾರ ಭೂ ಸರ್ವೇಕ್ಷಣ ಉಪಗ್ರಹ ರಿಸ್ಯಾಟ್‌-2ಬಿಆರ್‌1 ಹಾಗೂ 9 ವಿದೇಶಿ ಉಪಗ್ರಹಗಳನ್ನು ಹೊತ್ತೂಯ್ದು ಕಕ್ಷೆಯಲ್ಲಿ ಕೂರಿಸುವುದರ ಮೂಲಕ ಇಸ್ರೋ ನಿರ್ಮಿತ ಪಿಎಸ್‌ಎಲ…ವಿ-ಸಿ48 ರಾಕೆಟ್‌ 50 ಉಡಾವಣೆಯನ್ನು ಪೂರ್ಣಗೊಳಿಸಿದೆ. ಕ‌ಳೆದ 2 ದಶಕಗಳಿಂದ ಉಪಗ್ರಹಗಳನ್ನು ಉಡಾವಣೆ ಮಾಡುತ್ತ ಬಂದಿರುವ ಪಿಎಸ್‌ಎಲ್‌ವಿ ಅಜೇಯ ಸಾಧನೆ ಮಾಡಿದೆ.

Advertisement

1993ರಲ್ಲಿ ಮೊದಲ ರಾಕೆಟ್‌
1990ರಲ್ಲಿ ಕೇರಳ ರಾಜ್ಯದ ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರದಲ್ಲಿ ಪಿಎಸ್‌ಎಲ್‌ವಿಯನ್ನು ತಯಾರಿಸುವ ಕಾರ್ಯ ಆರಂಭವಾಗಿತ್ತು. 1993ರಲ್ಲಿ ಮೊದಲ ಪಿಎಸ್‌ಎಲ್‌ವಿ ರಾಕೆಟ್‌ ಹಾರಿತ್ತು. ಆದರೆ ಅದು ಮೊದಲ ಯತ್ನದಲ್ಲೇ ವಿಫ‌ಲವಾಗಿತ್ತು. 1994ರಲ್ಲಿ ಎರಡನೇ ಬಾರಿಗೆ ಯಶಸ್ವಿಯಾಗಿತ್ತು. ಬಳಿಕ ಈವರೆಗೆ ಪಿಎಸ್‌ಎಲ್‌ವಿಯ ಐದು ಮಾದರಿಗಳನ್ನು ಇಸ್ರೋ ನಿರ್ಮಿಸಿದೆ. 450 ಮೀಟರ್‌ ಎತ್ತರ ಮತ್ತು 2.8 ಮೀ. ವ್ಯಾಸದೊಂದಿದೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಪಿಎಸ್‌ಎಲ್‌ವಿ ಪೂರ್ಣ ಹೆಸರೇನು ?
ಪಿಎಸ್‌ಎಲ್‌ವಿ ಎಂದರೆ ಪೋಲಾರ್‌ ಸ್ಯಾಟಲೈಟ್‌ ಲಾಂಚಿಂಗ್‌ ವೈಹಿಕಲ್‌ ಎಂದು ಅರ್ಥ. ಕೆಳಸ್ತರದ ಕಕ್ಷೆಗಳಿಗೆ ಉಪಗ್ರಹಗಳನ್ನು ಕೂರಿಸುವ ಕಾರ್ಯವನ್ನು ಇದು ಮಾಡುತ್ತದೆ. 1750 ಕೆ.ಜಿ.ವರೆಗಿನ ಉಪಗ್ರಹಗಳನ್ನು ಇದು ಕಕ್ಷೆಗೆ ಕೂರಿಸಬಲ್ಲದು.

200 ಕೋಟಿ ರೂ. ಉಡ್ಡಯನಕ್ಕೆ ಖರ್ಚು
ಪಿಎಸ್‌ಎಲ್‌ವಿಯೊಂದಿಗೆ ಉಪಗ್ರಹ ಉಡ್ಡಯನಕ್ಕೆ ಸುಮಾರು 130 ಕೋಟಿ. ರೂ.-200 ಕೋಟಿ. ರೂ.ಗಳ ಅಗತ್ಯ ಇದೆ. ಇಸ್ರೋ ತನ್ನ ಉಪಗ್ರಹವನ್ನು ಉಡಾವಣೆ ಮಾಡುವ ವೇಳೆ ಬೇರೆ ರಾಷ್ಟ್ರದ ಉಪಗ್ರಹಗಳನ್ನೂ ಹೊತ್ತು ನಭಕ್ಕೆ ನೆಗೆದರೆ ಈ ಖರ್ಚು ಹಂಚಿಕೆಯಾಗುತ್ತದೆ.

ಮೊದಲ ಪಿಎಸ್‌ಎಲ್‌ವಿ
ಪ್ರಥಮವಾಗಿ 1993ರಲ್ಲಿ ಪಿಎಸ್‌ಎಲ್‌ವಿ 1 ಅನ್ನು ಉಡಾವಣೆ ಮಾಡಲಾಯಿತು. ಶ್ರೀಹರಿಕೋಟದ ಸತೀಶ್‌ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಸೆ.20ರಂದುಐRಖ 1ಉಉಪಗ್ರಹವನ್ನು ನಭಕ್ಕೆ ಕಳುಹಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ತನ್ನ ಪ್ರಥಮ ಪ್ರಯತ್ನದಲ್ಲೇ ಇಸ್ರೋ ವಿಫ‌ಲವಾಗಿತ್ತು.

Advertisement

ಎರಡೇ ಪ್ರಯತ್ನ ವಿಫ‌ಲ
ಇಸ್ರೋದ ಪಿಎಸ್‌ಎಲ್‌ವಿಯ ಎರಡು ಪ್ರಯತ್ನಗಳು ಮಾತ್ರ ವಿಫ‌ಲವಾಗಿತ್ತು. 1993ರಲ್ಲಿ ಉಡಾವಣೆಗೊಂಡ PSLV ಈ1 PSLV ಎವಾಹಕ ವಿಫ‌ಲವಾಗಿತ್ತು. ಇದಾದ ಬಳಿಕ 2017ರಲ್ಲಿ ಒಂದು ಪ್ರಯತ್ನ ವಿಫ‌ಲವಾಗಿತ್ತು.

ಅತಿ ನಂಬಿಕಸ್ಥ ರಾಕೆಟ್‌
ಈಗ ಜಗತ್ತಿನ ವಿವಿಧ ರಾಷ್ಟ್ರಗಳು ತಮ್ಮ ಉಪಗ್ರಹಗಳ ಉಡಾವಣೆಗಾಗಿ ಇಸ್ರೋದ ಸಹಾಯವನ್ನು ಪಡೆದುಕೊಳ್ಳುತ್ತವೆ. ಭಾರತ ಅತಿ ಕಡಿಮೆ ದರಕ್ಕೆ ಉಪಗ್ರಹಗಳನ್ನು ಕಕ್ಷಗೆ ಕೂರಿಸುವ ಕೆಲಸ ಮಾಡುತ್ತಿದೆ. ಪಿಎಸ್‌ಎಲ್‌ವಿ ಮೂಲಕ ಉಪಗ್ರಹ ಉಡ್ಡಯನ ಶೇ.94ರಷ್ಟು ಯಶಸ್ವಿಯಾಗಿದೆ. 2017ರಲ್ಲಿ ಒಟ್ಟು 104 ಉಪಗ್ರಹಗಳನ್ನು ಏಕಕಾಲಕ್ಕೆ ನಭಕ್ಕೇರಿಸಿದ ಕೀರ್ತಿ ಇದರದ್ದು. ಚಂದ್ರಯಾನ 1, ಮಂಗಳಯಾನವೂ ಪಿಎಸ್‌ಎಲ್‌ವಿ ಮೂಲಕವೇ ನೆರವೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next